ನವೆಂಬರ್‌ ಒಳಗಾಗಿ ಗುಜ್ಜರಕೆರೆ ಅಭಿವೃದ್ಧಿ: ಕಾಮತ್‌

Team Udayavani, Jul 29, 2018, 12:29 PM IST

ಮಹಾನಗರ: ನವೆಂಬರ್‌ ಒಳಗೆ ಗುಜ್ಜರಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲಾಗುವುದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದ್ದಾರೆ. ರಾಜ್ಯ ಸರಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮಹಾನಗರ ಪಾಲಿಕೆಯ ಎಂಜಿನಿಯರ್‌ಗಳೊಂದಿಗೆ ಮತ್ತು ಪಾಲಿಕೆಯ ಜನಪ್ರತಿನಿಧಿಗಳೊಂದಿಗೆ ಗುಜ್ಜರಕೆರೆಗೆ ಅವರು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

ಗುಜ್ಜರಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎನ್ನುವ ಗುರಿ ಇದೆ. ಇಲ್ಲಿರುವ ಮುಖ್ಯ ಸಮಸ್ಯೆ ಏನೆಂದರೆ ಡ್ರೈನೇಜ್‌ ನೀರು ಕೆರೆಗೆ ಸಂಪರ್ಕಗೊಂಡಿರುವುದು. ಆದ್ದರಿಂದ ಇದನ್ನು ಮೊದಲು ಸರಿಮಾಡಲು ಪಾಲಿಕೆಯ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕೂಡ ಆಗಬೇಕಾದ ಕಾರ್ಯಗಳನ್ನು ತ್ವರಿತಗೊಳಿಸಲು ಹೇಳಿದ್ದೇನೆ. ಅಕ್ಟೋಬರ್‌ ಅಂತ್ಯ ಅಥವಾ ನವೆಂಬರ್‌ 15ರ ಒಳಗೆ ಗುಜ್ಜರಕೆರೆಯನ್ನು ಜನರಿಗೆ ಪ್ರವಾಸಿ ತಾಣವನ್ನಾಗಿ ಮಾಡಿಕೊಡಲು ಈಗಾಗಲೇ ಸಭೆಗಳನ್ನು ನಡೆಸಿದ್ದೇನೆ ಎಂದರು.

ಶಾಶ್ವತ ಪರಿಹಾರಕ್ಕೆ ಯತ್ನ
ಕೆರೆಯ ಸುತ್ತಲೂ ವಾಕಿಂಗ್‌ ಟ್ರ್ಯಾಕ್‌ ಮಾಡಿದರೆ ಈ ಭಾಗದ ಜನರಿಗೆ ಅನುಕೂಲ ವಾಗಲಿದೆ. ಮಳೆಯ ನೀರು ಕೂಡ ಯಾವುದೇ ಕಾರಣಕ್ಕೂ ಕೆರೆಗೆ ಸೇರದಂತೆ ತಡೆಯಲು ಗಮನ ನೀಡಲಾಗುವುದು. ಇನ್ನು ಸಣ್ಣ ನೀರಾವರಿ ಇಲಾಖೆಯವರು, ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿಕೊಂಡು ಎನ್‌ಐಟಿಕೆ ತಜ್ಞರ ಅಭಿಪ್ರಾಯ ಪಡೆದು ಕೆರೆಯಲ್ಲಿ ಗಿಡಗಳು ಬೆಳೆಯದಂತೆ ಅದಕ್ಕೆ ಶಾಶ್ವತ ಪರಿಹಾರ ಮಾಡಲಿದ್ದಾರೆ ಎಂದರು.

ಪಾಲಿಕೆಯ ವಿಪಕ್ಷ ಮುಖಂಡರಾದ ಪ್ರೇಮಾನಂದ ಶೆಟ್ಟಿ, ಪಾಲಿಕೆಯ ಸದಸ್ಯರಾದ ದಿವಾಕರ್‌, ರತಿಕಲಾ, ಬಿಜೆಪಿಯ ಮುಖಂಡರಾದ ರವಿಶಂಕರ್‌ ಮಿಜಾರ್‌, ನಿತಿನ್‌ ಕುಮಾರ್‌, ವಸಂತ ಜೆ . ಪೂಜಾರಿ, ಸುಮನಾ ಶರಣ್‌, ಯೋಗೀಶ್‌ ಕುಮಾರ್‌ ಜೆಪ್ಪು, ಹೇಮು ಕೊಟ್ಟಾರಿ, ಅನಿಲ್‌ ರಾವ್‌ ಮತ್ತು ಗುಜ್ಜರಕೆರೆ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು. 

ವರದಿಗೆ ಸ್ಪಂದನೆ 
ಹದಿನೆಂಟು ವರ್ಷಗಳಿಂದ ಒಟ್ಟು ಆರು ಕೋಟಿ ರೂ. ವೆಚ್ಚದಲ್ಲಿ ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರೂ ಕೆರೆಯ ಒಡಲು ಒಳಚರಂಡಿ ನೀರು, ಹುಲ್ಲು ತುಂಬಿ ಕೊಳಚೆಯಾಗಿದೆ. ಈ ಬಗ್ಗೆ ‘ಉದಯವಾಣಿ-ಸುದಿನ’ ಹಲವು ಬಾರಿ ವರದಿ ಮಾಡಿದ್ದು, ಇತ್ತೀಚೆಗಷ್ಟೇ ‘ಆರು ಕೋಟಿ ರೂ. ಮುಗಿದರೂ ಗುಜ್ಜರಕೆರೆ ಅಭಿವೃದ್ಧಿಯಾಗಿಲ್ಲ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಅಲ್ಲದೆ ಕೆರೆಯಲ್ಲಿ ಒಳ ಚರಂಡಿ ನೀರು ಸೇರಿ ಆಸುಪಾಸಿನ ಬಾವಿ ನೀರು ಕುಡಿಯಲು ಅಯೋಗ್ಯವಾಗಿರುವ ಬಗ್ಗೆ ‘ಗುಜ್ಜರಕೆರೆ ಆಸುಪಾಸಿನ ಬಾವಿ ನೀರು ಕುಡಿದರೆ ಕಾಯಿಲೆ ಖಂಡಿತ!’ ಎಂಬುದಾಗಿ ವರದಿ ಪ್ರಕಟಿಸಲಾಗಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಯಾವ ಮನುಷ್ಯನಿಗೆ ಕನಸು ಬೀಳುವುದಿಲ್ಲ ಹೇಳಿ. ಕೆಲವರಿಗೆ ಒಂದೊಂದು ರೀತಿಯ ಕನಸುಗಳು ಅವರನ್ನು ಎಚ್ಚರಿಸುತ್ತಿರುತ್ತವೆ. ಭವಿಷ್ಯ, ಪ್ರೀತಿ, ಜೀವನ ಮೊದಲಾದ ಸಂಗತಿಗಳ...

  • ವಿದೇಶಕ್ಕೆ ಹೋಗುವ ಮುನ್ನ ಬ್ಯಾಂಕ್‌ ಕಾರ್ಡ್‌ ಪರೀಕ್ಷಿಸಿಕೊಳ್ಳಿವಿದೇಶಕ್ಕೆ ಉದ್ಯೋಗ, ಶಿಕ್ಷಣ, ಪ್ರವಾಸಕ್ಕಾಗಿ ಹೊರಡುವ ಯೋಜನೆಯಿದೆಯೇ? ಪಾಸ್‌ಪೋರ್ಟ್‌,...

  • ಮಧ್ಯಮ ವರ್ಗದ ಜನರಿಗೆ/ಉದ್ಯೋಗಿಗಳ ಕುಟುಂಬದಲ್ಲಿ ಏನಾದರೂ ಶುಭಕಾರ್ಯ ಸಮಾರಂಭಗಳು ನಡೆಯುವುದಿದ್ದರೆ ಅದರ ಖರ್ಚುವೆಚ್ಚಗಳನ್ನು ಭರಿಸಲು ಮಧ್ಯಮ ವರ್ಗದವರು ಮೊರೆ...

  • ಯಾವುದೇ ಸಾಧಕರನ್ನು ಯಶಸ್ಸನ್ನು ಗಮನಿಸಿ ನೋಡಿ. ಪರಿಶ್ರಮ, ಏಕಾಗ್ರತೆ ಜತೆಗೆ ಅವರು ಸಮಯವನ್ನು ಸದುಪಯೋಗಿಸಿಕೊಂಡಿರುವುದು ಸಾಧನೆಗೆ ಮುಖ್ಯ ಕಾರಣವಾಗಿರುತ್ತದೆ....

  • ದಾರಿಯಲ್ಲಿ ಹೋಗುವಾಗ ಒಂದು ಮಗು ಅಮ್ಮ ಕೊಟ್ಟಿದ್ದ ಒಂದು ರೂಪಾಯಿಯನ್ನು ಎಲ್ಲೋ ಕಳೆದುಕೊಂಡುಬಿಡುತ್ತದೆ. ಅಮ್ಮನ ಭಯಕ್ಕೋ, ಅಮ್ಮ ಕೊಟ್ಟಿದ್ದು ಎಂಬ ಪ್ರೀತಿಗೋ...

ಹೊಸ ಸೇರ್ಪಡೆ