ಸುಂದರವಾಗಲಿ ನಮ್ಮ ನಗರ

Team Udayavani, Apr 14, 2019, 6:47 AM IST

ದಕ್ಷಿಣ ಕನ್ನಡ ಜಿ. ಪಂಚಾಯತ್‌ಗೆ ನಾಗರಿಕರನ್ನು ಸ್ವಾಗತಿಸಲು ನಗರದ ಕೊಟ್ಟಾರ- ಉರ್ವಸ್ಟೋರ್‌ ಪ್ರದೇಶದ ಮುಖ್ಯ ರಸ್ತೆಯ ಬದಿಯಲ್ಲಿ ಆಕರ್ಷಕ ಪ್ರವೇಶ ದ್ವಾರ ನಿರ್ಮಾಣಗೊಳ್ಳುತ್ತಿದೆ. ಇದನ್ನು 19 ವರ್ಷಗಳ ಮೊದಲೇ ಮಾಡಬಹುದಿತ್ತು. ಈಗಲಾದರೂ ಮಾಡುತ್ತಿದ್ದಾರೆ ಎಂದು ಸಂಭ್ರಮ ಪಡಬೇಕಿದೆ. ಯಾಕೆಂದರೆ ನಗರ ಸೌಂದರ್ಯ ವೃದ್ಧಿಸುವಲ್ಲಿ ಪ್ರವೇಶ ದ್ವಾರವೂ ಮುಖ್ಯವೆನಿಸುತ್ತದೆ.
ನಗರವನ್ನು ಆಕರ್ಷಕ ಗೊಳಿಸಬೇಕೆಂದಿದ್ದರೆ ಕೆಲವೊಂದು ವಿಚಾರಗಳತ್ತ ಗಮನಹರಿಸುವುದು ಬಹುಮುಖ್ಯ.

ವೆನಾÉಕ್‌ ಆಸ್ಪ‌ತ್ರೆಯಿಂದ ಸ್ಟೇಟ್‌ಬ್ಯಾಂಕ್‌ನ ಸಮೀಪದವರೆಗೆ, ರಸ್ತೆಯ ಒಂದು ಬದಿ ಹೆಚ್ಚಿನೆಡೆ ಸರಕಾರಿಗಳು ಕಚೇರಿಗಳು, ಆಸ್ಪತ್ರೆ ಮತ್ತು ಕಾಲೇಜುಗಳಿದ್ದು, ಮತ್ತೂಂದು ಕಡೆ ನೆಹರೂ ಮೈದಾನ ಮತ್ತು ಪುರಭವನವಿದೆ. ಪುರಭವನಕ್ಕೆ ಕೆಲವು ವರ್ಷಗಳ ಮೊದಲು ಸಂಯುಕ್ತ ಗೋಡೆಯನ್ನು (ಕಾಂಪೌಂಡ್‌ವಾಲ್‌) ನಿರ್ಮಿಸಿದ್ದು, ಅದು ಆಕರ್ಷಕವಾಗಿದೆ. ಅಂತಹ ಸಂಯುಕ್ತ ಗೋಡೆಯನ್ನು ಸರಕಾರಿ ಕಚೇರಿಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳಿರುವ ರಸ್ತೆ ಬದಿಯಲ್ಲೂ ಮಾಡುವತ್ತ ಚಿಂತನೆ ಹರಿಸಬೇಕಿದೆ.ಕ್ಲಾಕ್‌ ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತದವರೆಗೆ ಅತ್ಯುತ್ತಮವಾದ ರಸ್ತೆ ಮಾಡುವ ಕೆಲಸವೂ
ಪ್ರಗತಿಯಲ್ಲಿದೆ. ಒಟ್ಟಿನಲ್ಲಿ ಈ ರೀತಿ ಅಭಿವೃದ್ಧಿಪಡಿಸಿದಲ್ಲಿ, ಆ ಪ್ರದೇಶವು ತುಂಬಾ ಆಕರ್ಷಕವಾಗಿ ಕಾಣಲು ಸಾಧ್ಯವಿದೆ.

ಅದೇ ರೀತಿ, ನೆಹರೂ ಮೈದಾನದ ಕ್ರಿಕೆಟ್‌ ಮೈದಾನ ಪ್ರದೇಶಕ್ಕೆ ಮಾಡಿರುವಂತಹ ಕಬ್ಬಿಣದ ಬೇಲಿಯನ್ನು ಕಾಲ್ಚೆಂಡು ಮೈದಾನಕ್ಕೂ ಮಾಡಿದರೆ, ಆ ಪ್ರದೇಶವು ಮತ್ತೂ ಆಕರ್ಷಕವಾಗುವುದು. ಅಲ್ಲದೇ ಈ ತಡೆಗೋಡೆಗಳ ಬದಿಗಳಲ್ಲಿ ಗಿಡಗಳನ್ನು ನೆಟ್ಟರೆ ಸುಂದರವಾದ ವಾತಾವರಣ ಸೃಷ್ಟಿಯಾಗುವುದು. ನಮ್ಮ ಮನೆ ಆವರಣ ಸುಂದರವಾಗಿರುವಂತೆ ಎಲ್ಲರೂ ಬಯಸುತ್ತೇವೆ. ಅದೇ ರೀತಿ ನಗರದಲ್ಲಿರುವ ಎಲ್ಲ ಸರಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳ ಆವರಣವೂ ಸುಂದರ, ಆಕರ್ಷಕಗೊಳಿಸಿದರೆ ನಗರ ಸೌಂದರ್ಯ ವೃದ್ಧಿಯಾಗುವುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕಿದೆ.

-ವಿಶ್ವನಾಥ್‌ ಕೋಟೆಕಾರ್‌,ಮಂಗಳೂರು


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ