“ಕಯ್ಯಾರರ ಬದುಕು-ಬರೆಹ ಆದರ್ಶಪ್ರಾಯವಾದುದು’

Team Udayavani, Jun 12, 2019, 6:10 AM IST

ಮುಳ್ಳೇರಿಯ: ದುಡಿಮೆಯೇ ಜೀವನವೆಂದು ಸಾರಿದ ಕವಿ ಕಯ್ಯಾರರ ಬದುಕು- ಬರೆಹಗಳು ಆದರ್ಶಮಾನ ವಾದುದು. ಯುವ ತಲೆಮಾರಿಗೆ ಮಾರ್ಗದರ್ಶಿಯಾಗಿರುವ ಕವಿಯ ಕಿವಿ ಮಾತುಗಳ ಸಾಕಾರತೆಗೆ ಭಾಷಾ ಪ್ರೇಮಿಗಳು ಬದ್ಧªರಾಗಿರಬೇಕು ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಳ್ಳೇರಿಯ ಘಟಕದ ಅಧ್ಯಕ್ಷ ಬಾಲಕೃಷ್ಣ ರೈ ಅವರು ಹೇಳಿದರು.

ಮುಳ್ಳೇರಿಯದಲ್ಲಿ ಕಾರ್ಯಾಚರಿಸು ತ್ತಿರುವ ಕವಿ ಕಯ್ಯಾರ ಕಿಞ್ಞಣ್ಣ ರೈ ಸ್ಮಾರಕ ಗ್ರಂಥಾಲಯದಲ್ಲಿ ಆಯೋಜಿಸಲಾದ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ 104ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊಸ ತಲೆಮಾರು ಓದು-ಬರಹಗಳ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಆದರೆ ಅರಿವಿನ ವಿಸ್ತಾರತೆಯ ಬೆಳವಣಿಗೆಗೆ ಪೂರಕವಾಗಿ ಪುಸ್ತಕ ಜ್ಞಾನಕ್ಕಿಂತ ಮಿಗಿಲಾದ ಜ್ಞಾನ ಸಮುದ್ರವನ್ನು ಬೇರೆಡೆಯಿಂದ ಗಳಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ದಿ| ಕಯ್ಯಾರರು ಹೊಂದಿದ್ದ ಭಾಷಾಭಿಮಾನದ ಮೇರು ವ್ಯಕ್ತಿತ್ವ ಅನುಸರಣೀಯ ಆಗಬೇಕಾದ ತುರ್ತು ಕಾರ್ಯವಾಗಿದೆ ಎಂದ ಅವರು ಕೃಷಿಕರಾಗಿ, ಆದರ್ಶ ಶಿಕ್ಷಕರಾಗಿ, ಕನ್ನಡ ಪರ ಹೋರಾಟಗಾರರಾಗಿ, ಸಾಹಿತ್ಯ ಪ್ರೇಮಿಯಾಗಿ ಬಹುಮುಖ ವ್ಯಕ್ತಿತ್ವದ ಕಯ್ನಾರ ಅಧ್ಯಯನ ಕೇಂದ್ರ ರಚನೆಗೆ ಕಾಸರಗೋಡಿನಲ್ಲಿ ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಸಮಾರಂಭವನ್ನು ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕಾರ್ಯದರ್ಶಿ, ಪತ್ರಕರ್ತ ಪುರುಷೋತ್ತಮ ಭಟ್‌ ಕೆ. ಉದ್ಘಾಟಿಸಿ, ಕವಿ ಕಯ್ನಾರರ ಕೃತಿಗಳ ಮರು ಓದಿನ ಜತೆಗೆ ಅಲ್ಲಿ ಬಿತ್ತಲಾದ ಬದುಕು-ಕಾವ್ಯ-ಹೋರಾಟಗಳ ಸಾಕಾರಕ್ಕೆ ಕಾಲ ಪಕ್ವಗೊಳ್ಳುತ್ತಿದೆ ಎಂದು ತಿಳಿಸಿದರು.
ಹಿರಿಯ ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಭಟ್‌ ಮುಳ್ಳೇರಿಯ, ಶಿಕ್ಷಕ ಮಹಾಲಿಂಗೇಶ್ವರ ಭಟ್‌, ಕೃಷ್ಣನ್‌, ಸತ್ಯಶಂಕರ ಭಟ್‌ ಮೊದಲಾದವರು ಮಾತನಡಿ, ಕವಿ ಕಯ್ಯಾರ ಬದುಕು-ಸಾಧನೆಗಳ ಬಗ್ಗೆ ನೆನಪಿಸಿದರು.
ಗ್ರಂಥಾಲಯದ ಕಾರ್ಯದರ್ಶಿ ಕೆ. ಮೋಹನನ್‌ ಮಾಸ್ತರ್‌ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಪಾಲಕಿ ಸಾವಿತ್ರಿ ಎಂ. ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ