ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ: ಓರೋಫೇಶಿಯಲ್‌ ಪೈನ್‌ ಕ್ಲಿನಿಕ್‌’ಗೆ ಚಾಲನೆ

Team Udayavani, Jun 12, 2019, 11:58 AM IST

ಉಳ್ಳಾಲ: ದಂತ ಚಿಕಿತ್ಸೆಯಲ್ಲಿ ಎ.ಬಿ. ಶೆಟ್ಟಿ ಕಾಲೇಜು ಸದಾ ಮುಂದಿದ್ದು, ಓರೋಫೇಶಿ ಯಲ್‌ ಪೆಯ್ನ ಕ್ಲಿನಿಕ್‌ ಸ್ಥಾಪಿಸುವ ಮೂಲಕ ಗುಣಮಟ್ಟದ ಚಿಕಿತ್ಸೆಗೆ ಇನ್ನಷ್ಟು ಬಲ ತುಂಬಲಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾ ಧಿಪತಿ ವಿಶಾಲ್‌ ಹೆಗ್ಡೆ ಅಭಿಪ್ರಾಯಪಟ್ಟರು.

ನಿಟ್ಟೆ ವಿ.ವಿ. ಅಧೀನದ ದೇರಳ ಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಓರಲ್‌ ಮೆಡಿಸಿನ್‌ ಮತ್ತು ರೇಡಿಯಾಲಜಿ ವಿಭಾಗದ ಆಶ್ರಯದಲ್ಲಿ ಆರಂಭ ಗೊಂಡ “ಓರೋಫೇಶಿಯಲ್‌ ಪೈನ್‌ ಕ್ಲಿನಿಕ್‌’ಗೆ ಮಂಗಳವಾರ ಚಾಲನೆ ನೀಡಿದ ಬಳಿಕ ವಿಂಶತಿ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ದಂತ ಕೌನ್ಸಿಲ್‌ ಅಧ್ಯಕ್ಷ ಡಾ| ರಾಜ್‌ ಕುಮಾರ್‌ ಅಲೆ ಶುಭ ಹಾರೈಸಿದರು. ಮಂಗಳೂರು ಎಂಸಿಒಡಿಎಸ್‌ ಓರಲ್‌ ಮೆಡಿಸಿನ್‌ ಮತ್ತು ರೇಡಿಯೋಲಜಿ ವಿಭಾಗದ ಮುಖ್ಯಸ್ಥ ಡಾ| ರವಿಕಿರಣ್‌ ಓಂಗೋಲೆ ಸಂಪನ್ಮೂಲ ವ್ಯಕ್ತಿಯಾಗಿದ್ದರು.ಓರೋಫೇಶಿಯಲ್‌ ನೋವು ರೋಗ ನಿರ್ಣಯದ ವಿಚಾರದಲ್ಲಿ ಡಾ| ಕುಮುದಾ ರಾವ್‌ ಮಾಹಿತಿ ನೀಡಿದರು. ಎ.ಬಿ. ಶೆಟ್ಟಿ ದಂತ ಕಾಲೇಜಿನ ಸ್ಥಾಪಕ ಡೀನ್‌ ಡಾ| ಎನ್‌. ಶ್ರೀಧರ್‌ ಶೆಟ್ಟಿ, ಕಾರ್ಯಕ್ರಮ ಸಹಸಂಯೋಜಕಿ ಡಾ| ಶ್ರುತಿ ಹೆಗ್ಡೆ ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ| ಯು.ಎಸ್‌. ಕೃಷ್ಣ ನಾಯಕ್‌ ಸ್ವಾಗತಿಸಿದರು. ಡಾ| ವಿದ್ಯಾ ಪರಿಚಯಿಸಿದರು. ಓರಲ್‌ ಮೆಡಿಸಿನ್‌ ಮತ್ತು ರೇಡಿಯೋಲಜಿ ವಿಭಾಗ ಮುಖ್ಯಸ್ಥ ಡಾ| ಸುಭಾಷ್‌ ಬಾಬು ವಂದಿಸಿದರು. ಡಾ| ಸುಪ್ರಿಯಾ ಭಟ್‌ ನಿರ್ವಹಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ