ಸೊಳ್ಳೆ ಉತ್ಪತ್ತಿ ತಾಣ ನಾಶಪಡಿಸಿ; ಡೆಂಗ್ಯೂ, ಮಲೇರಿಯಾ ಮುಕ್ತವಾಗಿಸೋಣ

Team Udayavani, Jul 24, 2019, 5:00 AM IST

ಮಹಾನಗರ: ಡೆಂಗ್ಯೂ, ಮಲೇರಿಯಾ ಜ್ವರ ಸೊಳ್ಳೆಗಳಿಂದ ಹರಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳುವುದು ಡೆಂಗ್ಯೂ, ಮಲೇರಿಯಾದಿಂದ ಪಾರಾಗಲು ಇರುವ ಏಕ ಮಾತ್ರ ಮಾರ್ಗೋ ಪಾಯ. ಮಲೇರಿಯಾ, ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆಯ ವತಿಯಿಂದ ಕ್ರಮಗಳು, ಅಭಿ ಯಾನ-ಜಾಗೃತಿ ಕಾರ್ಯಕ್ರಮಗಳು ಜಾರಿಯಲ್ಲಿವೆ. ಇವುಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಯಶಸ್ವಿ ಯಾಗಬೇಕಾದರೆ ಸಾರ್ವಜನಿಕ ಜಾಗೃತಿ, ಸಹಭಾಗಿತ್ವ ಅತ್ಯಗತ್ಯ.

ಪರಿಸರ ಸ್ವಚ್ಛವಾಗಿರಲಿ
ಡೆಂಗ್ಯೂ ಈಡಿಸ್‌ ಈಜಿಪ್ಟೆ ಸೊಳ್ಳೆಗಳು, ಅನಾಫಿಲಿಸಿಸ್‌ ಸೊಳ್ಳೆಗಳಿಂದ ಹರಡುತ್ತದೆ. ಇವೆರಡೂ ಶುದ್ಧ ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತವೆ. ಆದುದರಿಂದ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆ, ಪರಿಸರದಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಅವಕಾಶವಾಗದಂತೆ ಎಚ್ಚರ ವಹಿಸುವುದು ಅಗತ್ಯ.

ಮುಚ್ಚಳವಿಲ್ಲದ ಓವರ್‌ಹೆಡ್‌ ಟ್ಯಾಂಕ್‌, ಸಿಮೆಂಟ್‌ ಟ್ಯಾಂಕ್‌ಗಳು, ತೆಂಗಿನ ಚಿಪ್ಪು, ಕುಡಿದು ಬಿಸಾಡಿದ ಎಳನೀರು ಚಿಪ್ಪು ( ಬೊಂಡ), ಮನೆಯ ಸುತ್ತಮುತ್ತ ಎಸೆದ ಪ್ಲಾಸ್ಟಿಕ್‌, ಟಯರ್‌, ಹೂವಿನ ಕುಂಡ ಸೇರಿದಂತೆ ನೀರು ನಿಲ್ಲುವ ಅವಕಾಶವಿರುವ ಎಲ್ಲ ಪರಿಕರಗಳು ಸೊಳ್ಳೆಗಳ ಉತ್ಪತ್ತಿ ತಾಣಗಳು. ಆದುದರಿಂದ ಓವರ್‌ಹೆಡ್‌ ಟ್ಯಾಂಕ್‌ಗಳು, ಸಿಮೆಂಟ್‌ ಟ್ಯಾಂಕ್‌ಗಳನ್ನು ಭದ್ರವಾಗಿ ಮುಚ್ಚಿಡಬೇಕು. ಮನೆಯ ಸುತ್ತ ಎಸೆದ ಪ್ಲಾಸ್ಟಿಕ್‌, ಟಯರ್‌, ತೆಂಗಿನ ಚಿಪ್ಪು ಮುಂತಾದವುಗಳನ್ನು ತತ್‌ಕ್ಷಣ ವಿಲೇ ಮಾಡಬೇಕು. ಒಡೆದ ಪ್ಲಾಸ್ಟಿಕ್‌ ಬಕೆಟ್‌ಗಳು, ಪಾತ್ರೆಗಳನ್ನು ಕವುಚಿ ಹಾಕಬೇಕು. ಮನೆಯ ಒಳಗೆ, ಹೊರಗಡೆ ಇರುವ ಹೂವಿನ ಕುಂಡ, ಮನಿಪ್ಲಾಂಟ್‌ ಚಟ್ಟಿಗಳು, ಏರ್‌ಕೂಲರ್‌ಗಳಲ್ಲೂ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಗಳಿವೆ.

ಇವುಗಳ ನೀರನ್ನು ಪ್ರತಿ ವಾರ ಖಾಲಿ ಮಾಡಬೇಕು. ಕಟ್ಟಡ ನಿರ್ಮಾಣ ತಾಣಗಳಲ್ಲಿ ನೀರು ನಿಲ್ಲಲು ಅವಕಾಶ ನೀಡಬಾರದು. ಅಂಗೈ ಅಗ ಲದ ಜಾಗದಲ್ಲಿ ಸ್ವಲ್ಪ ನೀರಿದ್ದರೂ ಸಾಕು ಅಲ್ಲಿ ಸೊಳ್ಳೆಗಳು ಉತ್ಪತಿಯಾಗುತ್ತವೆ. ಮನೆಯ ಆವರಣದಲ್ಲಿ ಗೇಟ್‌ಗೆ ಹಾಕಿರುವ ಬಿದಿರಿನ ತುಂಡುಗಳಲ್ಲಿ, ಚಪ್ಪಲಿಗಳಲ್ಲಿ ನಿಂತ ನೀರಿನಲ್ಲಿ ಲಾರ್ವಾಗಳು ಪತ್ತೆಯಾಗಿರುವ ಪ್ರಕರಣಗಳಿವೆ.

ಜಾಗೃತಿ ಅಗತ್ಯ
ನಗರದಲ್ಲಿ ಎಲ್ಲ ಮನೆಗಳು, ಅಂಗಡಿ, ಉದ್ದಿಮೆ ಸಂಸ್ಥೆಗಳು, ಮಾರುಕಟ್ಟೆ, ಅಪಾರ್ಟ್‌ಮೆಂಟ್‌, ಫ್ಲಾಟ್‌, ಸರಕಾರಿ ಕಟ್ಟಡ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ತಪಾ ಸಣೆ ನಡೆಸುವಂತೆ ಹಾಗೂ ಯಾವುದೇ ಸ್ಥಳ ದಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾ ಗಿರುವುದು ಕಂಡುಬಂದರೆ ಅಂತಹ ಪ್ರಕರಣಗಳಲ್ಲಿ ಸ್ಥಳದಲ್ಲೇ ದೊಡ್ಡ ಮೊತ್ತದ ದಂಡ ವಿಧಿಸಿ ವಸೂಲಿ ಮಾಡುವಂತೆ ದ.ಕ. ಜಿಲ್ಲಾಧಿಕಾರಿಯವರು ಈಗಾಗಲೇ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿ ದ್ದಾರೆ. ಇದರಂತೆ ಪಾಲಿಕೆಯ ಆರೋಗ್ಯ ಇಲಾಖೆಯ ಸಿಬಂದಿ ಕಾರ್ಯಾಚರಣೆ ತೀವ್ರ ಗತಿಯಲ್ಲಿ ಕೈಗೊಂಡಿದ್ದು, ಈಗಾಗಲೇ ಒಂದು ಲಕ್ಷ ರೂ.ಗೂ ಅಧಿಕ ದಂಡ ವಸೂಲಿ ಮಾಡಲಾ ಗಿದೆ. ದಂಡ ವಸೂಲಿ, ಪಾವತಿ ಸೊಳ್ಳೆಗಳ ಉತ್ಪತ್ತಿ ತಾಣಗಳ ನಾಶಕ್ಕೆ ಪೂರ್ಣ ಪ್ರಮಾ ಣದ ಪರಿಹಾರವಾಗಲಾರದು. ಇದು ಒಂದು ತಾತ್ಕಾಲಿಕ ಪರಿಹಾರವಾಗಬಹುದು. ಸಾರ್ವಜನಿಕರಲ್ಲಿ ಸ್ವಯಂ ಜಾಗೃತಿ ಮೂಡ ಬೇಕು. ಸಾರ್ವಜನಿಕರ ಸಹಭಾಗಿತ್ವ ಇದ್ದಾಗ ಮಾತ್ರ ಇದರಲ್ಲಿ ಯಶಸ್ಸು ಕಾಣಲು ಸಾಧ್ಯವಿ ಲ್ಲ. ಸಾರ್ವಜನಿಕರು ತಮ್ಮ ಮನೆ, ಪ್ರದೇಶ ಗಳಲ್ಲಿ ಸೊಳ್ಳೆ ಉತ್ಪತಿ ತಾಣಗಳು ಇರದಂತೆ ನೋಡಿಕೊಳ್ಳಬೇಕು. ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.

ಸೊಳ್ಳೆಗಳಿಂದ ರಕ್ಷಣೆಗೆ ಹೀಗೆ ಮಾಡಿ
ಡೆಂಗ್ಯೂ ಹರಡುವ ಸೊಳ್ಳೆ ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಮಲೇರಿಯಾ ಹರಡುವ ಸೊಳ್ಳೆ ರಾತ್ರಿ ಸಮಯದಲ್ಲಿ ಕಚ್ಚುತ್ತವೆ. ಔಷಧ ಲೇಪಿಸಿದ ಸೊಳ್ಳೆ ಪರದೆಗಳ ಬಳಕೆ, ಮಕ್ಕಳು/ ವೃದ್ಧರು ಹಗಲು ಮಲಗುವಾಗಲೂ ಸೊಳ್ಳೆ ಪರದೆ ಉಪಯೋಗಿಸುವುದು, ಸೊಳ್ಳೆ ಪ್ರವೇಶಿಸದಂತೆ ಸಂಜೆ ಹೊತ್ತು ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚುವುದು ಅಥವಾ ಜಾಲರಿಗಳನ್ನು ಅಳವಡಿಸುವುದು ಮುಂತಾದ ಕ್ರಮಗಳನ್ನು ಅನುಸರಿಸುವ ಮೂಲಕ ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು. ಬಾವಿ/ಕೆರೆಗಳಲ್ಲಿ ಗಪ್ಪಿ ಮೀನುಗಳನ್ನು ಸಾಕುವ ಮೂಲಕ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಬಹುದು.

ಸೊಳ್ಳೆ ಉತ್ಪತ್ತಿ ತಾಣಗಳು: ಸಾರ್ವಜನಿಕರ ದೂರು
ನಗರದಲ್ಲಿ ವ್ಯಾಪಕವಾಗುತ್ತಿರುವ ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಅಧಿಕಾರಿಗಳ ಜತೆಗೆ ನಗರವಾಸಿಗಳು ಕೂಡ ತಮ್ಮ ಜವಾಬ್ದಾರಿ ಮೆರೆಯುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ, ಅವುಗಳಿಗೆ ಅಧಿಕಾರಿಗಳಿಂದ ಸೂಕ್ತ ರೀತಿಯಲ್ಲಿ ಸ್ಪಂದಿಸಲು ನೆರವಾಗುವ ಪ್ರಯತ್ನವಿದು. ಜನರು ತಮ್ಮ ಮನೆ ಸುತ್ತ-ಮುತ್ತ ಕಂಡುಬಂದಿರುವ ಸಮಸ್ಯೆಗಳನ್ನು ಫೋಟೋ ಸಮೇತ ಪತ್ರಿಕೆಗೆ ಕಳುಹಿಸಿದ್ದು, ಅದಕ್ಕೆ ತುರ್ತು ಸ್ಪಂದಿಸಬೇಕೆಂಬುದು ಉದಯವಾಣಿ ಸುದಿನ ಕಳಕಳಿಯಾಗಿದೆ.

ಸಮಸ್ಯೆ ಇದ್ದರೆ ನಮಗೆ ತಿಳಿಸಿ
ನಗರದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ “ಸುದಿನ’ ಕೂಡ ಜಾಗೃತಿ ಮೂಡಿಸುವ ಜತೆಗೆ ನಗರವಾಸಿಗಳಿಗೆ ತಮ್ಮ ಸಮಸ್ಯೆ-ಪರಿಹಾರ ಮಾರ್ಗೋ ಪಾಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ವೇದಿಕೆ ನೀಡುತ್ತಿದೆ. ಆ ಮೂಲಕ, ಜನರು ಕೂಡ ಡೆಂಗ್ಯೂ ವ್ಯಾಪಕವಾಗುವುದನ್ನು ತಡೆಗಟ್ಟುವುದಕ್ಕೆ ತಮ್ಮ ಜವಾಬ್ದಾರಿ ಮೆರೆಯುವುದು ಆವಶ್ಯಕ. ನಗರದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಆ ಬಗ್ಗೆ ಸೂಕ್ತ ವಿವರದೊಂದಿಗೆ ಫೋಟೋ ತೆಗೆದು ಕಳುಹಿಸಬಹುದು. ಅಲ್ಲದೆ ಕೆಳ ಹಂತದ ಅಧಿಕಾರಿಗಳಿಂದ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆಯದಿದ್ದರೂ ಆ ಬಗ್ಗೆ ಗಮನಕ್ಕೆ ತಂದರೆ ಉನ್ನತ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಲಾಗುವುದು.
9900567000

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ