ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ, ದಾಂಧಲೆ: ಇಗರ್ಜಿಗೆ ಹಾನಿ

ಮಂಜೇಶ್ವರ ಸಮುದ್ರ ತೀರದಲ್ಲಿ ಅಕ್ರಮ ಮರಳುಗಾರಿಕೆ ಪ್ರಕರಣ

Team Udayavani, Aug 20, 2019, 5:03 AM IST

19KSDC1B

ಮಂಜೇಶ್ವರ: ಸಮುದ್ರ ತೀರದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿರುವುದರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿರುವ ಮಹಿಳೆಗೆ ಮರಳು ಮಾಫಿಯಾ ತಂಡ ಹಲ್ಲೆ ಮಾಡಿ, ಮನೆ ಹಾಗೂ ಇಗರ್ಜಿಗೆ ಹಾನಿ ಮಾಡಿದೆ.

ಕಣ್ವತೀರ್ಥ ಕುಂಡುಕೊಳಕೆ ಕಡಪ್ಪುರದಲ್ಲಿ ಸುಮಾರು ಐದು ವರ್ಷಗಳಿಂದ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದು, ಇದರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆಂದು ಆರೋಪಿಸಿ ಕುಂಡುಕೊಳಕೆ ಫೆಲಿಕ್ಸ್‌ ಡಿ’ಸೋಜಾ ಅವರ ಪತ್ನಿ ರೀಟಾರಿಗೆ ಐವರ ತಂಡ ಮನೆಗೆ ನುಗ್ಗಿ ಹಲ್ಲೆ ಮಾಡಿದ ಬಗ್ಗೆ ದೂರು ನೀಡಲಾಗಿದೆ. ಆಹಾರ ಸೇವಿಸುತ್ತಿದ್ದಾಗ ನುಗ್ಗಿದ ಐವರ ಪೈಕಿ ಇಬ್ಬರು ರೀಟಾರಿಗೆ ಕಲ್ಲಿನಿಂದ ಗುದ್ದಿರುವುದಾಗಿ ಆರೋಪಿಸಲಾಗಿದೆ. ತಡೆಯಲು ಬಂದ ಪತಿ ಮೇಲೂ ತಂಡ ಹಲ್ಲೆ ಮಾಡಿದೆ.

ಬಳಿಕ ಮನೆಗೆ ಕಲ್ಲೆಸೆದು ಹಾನಿ ಮಾಡಲಾಗಿದೆ. ಗಾಯಗೊಂಡಿರುವ ರೀಟಾ ಅವರನ್ನು ತೊಕ್ಕೊಟಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ಆರೋಪಿ ಕುಂಡುಕೊಳಕೆಯ ಮಹಮ್ಮದ್‌ ಇಸ್ಮಾಯಿಲ್‌ ಯಾನೆ ನೌಫಲ್‌ನನ್ನು ಮಂಜೇಶ್ವರ ಪೊಲೀಸರು ಕುಂಬಳೆಯ ಆಸ್ಪತ್ರೆ ಯೊಂದರಿಂದ ಬಂಧಿಸಿದ್ದರು. ಬಳಿಕ ಅಸ್ವಸ್ಥನಾದ ಹಿನ್ನೆಲೆಯಲ್ಲಿ ದೇರಳ ಕಟ್ಟೆಯ ಆಸ್ಪತ್ರೆಗೆ ದಾಖಲಿಸಿ ಪೊಲೀಸ್‌ ಕಾವಲು ಹಾಕಲಾಗಿದೆ.

ಹಲ್ಲೆ ಸಂಬಂಧಿಸಿ ನೌಫಲ್‌, ಅಬ್ದುಲ್ಲ ಯಾನೆ ಮೋಣು ಮತ್ತು ಇತರ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ಇಗರ್ಜಿಗೆ ಕಲ್ಲು
ಸೋಮವಾರ ಮುಂಜಾನೆ 3 ಗಂಟೆಗೆ ಬೈಕಿನಲ್ಲಿ ಬಂದ ಇಬ್ಬರು ಮಂಜೇಶ್ವರ ಇನ್‌ಫಂಟ್‌ ಜೀಸಸ್‌ ಇಗರ್ಜಿಗೆ ಕಲ್ಲೆಸೆದಿದ್ದು,ಕಿಟಕಿಯ ಗಾಜು ಹಾನಿಗೀಡಾಗಿದೆ. ಇವರು ತಲವಾರು ಸಹಿತ ಬೈಕಿನಲ್ಲಿ ಸಂಚರಿಸುವುದು ಹಾಗೂ ಆವರಣ ಗೋಡೆ ಹಾರಿ ಇಗರ್ಜಿಗೆ ಕಲ್ಲೆಸೆಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಂಜೇಶ್ವರ ಎಸ್‌ಐ ಅನೂಪ್‌, ಎಎಸ್‌ಐ ರಾಜೀವನ್‌, ಕಾನ್‌ಸ್ಟೆಬಲ್‌ ಸುನಿಲ್‌ ಕುಮಾರ್‌ ಅವರು ಇಗರ್ಜಿಯ ಫಾದರ್‌ ವಿನೋದ್‌ ವಿನ್ಸೆಂಟ್‌ ಸಲ್ದಾನ ಅವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಎಎಸ್‌ಪಿ ಡಿ.ಶಿಲ್ಪಾ ನೇತೃತ್ವದಲ್ಲಿ ಪೊಲೀಸ್‌ ತಂಡ ಕುಂಡುಕೊಳಕೆಗೆ ಆಗಮಿಸಿದ್ದು, ಪರಿ ಸ್ಥಿತಿಯ ಬಗ್ಗೆ ನಿಗಾ ಇರಿಸಿದೆ.

ದಂಪತಿ ವಿರುದ್ಧವೂ ಹಲ್ಲೆ ದೂರು
ಈ ನಡುವೆ ತನ್ನ ತಾಯಿಯನ್ನು ಅಪಹಾಸ್ಯಗೈದ ಬಗ್ಗೆ ಪ್ರಶ್ನಿಸಲು ತೆರಳಿದಾಗ ರೀಟಾ ಸೌದೆಯಿಂದ ಹಲ್ಲೆ ಮಾಡಿರುವುದಾಗಿ ನೌಫಲ್‌ ನೀಡಿದ ದೂರಿನಂತೆ ರೀಟಾ ಹಾಗೂ ಫೆಲಿಕ್ಸ್‌ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಚರ್ಚ್‌ಗೆ ಕಲ್ಲೆಸೆತ ಖಂಡಿಸಿ ಸರ್ವಪಕ್ಷ ರ್ಯಾಲಿ
ಮಂಜೇಶ್ವರ: ಇಲ್ಲಿನ ಮಂಜೇಶ್ವರ ಮರ್ಸಿ ಅಮ್ಮನವರ ದೇವಾಲಯದ ಮೇಲಿನ ದಾಳಿಯನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಸೌಹಾರ್ದ ರ್ಯಾಲಿ ಹಾಗೂ ಪ್ರತಿಭಟನೆ ಜರಗಿತು.

ಮಂಜೇಶ್ವರದಿಂದ ಪ್ರಾರಂಭ ಗೊಂಡ ಜಾಥಾವು ಮಂಜೇಶ್ವರ ಚರ್ಚ್‌ ಪರಿಸರದಲ್ಲಿ ಸಮಾಪ್ತಿಗೊಂ ಡಿತು. ಮಂಜೇಶ್ವರ ಬ್ಲಾಕ್‌ ಪಂಚಾ ಯತ್‌ ಅಧ್ಯಕ್ಷ ಎ.ಕೆ.ಎಂ.ಅಶ್ರಫ್‌ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು, ಮಂಜೇ ಶ್ವ ರದ ಮಾಜಿ ಶಾಸಕ ಸಿ.ಎಚ್‌. ಕುಂಞಂಬು, ಕಾಸರಗೋಡು ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್‌ ವರ್ಕಾಡಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ. ಬಾಲಕೃಷ್ಣನ್‌ ಮಾಸ್ತರ್‌, ಬಿಜೆಪಿ ಮುಖಂಡ ಹರಿಶ್ಚಂದ್ರ ಮಂಜೇ ಶ್ವರ, ಸಿಪಿಐ ಮುಖಂಡ ಬಿ.ವಿ. ರಾಜನ್‌, ಯೂತ್‌ ಲೀಗ್‌ ಮುಖಂಡ ಸೈಫುಲ್ಲಾ ತಂಙಳ್‌, ಪಿಡಿಪಿ ಮುಖಂಡ ಎಸ್‌.ಎಂ.ಬಶೀರ್‌, ವೆಲ್ಫೆàರ್‌ ಪಾರ್ಟಿ ಮುಖಂಡ ಅಮ್ಮುಂಞಿ ಮುಂತಾದವರು ಮಾತನಾಡಿ ದರು. ಬ್ಲಾ. ಪಂ. ಸದಸ್ಯ ಕೆ.ಆರ್‌. ಜಯಾ ನಂದ ಸ್ವಾಗತಿಸಿದರು. ಮಂಜೇಶ್ವರ ಪಂ. ಅಧ್ಯಕ್ಷ ಅಬ್ದುಲ್‌ ಅಝೀಝ್ ವಂದಿಸಿದರು. ಚರ್ಚಿನ ಧರ್ಮ ಗುರು ರೆ| ಫಾ| ವಿನ್ಸೆಂಟ್‌ ವಿನೋದ್‌ ಸಲ್ದಾನ ಕೃತಜ್ಞತೆ ಸಲ್ಲಿಸಿದರು.

ಟಾಪ್ ನ್ಯೂಸ್

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.