ಮೂವರಲ್ಲೂ ಗೆಲ್ಲುವ ಭರವಸೆ

ಮೀಟ್‌ ದಿ ಪ್ರಸ್‌ ಕಾರ್ಯಕ್ರಮ: ಅಭ್ಯರ್ಥಿಗಳ ಮುಖಾಮುಖೀ

Team Udayavani, Oct 4, 2019, 5:11 AM IST

ಕುಂಬಳೆ : ನಾವು ಆಯ್ಕೆಯಾದಲ್ಲಿ ಹಿಂದುಳಿದ ಕಾಸರಗೋಡು ಜಿಲ್ಲೆಯ ಅಭಿವೃದ್ಧಿ, ಕನ್ನಡಿಗರ ಸಮಸ್ಯೆಗಳ ಕುರಿತು ವಿಧಾನ ಸಭೆಯಲ್ಲಿ ಧ್ವನಿ ಎತ್ತುವುದಾಗಿ ಮಂಜೇಶ್ವರ ಉಪಚುನಾವಣೆಯ ಎಡ ರಂಗ, ಎನ್‌ಡಿಎ, ಐಕ್ಯರಂಗದ ಅಭ್ಯರ್ಥಿಗಳು ತಮ್ಮ ಅಭಿಪ್ರಾಯಗಳನ್ನು ತೆರೆದಿಟ್ಟರು.

ಕಾಸರಗೋಡು ಪ್ರಸ್‌ಕ್ಲಬ್‌ನಲ್ಲಿ ಜರಗಿದ ಮೀಟ್‌ ದಿ ಪ್ರಸ್‌ ಕಾರ್ಯಕ್ರಮದಲ್ಲಿ ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು, ಎಲ್‌ಡಿಎಫ್‌ ಅಭ್ಯರ್ಥಿ ಶಂಕರ ರೈ ಮಾಸ್ತರ್‌ ಹಾಗೂ ಯುಡಿಎಫ್‌ ಅಭ್ಯರ್ಥಿ ಎಂ.ಸಿ. ಖಮರುದ್ದೀನ್‌ ಪಾಲ್ಗೊಂಡು ತಮ್ಮ ಮುಕ್ತ ಅಭಿಪ್ರಾಯಗಳನ್ನು ಪ್ರಕಟಿಸಿದರಲ್ಲದೆ ಮೂವರೂ ಗೆಲ್ಲುವ ವಿಶ್ವಾಸವನ್ನು ಪ್ರಕಟಿಸಿದರು.
ಮಂಜೇಶ್ವರ ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಸಮಸ್ಯೆ ಚರ್ಚೆಯಾಗಲಿದೆ. ಆರ್ಥಿಕ ಕುಂಠಿತ, ಬಡತನ, ಉದ್ಯೋಗ ನಷ್ಟ ಮೋದಿ ಆಡಳಿತದ ಫಲವಾಗಿದೆ.

ಅಭಿವೃದ್ಧಿಯಲ್ಲಿ ಮಂಜೇಶ್ವರ ದಲ್ಲಿ ಈ ತನಕ ಕ್ಯರಂಗದ ಆಡಳಿತ ಕಾಲದಲ್ಲಿ ಗ್ರಾಮೀಣ ರಸ್ತೆ, ಹೆದ್ದಾರಿ, ಬಂದರು, ನೂತನ ತಾಲೂಕು ಸಹಿತ ಹಲವಾರು ಯೋಜನೆ ಗಳನ್ನು ತರಲಾ ಗಿತ್ತು. ಯಾವತ್ತೂ ಅಕ್ರಮ ರಾಜಕೀಯ ವನ್ನು ಅಂಗೀಕರಿ ಸುವಂತಿಲ್ಲ. ಈ ಬಾರಿ ಕೇಂದ್ರ, ರಾಜ್ಯ ಸರಕಾರಗಳ ಜನವಿರೋಧಿ ನಿಲುವಿನ ವಿರುದ್ಧ ಜನರು ಮತ ಚಲಾಯಿಸ ಲಿದ್ದಾರೆ ಎಂದು ಎಂ.ಸಿ. ಖಮರುದ್ದೀನ್‌ ಹೇಳಿದರು.

ಜಿಲ್ಲೆಯ ಅಭಿವೃದ್ಧಿಯನ್ನು ಆಡಳಿತ ನಡೆಸಿದ ಉಭಯರಂಗಳೆರಡೂ ಸಂಪೂ ರ್ಣವಾಗಿ ನಿರ್ಲಕ್ಷಿಸಿದೆ. ಇಲ್ಲಿಂದ ಆಯ್ಕೆ ಯಾದ ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಪ್ರಾದೇಶಿಕ ಅಭಿವೃದ್ಧಿಯನ್ನು ಕೈಗೊಂಡಿಲ್ಲ. ಕೇಂದ್ರ ಸರಕಾರದ ಜನಪರ ಆಡಳಿತದಿಂದ ಎನ್‌ಡಿಎ ಈ ಬಾರಿ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ, ಯುಡಿಎಫ್‌ ಹಾಗೂ ಎಲ್‌ಡಿಎಫ್‌ ಪಕ್ಷಗಳ ಹೊಂದಾಣಿಕೆಯು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇದೆಲ್ಲವನ್ನು ಮೀರಿ ಎನ್‌ಡಿಎಗೆ ಗೆಲುವು ಲಭಿಸಲಿದೆ. ಈಗಾಗಲೇ ಮಂಜೇಶ್ವರದ ಪ್ರತಿಯೊಂದು ಬೂತ್‌ಗಳಲ್ಲಿ ಕಾರ್ಯಕರ್ತರು ತೆರಳಿ ಪ್ರಚಾರ ನಡೆಸುತ್ತಿರುವರು. ತಾನು ಗೆದ್ದಲ್ಲಿ ಕೇಂದ್ರ ಸರಕಾರದ ನೆರವಿನಿಂದ ವಿಶೇಷ ಯೋಜನೆಯನ್ನು ಜಾರಿಗೊಳಿಸುವುದಾಗಿ ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಹೇಳಿದರು.

ಮಂಜೇಶ್ವರದಲ್ಲಿ ಶಾಂತಿ, ಸಮಾಧಾನ, ಜಾತಿ, ಮತ ಸಾಮರಸ್ಯ ಕಾಪಾಡಲು ಪ್ರಯತ್ನಿಸಲಾಗುವುದು. ಮಂಜೇಶ್ವರದ ಅಭಿವೃದ್ಧಿಗೆ ಎಡರಂಗ ಸರಕಾರ ಆದ್ಯತೆ ನೀಡಿದೆ. ಕುಂಬಳೆಯಲ್ಲಿ ಐಎಚ್‌ಆರ್‌ಡಿ, ಪುತ್ತಿಗೆಯಲ್ಲಿ ಐಟಿಐ, ಮಂಜೇಶ್ವರದಲ್ಲಿ ಬಂದರು ನಿರ್ಮಾಣ ಇವೆಲ್ಲವೂ ಮಂಜೇಶ್ವರದ ಅಭಿವೃದ್ಧಿಗೆ ಪೂರಕವಾಗಿವೆ. ಎಡರಂಗ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ‌ ಯೋಜನೆಗೆ ವೇಗ ದೊರೆತಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ತನಕ ಕಾಮಗಾರಿ ಆರಂಭಿಸಿಲ್ಲವೆಂದರು. ಈಗಾಗಲೇ ಮಂಜೇಶ್ವರ ಕ್ಷೇತ್ರದಲ್ಲಿ ವೇಗದ ಪಕ್ಷದ ಪ್ರಚಾರ ಕೈಗೊಳ್ಳಲಾಗಿದೆ. ಅಭಿವೃದ್ಧಿಗಾಗಿ ಎಡರಂಗದ ಗೆಲುವು ಅಗತ್ಯವಿದೆ. ಶ್ರೀ ಶಬರಿಮಲೆಗೆ ವ್ರತಾನುಷ್ಠನಗಳಿಂದ ಯಾರು ಬೇಕಾದರೂ ತೆರಳಬಹುದು. ವಿಶ್ವಾಸಿಗಳಿಗೆ ಅಲ್ಲಿಯ ಆಚಾರಗಳನ್ನು ಪಾಲಿಸಿಕೊಂಡು ತೆರಳಬೇಕೆಂಬುದು ನನ್ನ ಅಭಿಪ್ರಾಯ ಎಂಬುದಾಗಿ ಎಲ್‌ಡಿಎಫ್‌ ಅಭ್ಯರ್ಥಿ ಎಂ. ಶಂಕರ ರೈ ಮಾಸ್ತರ್‌ ಹೇಳಿದರು. ಆದರೆ ಶಬರಿಮಲೆಯ ಆಚಾರ ಅನುಷ್ಠಾನ ಪಾಲಿಸಿಗೊಂಡು ತೆರಳಬೇಕೆಂಬುದು ನನ್ನ ಅಭಿಪ್ರಾಯ. ಅದನ್ನು ಪಾಲಿಸದೇ ತೆರಳುವುದು ತಪ್ಪು ಎಂಬುದು ನನ್ನ ಅಭಿಪ್ರಾಯವಾಗಿದೆ. ನ್ಯಾಯಾಲಯ ತೀರ್ಪು ಜ್ಯಾರಿಗೊಳಿಸಬೇಕಾಗಿರುವುದು ಸರಕಾರ ಎಂಬುದಾಗಿ ಅವರು ಹೇಳಿದರು. ಅಭ್ಯರ್ಥಿಗಳ ಮುಖಾಮುಖೀ ಕಾರ್ಯಕ್ರಮದಲ್ಲಿ ಪ್ರಸ್‌ಕ್ಲಬ್‌ ಅಧ್ಯಕ್ಷ ಟಿ.ಎ. ಶಾಫಿ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಪದ್ಮೇಶ್‌ ವಂದಿಸಿದರು.

ಸಮಸ್ಯೆಗೆ ಸ್ಪಂದನೆ
ಕನ್ನಡಿಗರ ಸಮಸ್ಯೆಗಳನ್ನು ಅರ್ಥೈಸಿ ಸದನದ ಮುಂದಿಡಲು ಪ್ರಯತ್ನಿಸುತ್ತೇನೆ ಎಂದು ಯುಡಿಎಫ್‌ ಅಭ್ಯರ್ಥಿ ಮುಸ್ಲಿ ಲೀಗ್‌ನ ಎಂಸಿ ಖಮರುದ್ದೀನ್‌ ಹೇಳಿದರು. ನನ್ನ ಮಾತೃ ಭಾಷೆಯಲ್ಲಿಯೇ ಕನ್ನಡಿಗರ ಸಮಸ್ಯೆಯನ್ನು ಸಿಎಂ ಮತ್ತು ಸಚಿವರಮುಂದಿಡುವುದಾಗಿ ಸಿಪಿಎಂ ಅಭ್ಯರ್ಥಿ ಶಂಕರ ರೈ ಮಾಸ್ತರ್‌ ಹೇಳಿದರು. ಕನ್ನಡ ಭಾಷಾ ಅಲ್ಪಸಂಖ್ಯಾಕರ ಸಮಸ್ಯೆಗಳನ್ನು ತಿಳಿದುಕೊಂಡು ಅವರಿಗಾಗಿ ವಿಧಾನ ಸಭೆಯಲ್ಲಿ ವಿಷಯವನ್ನು ಮಲಯಾಳದಲ್ಲಿ ಮಂಡಿಸಲು ನನ್ನಿಂದ ಸಾಧ್ಯ, ಕನ್ನಡಿಗರ ಸಮಸ್ಯೆಗಳನ್ನು ಅರ್ಥೈಸಿಕೊಂಡಿದ್ದೇನೆ. ಅದರಲ್ಲಿ ಉಭಯ ಒಕ್ಕೂಟಗಳು ವಿಫಲವಾಗಿವೆ. ಬಿಜೆಪಿ ಸದಾ ಕನ್ನಡಿಗರೊಂದಿಗಿದೆ ಎಂದು ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಭರವಸೆ ನೀಡಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ