ಯೆಯ್ಯಾಡಿ: ಕಾರ್ ಗೆ ಟಿಪ್ಪರ್ ಡಿಕ್ಕಿ: ಶಾಲಾ ಬಸ್ ಹಿಂಭಾಗಕ್ಕೆ ನುಗ್ಗಿದ ಕಾರು
Team Udayavani, Oct 31, 2019, 9:19 AM IST
ಯೆಯ್ಯಾಡಿ: ಕಾರ್ ಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಕಾರು ನೇರವಾಗಿ ಸ್ಕೂಲ್ ಬಸ್ ನಡಿಗೆ ತೂರಿದ ಘಟನೆ ಯೆಯ್ಯಾಡಿಯಲ್ಲಿ ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಕಾರಿಗೆ ಗುದ್ದಿದೆ, ಪರಿಣಾಮವಾಗಿ ಕಾರು ನೇರವಾಗಿ ಅಲ್ಲೆ ನಿಂತಿದ್ದ ಶಾಲಾ ಬಸ್ ನಡಿಗೆ ತೂರಿ ಹೋಗಿದೆ.
ಕಾರಿನಲ್ಲಿದ್ದ ಇಬ್ಬರು ಪಾರಾಗಿದ್ದು, ಶಾಲಾ ಬಸ್ ನಲ್ಲಿ ಮಕ್ಕಳು ಇರಲಿಲ್ಲ ಎಂದು ತಿಳಿದುಬಂದಿದೆ.
ಮಂಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.