ಪೊಳಲಿ ಸರಕಾರಿ ಶಾಲೆಗೆ “ಬಿರುವೆರ್‌ ಕುಡ್ಲ’ದಿಂದ ಉಚಿತ ಮಳೆಕೊಯ್ಲು


Team Udayavani, Jul 13, 2019, 5:00 AM IST

f-4

ಮಹಾನಗರ: ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಂಘ-ಸಂಸ್ಥೆಗಳು ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ, ಲೇಖನ ಸಾಮಗ್ರಿ, ಸಮವಸ್ತ್ರ ವಿತರಿಸುವುದು ಸಾಮಾನ್ಯ. ಆದರೆ ದೇಶದೆಲ್ಲೆಡೆ ನೀರಿನ ಸಂರಕ್ಷಣೆ ಬಗ್ಗೆ ಅದರಲ್ಲಿಯೂ ಮಳೆ ನೀರಿನ ಸದ್ಬಳಕೆ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರಬೇಕಾದರೆ, ಗ್ರಾಮೀಣ ಪ್ರದೇಶವೊಂದರಲ್ಲಿ ಸರಕಾರಿ ಶಾಲೆಗೆ ಸಂಘಟನೆಯೊಂದು ಉಚಿತವಾಗಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸುವ ಮೂಲಕ ಇಡೀ ಜಿಲ್ಲೆಗೆ ಮಾದರಿ ಎನಿಸಿಕೊಂಡಿದೆ.

ಅಷ್ಟೇಅಲ್ಲ; ಆ ಶಾಲೆಯ ಮಕ್ಕಳು, ಅಧ್ಯಾಪಕರು ಹಾಗೂ ಊರಿನ ಜನರಲ್ಲಿ ಮಳೆ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಆ ಊರಿನವರನ್ನೇ ಮಳೆಕೊಯ್ಲು ಅಳವಡಿಸುವತ್ತ ಉತ್ತೇಜಿಸಿದೆ. ವಿಶೇಷ ಅಂದರೆ, ಒಂದು ಸರಕಾರಿ ಶಾಲೆಯಲ್ಲಿ ಆಯ್ಕೆ ಮಾಡಿಕೊಂಡು ಅಲ್ಲಿ ತಮ್ಮ ಸಂಘಟನೆಯ ಖರ್ಚು-ವೆಚ್ಚದಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳುವುದಕ್ಕೆ ಪ್ರೇರಣೆಯಾಗಿದ್ದು, “ಉದಯವಾಣಿ’ ಒಂದು ತಿಂಗಳಿನಿಂದ ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನ. ಆ ಮೂಲಕ, ಉದಯವಾಣಿಯ ಈ ಅಭಿಯಾನವು ಇದೀಗ ಮತ್ತಷ್ಟು ಯಶಸ್ಸು ಸಾಧಿಸುವ ಜತೆಗೆ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜನರನ್ನು ಮಳೆ ಕೊಯ್ಲಿನತ್ತ ಬಹಳ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸುವುದಕ್ಕೆ ಸಹಕಾರಿಯಾಗುತ್ತಿರುವುದು ಗಮನಾರ್ಹ.

“ಮನೆಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಣೆಗೊಂಡ ಫ್ರೆಂಡ್ಸ್‌ ಬಲ್ಲಾಳ್‌ಬಾಗ್‌, ಬಿರುವೆರ್‌ ಕುಡ್ಲ ಕೇಂದ್ರ ಸಮಿತಿ, ಬಿರುವೆರ್‌ ಕುಡ್ಲ ಮಹಿಳಾ ವೇದಿಕೆ ಮತ್ತು ಬಿರುವೆರ್‌ ಕುಡ್ಲ ಪೊಳಲಿ ಘಟಕ (ನಿಯೋಜಿತ) ಸಂಘಟನೆಗಳ ಸದಸ್ಯರು ಸೇರಿಕೊಂಡು ಪೊಳಲಿ ಸರಕಾರಿ ಪ್ರೌಢಶಾಲೆಗೆ ಮಳೆಕೊಯ್ಲು ವ್ಯವಸ್ಥೆಯನ್ನು ಉಚಿತವಾಗಿ ಅಳವಡಿಸಿದ್ದಾರೆ. ಶನಿವಾರ ಈ ವ್ಯವಸ್ಥೆಯನ್ನು ಶಾಲೆಯವರಿಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಲಿದೆ.

“ಉದಯವಾಣಿ’ ನಮಗೆ ಪ್ರೇರಣೆ
ಬಿರುವೆರ್‌ ಕುಡ್ಲ ಮಹಿಳಾ ವೇದಿಕೆಯ ಮೂವರು ಸದಸ್ಯರು ಜೂ. 19ರಂದು ಜಿಲ್ಲಾ ಪಂಚಾಯತ್‌ನಲ್ಲಿ ಉದಯವಾಣಿ ನಡೆಸಿದ್ದ ಮಳೆಕೊಯ್ಲು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ ಜಲತಜ್ಞ ಶ್ರೀಪಡ್ರೆಯವರು ನೀಡಿದ್ದ ಮಾಹಿತಿ ಪಡೆದುಕೊಂಡು ಶಾಲೆಯಲ್ಲಿ ಅದನ್ನು ಅಳವಡಿಸುವ ನಿರ್ಧಾರ ತೆಗೆದುಕೊಂಡರು. ಆ ಮೂಲಕ, ಯಾವುದಾದರೊಂದು ಸರಕಾರಿ ಶಾಲೆಯ ಮಕ್ಕಳಲ್ಲಿ ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವ ಜತೆಗೆ ಆ ಶಾಲೆಗೆ ಭವಿಷ್ಯದಲ್ಲಿ ಉದ್ಭವಿಸಬಹುದಾದ ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರ ಕಲ್ಪಿಸುವ ಯೋಚನೆ ಮಾಡಿದ್ದರು.

20 ಸಾವಿರ ರೂ. ಖರ್ಚು
ಈ ಶಾಲೆಯಲ್ಲಿ ಮಳೆಕೊಯ್ಲು ಅಳವಡಿಸಲು ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲಾºವಿ ಅವರ ಮಾರ್ಗದರ್ಶನ ಪಡೆದುಕೊಂಡು, ಸ್ಥಳೀಯ ಪ್ಲಂಬರ್‌ಗಳ ಮೂಲಕ ಅಳವಡಿಕೆ ಕಾರ್ಯ ನಡೆದಿದೆ. ಪೊಳಲಿ ಶಾಲೆಯ ಬಾವಿ ವ್ಯವಸ್ಥೆ ಇರುವುದರಿಂದ ಕೇವಲ ನಾಲ್ಕು ದಿನಗಳಲ್ಲಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಲಾಗಿದೆ. ಶಾಲೆಯ ಛಾವಣಿಗೆ ಪೈಪ್‌ ಅಳವಡಿಸಿ ಆ ನೀರನ್ನು ಬಾವಿಗೆ ಬೀಳುವಂತೆ ಮಾಡಲಾಗಿದೆ. ಮಳೆ ನೀರನ್ನು ಬಾವಿಗೆ ಶುದ್ಧೀಕರಿಸಿ ಹರಿದು ಹೋಗುವಂತೆ ಮಾಡಲು ಫಿಲ್ಟರ್‌ ಕೂಡ ಅಳವಡಿಸಲಾಗಿದೆ. ಒಟ್ಟಾರೆ, ಈ ಶಾಲೆಗೆ ಮಳೆಕೊಯ್ಲು ಮಾಡುವುದಕ್ಕೆ ಸುಮಾರು 20 ಸಾವಿರ ರೂ. ಖರ್ಚಾಗಿದೆ ಎಂದು ಬಿರುವೆರ್‌ ಕುಡ್ಲ ಮಹಿಳಾ ವೇದಿಕೆ ಅಧ್ಯಕ್ಷೆ ವಿದ್ಯಾ ರಾಕೇಶ್‌ “ಉದಯವಾಣಿ’ಯ “ಸುದಿನ’ಕ್ಕೆ ತಿಳಿಸಿದ್ದಾರೆ.

ಇಂದು ಶಾಲೆಗೆ ಹಸ್ತಾಂತರ
ಮಳೆಕೊಯ್ಲು ಅಳವಡಿಕೆ ಕಾಮಗಾರಿ ಈಗಾಗಲೇ ಮುಕ್ತಾಯಗೊಂಡಿದ್ದು, ಶನಿವಾರ ಸಂಘಟನೆಗಳ ಪದಾಧಿಕಾರಿಗಳು ಶಾಲೆಗೆ ತಮ್ಮ ಸೇವಾಕಾರ್ಯದಡಿ ಮಾಡಿರುವ ಈ ವಿಭಿನ್ನ ಮಾದರಿ ಕೊಡುಗೆಯನ್ನು ಶಾಲೆಯವರಿಗೆ ಹಸ್ತಾಂತರಿಸಲಿದ್ದಾರೆ.

ಉದಯವಾಣಿ ಸಹಯೋಗದಲ್ಲಿ ಪುತ್ತೂರಿನಲ್ಲಿ ಮಳೆಕೊಯ್ಲು
ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಣೆಗೊಂಡು ಇದೀಗ ಪುತ್ತೂರಿನ ಮಾಯ್‌ ದೇ ದೇವುಸ್‌ ಚರ್ಚ್‌, ಐಸಿವೈಎಂ ಘಟಕವು ತಮ್ಮ ಚರ್ಚ್‌ ವ್ಯಾಪ್ತಿಯ ಜನರಿಗೆ ಮಳೆಕೊಯ್ಲು ಬಗ್ಗೆ ಅರಿವು ಮೂಡಿಸಲು ತೀರ್ಮಾನಿಸಿದೆ. ಜತೆಗೆ, ಚರ್ಚ್‌ ಆವರಣದಲ್ಲಿಯೂ ಮಳೆಕೊಯ್ಲು ವ್ಯವಸ್ಥೆ ಅಳವಡಿಸುವ ಮೂಲಕ ಬೇರೆಯವರಿಗೆ ಮಾದರಿಯಾಗಲು ನಿರ್ಧರಿಸಿದೆ. ಆ ಪ್ರಕಾರ, ಉದಯವಾಣಿ ಸಹಯೋಗದೊಂದಿಗೆ ಮಳೆನೀರು ಕೊಯ್ಲು ಮಾಹಿತಿ ಕಾರ್ಯಕ್ರಮವನ್ನು ಚರ್ಚ್‌ ಸಭಾಂಗಣದಲ್ಲಿ ಜು. 14ರಂದು ಬೆಳಗ್ಗೆ 9.30ಕ್ಕೆ ಹಮ್ಮಿಕೊಂಡಿದೆ.

ನೀರಿನ ಸಂರಕ್ಷಣೆಗಾಗಿ ಎಲ್ಲ ಚರ್ಚ್‌ಗಳಲ್ಲಿ “ಜಲಬಂಧನ್‌’ ಮಾಡಬೇಕು ಎಂಬ ಮಂಗಳೂರು ಬಿಷಪ್‌ ರೆ| ಡಾ| ಪೀಟರ್‌ ಪೌಲ್‌ ಸಲ್ಡಾನ್ಹಾ ಅವರ ಮನವಿಯ ಮೇರೆಗೆ ಮತ್ತು ಉದಯವಾಣಿಯ ಮಳೆಕೊಯ್ಲು ಅಭಿಯಾನದ ಪ್ರೇರಣೆಯೊಂದಿಗೆ ಈ ಕಾರ್ಯಕ್ರಮವನ್ನು ಪುತ್ತೂರಿನ ಜನತೆಗಾಗಿ ಆಯೋಜಿಸಲಾಗಿದೆ ಎಂದು ಚರ್ಚ್‌ ಧರ್ಮಗುರು ವಂ| ಆಲ್ಫೆ†ಡ್‌ ಜೆ. ಪಿಂಟೋ ಅವರು “ಸುದಿನ’ಕ್ಕೆ ತಿಳಿಸಿದ್ದಾರೆ. ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲಾºವಿ ಮಾಹಿತಿ ನೀಡಲಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದಲ್ಲಿ ಈ ವರ್ಷವನ್ನು ಯುವಜನತೆಯ ವರ್ಷ ಎಂದು ಆಚರಿಸಲಾಗುತ್ತಿದ್ದು, ಯುವ ಜನತೆಗೆ ಜಾಗೃತಿ ಮೂಡಿಸಬೇಕೆಂಬ ಉದ್ದೇಶ ಈ ನಮ್ಮ ಮಳೆಕೊಯ್ಲು ಕಾರ್ಯಕ್ರಮದಲ್ಲಿದೆ ಎಂದು ಐಸಿವೈಎಂ ಘಟಕಾಧ್ಯಕ್ಷ ಮಹಿಮ್‌ ಮೊಂತೆರೋ ತಿಳಿಸಿದ್ದಾರೆ.

 200 ಮಕ್ಕಳಿಗೆ ಸಹಕಾರಿ
ಸಮಾಜದಲ್ಲಿ ಅಶಕ್ತರಿಗೆ ನೆರವು ನೀಡುವುದು, ಸಾಮೂಹಿಕ ವಿವಾಹ ಏರ್ಪ ಡಿಸುವಂತಹ ಸಾಮಾಜಿಕ ಸೇವಾ ಚಟುವಟಿಕೆ ಗಳಲ್ಲಿ ನಾವು ಸಂಘ ಟನೆ ಮುಖಾಂತರ ತೊಡಗಿಸಿ ಕೊಂಡಿದ್ದೇವೆ. ಇದೀಗ ಮಳೆ ಕೊಯ್ಲು ಅಳವಡಿಕೆ ಮೂಲಕ ಪೊಳಲಿ ಸರಕಾರಿ ಶಾಲೆಯಲ್ಲಿ200ಕ್ಕೂ ಹೆಚ್ಚು ಮಕ್ಕಳಿರುವುದ ರಿಂದ ಅವರಿಗೆಲ್ಲ ಮಳೆ ನೀರಿನ ಸದ್ಬಳಕೆಯ ಜತೆಗೆ ಜಲ ಸಂರಕ್ಷಣೆಯತ್ತ ಪ್ರತಿಯೊಬ್ಬರಿಗೂ ಇದು ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ.
 - ಕಿಶೋರ್‌ ಬಾಬು,
ಬಿರುವೆರ್‌ ಕುಡ್ಲ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ

ನೀವು ಅಭಿಪ್ರಾಯ ಹಂಚಿಕೊಳ್ಳಿ
ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಒಂದು ತಿಂಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಓದುಗರು ಕೂಡ ಈ ಯಶಸ್ವಿ ಅಭಿಯಾನದ ಕುರಿತಂತೆ ತಮ್ಮ ಅಭಿಪ್ರಾಯ, ಅನಿಸಿಕೆ ಅಥವಾ ಸಲಹೆಗಳನ್ನು ಪತ್ರಿಕೆ ಜತೆಗೆ ಹಂಚಿಕೊಳ್ಳಬಹುದು. ಆ ಮೂಲಕ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವುದಕ್ಕೆ ಉತ್ತೇಜನ ನೀಡಬಹುದು. ಆಸಕ್ತರು ತಮ್ಮ ಹೆಸರು, ಸ್ಥಳದ ಜತೆಗೆ ಸಂಕ್ಷಿಪ್ತ ಬರೆಹಗಳನ್ನು ನಿಮ್ಮ ಫೋಟೋ ಸಹಿತ ನಮಗೆ ಕಳುಹಿಸಬಹುದು. ಸೂಕ್ತ ಅಭಿಪ್ರಾಯ-ಸಲಹೆಗಳನ್ನು ಪ್ರಕಟಿಸಲಾಗುವುದು.
9900567000

ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ
 ಪ್ರೇರಣೆ ನೀಡಿದ ಅಭಿಯಾನ
“ಉದಯವಾಣಿ’ ಪತ್ರಿಕೆಯಲ್ಲಿ ಮಳೆಕೊಯ್ಲು ಅಭಿಯಾನದ ಬಗ್ಗೆ ನಿರಂತರವಾಗಿ ಮಾಹಿತಿ ಪ್ರಕಟಿಸಿ ಜನರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದ ಕೆಲಸ ಶ್ಲಾಘನೀಯ. ಈಗಾಗಲೇ ನೀರಿನ ಅಭಾವದಿಂದ ಕಂಗಾಲಾಗಿರುವವರಿಗೆ ಜಲ ಜಾಗೃತಿಯ ಜತೆಗೆ ಉಪಯುಕ್ತ ಮಾಹಿತಿ ನೀಡಿ, ಮಳೆಕೊಯ್ಲು ಬಗ್ಗೆ ಜನರಲ್ಲಿ ವಿಶೇಷ ಆಸಕ್ತಿ ಮೂಡಿಸಿದೆ. ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನಗಳನ್ನು ನೋಡಿದ ಮೇಲೆ ನನ್ನ ಹಳ್ಳಿಯಲ್ಲಿಯೂ ಇಂತಹ ಕಾರ್ಯಕ್ರಮ ಮಾಡಿ ಜನರಿಗೆ ಜಾಗೃತಿ ಮೂಡಿಸಬೇಕೆಂಬ ಯೋಚನೆ ಹೊಂದಿದ್ದೇನೆ.
 - ಸುಜಾತಾ ಸುವರ್ಣ, ಕೊಡ್ಮಾಣ್‌

ಅಭಿಯಾನ ಮುಂದುವರಿಯಲಿ
ಅಂತರ್ಜಲ ಮಟ್ಟ ಹೆಚ್ಚಳಕ್ಕೆ ನಾವು ನೀಡಬಹುದಾದ ಬಹುದೊಡ್ಡ ಕೊಡುಗೆಯೆಂದರೆ ನೈಸರ್ಗಿಕವಾಗಿ ಸಿಗುವ ಮಳೆ ನೀರನ್ನು ಇಂಗಿಸುವುದು. ಅಮೂಲ್ಯ ನೀರಿನ ಉಳಿತಾಯಕ್ಕೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಉದಯವಾಣಿ ಪತ್ರಿಕೆಗೆ ಧನ್ಯ ವಾದಗಳು.ಈ ಅಭಿಯಾನ ಹೀಗೇ ಮುಂದುವರಿಯಲಿ. ಹಾಗಾದಲ್ಲಿ ನಗರದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ಖಂಡಿತಾ ಉಂಟಾಗದು.
 - ಕೃತಗ್‌ ರೈ,
ಮಹೇಶ್‌ ಪ.ಪೂ. ಕಾಲೇಜು ವಿದ್ಯಾರ್ಥಿ

ಉದಯವಾಣಿ ಜನಸ್ನೇಹಿ ಮಾಧ್ಯಮ
ಜನರಿಗೆ ನೀರಿನ ಬಗ್ಗೆ ಅರಿವು ಮೂಡಿಸಲು, ಮಳೆ ನೀರನ್ನು ಸದ್ಬಳಕೆ ಮಾಡಲು ಮಳೆಕೊಯ್ಲು ಒಂದು ಉತ್ತಮ ಕಾರ್ಯಕ್ರಮವಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿ ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿರುವ ಉದಯವಾಣಿ ಜನಸ್ನೇಹಿ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ.
 - ಅನುಷ್‌ ಸನಿಲ್‌, ನೀರುಮಾರ್ಗ

ಟಾಪ್ ನ್ಯೂಸ್

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಗ್ರಾಮೀಣ ಭಾಗದಲ್ಲಿ ಬಗೆಹರಿಯದ “ಸ್ವಚ್ಛತೆ’ ಸಂಕಟ!

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

Mangaluru: ಕುಡಿಯುವ ನೀರಿನ ಕೊರತೆ, ಬೋಟ್‌, ಮಂಜುಗಡ್ಡೆ ಘಟಕಗಳಿಗೆ ಸಂಕಷ್ಟ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.