ನಾಗರಿಕರಲ್ಲಿ ಸಾಂಕ್ರಾಮಿಕ ರೋಗದ ಭೀತಿ

Team Udayavani, Aug 30, 2018, 6:00 AM IST

ಕುಂಬಳೆ: ಪೈವಳಿಕೆ ಗ್ರಾಮ ಪಂಚಾಯತ್‌ನ ಕುಡಾಲುಮೇರ್ಕಳ ಗ್ರಾಮದ ಮಂಡೆಕಾಪು ಎಂಬಲ್ಲಿ ಕೋಳಿ ತ್ಯಾಜ್ಯ ಮಲಿನದಿಂದ ಪರಿಸರದವರು ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸಬೇಕಾಗಿದೆ.ಸ್ಥಳೀಯ ಕೋಳಿ ಫಾರಂನ ತ್ಯಾಜ್ಯವನ್ನು ಹತ್ತಿರದ ಯಾರದೋ ಕಾಡಿನಲ್ಲಿ ಎಸೆಯಲಾಗುವುದು.ಇದು ರಾಶಿಬಿದ್ದು ಕೊಳೆತು ಗಬ್ಬು ವಾಸನೆ ಬರುತ್ತಿದೆ.

ಪೈವಳಿಕೆ ಗ್ರಾಮ ಪಂಚಾಯತ್‌ ಅಧ್ಯಕ್ಷರು ಪ್ರತಿನಿಧೀಕರಿಸುವ ಕುಡಾಲು ವಾರ್ಡಿಗೊಳಪಟ್ಟ ಪ್ರದೇಶವಾದರೂ ಈ ತನಕ ಇದರತ್ತ ಯಾರೂ ಗಮನ ಹರಿಸಿಲ್ಲವೆಂಬ ಆರೋಪ ಸ್ಥಳೀಯರದು.ಇದೇ ರೀತಿ ಮುಂದುವರಿದಲ್ಲಿ ಸುತ್ತಮುತ್ತ ಹಲವಾರು ಬಡವರ ಮನೆಗಳನ್ನು ಹೊಂದಿರುವ ಗುಡ್ಡಗಾಡು ಪ್ರದೇಶವಾದ ಈ ಸ್ಥಳ ಮಾರಕ ರೋಗದ ತಾಣವಾಗಲಿರುವ ಭಯ ಸ್ಥಳೀಯರಲ್ಲಿ ಕಾಡುತ್ತಿದೆ.

ಯಾರದೋ ಸ್ಥಳದಲ್ಲಿ ಅಕ್ರಮ ವಾಗಿ ಕೋಳಿತ್ಯಾಜ್ಯವನ್ನು ಲಂಗು ಲಗಾಮಿಲ್ಲದೆ ಎಸೆದು ವಾತಾವರಣ ವನ್ನು ಕೆಡಿಸಿ ಸಾಂಕ್ರಾಮಿಕ ರೋಗಕ್ಕೆ ಆಹ್ವಾನನೀಡುವ, ಕಾನೂನು ಉಲ್ಲಂಘಿಸುವವರ ವಿರುದ್ಧ ಆರೋಗ್ಯ ಇಲಾಖೆ ಮತ್ತು ಸ್ಥಳೀಯಾಡಳಿತ ಮುಂದಾಗಬೇಕೆಂಬುದಾಗಿ ಸ್ಥಳೀಯ ಮನೆಯವರು ಆಗ್ರಹಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ