ಶಾಲಾ-ಕಾಲೇಜುಗಳಿಗೂ ತಲುಪಿದ ಮಳೆಕೊಯ್ಲು ಜಾಗೃತಿ

ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು

Team Udayavani, Jul 20, 2019, 5:00 AM IST

ಮಹಾನಗರ: ಉದಯವಾಣಿಯ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದಾಗಿ ಇದೀಗ ಎಲ್ಲೆಡೆ ಜನಜಾಗೃತಿ ಕಾರ್ಯಕ್ರಮಗಳ ಆಯೋಜನೆಗೊಳ್ಳತ್ತಿದೆ. ಜತೆಗೆ ಜನರು ಕೂಡ ಸ್ವಯಂ ಪ್ರೇರಣೆಯಿಂದ ಮಳೆಕೊಯ್ಲು ಅಳವಡಿಸಿಕೊಂಡು ಜಲ ಸಂರಕ್ಷಣೆಗೆ ಕೈಜೋಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಅದರಂತೆ ಕಾಟಿಪಳ್ಳ ಸರಕಾರಿ ಪಪೂ ಕಾಲೇಜು ಪ್ರೌಢಶಾಲೆಯಲ್ಲಿ ‘ಉದಯವಾಣಿ’ ಸಹಯೋಗದಲ್ಲಿ ‘ಮನೆಮನೆಗೆ ಮಳೆಕೊಯ್ಲು’ ಕಾರ್ಯಾಗಾರವು ಶುಕ್ರವಾರ ಜರಗಿತ್ತು.

ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅವರು ಕಾರ್ಯಾಗಾರ ನಡೆಸಿಕೊಡುವ ಮೂಲಕ ಶಾಲೆಯ ಅಧ್ಯಾಪಕರು, ಮಕ್ಕಳಲ್ಲಿ ಮಳೆಕೊಯ್ಲು ಸೇರಿದಂತೆ ನೀರಿನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿದರು. ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಕರಾವಳಿ ಪ್ರದೇಶ ಬೇಸಗೆಯಲ್ಲಿ ಹನಿ ನೀರಿಗೂ ಪರದಾಡುವಂತಾಗಿದೆ. ಮುಂದಿನ ದಿನಗಳಲ್ಲಿ ಊಹಿಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಈಗಲೇ ಎಚ್ಚೆತ್ತುಕೊಂಡು ಮಳೆ ನೀರನ್ನು ಇಂಗಿಸುವ, ಸಂಗ್ರಹಿಸುವ ಕಾರ್ಯದಲ್ಲಿ ತೊಡಗಬೇಕು ಎಂದರು.

ಬಾವಿ, ಬೋರ್‌ವೆಲ್ಗಳಿಗೆ ಹೇಗೆ ನೀರಿಂಗಿಸುವುದು ಎಂಬ ಬಗ್ಗೆ ಸವಿಸ್ತಾರ ಮಾಹಿತಿ ನೀಡಲಾಯಿತು. ಇಂಗುಗುಂಡಿಗಳ ನಿರ್ಮಾಣ, ಸ್ಥಳೀಯ ಕೆರೆ, ಸಾರ್ವಜನಿಕ ಬಾವಿಗಳಿಗೆ ನೀರು ಮರುಪೂರಣ, ಮಳೆಗಾಲದ ನೀರನ್ನು ನೇರವಾಗಿ ದೈನಂದಿನ ಅವಶ್ಯಗಳಿಗೆ ಬಳಸುವ ವಿಧಾನಗಳ ಬಗ್ಗೆ ತಿಳಿಸಿಕೊಟ್ಟರು.

ಸಂಸ್ಥೆಯ ಉಪ ಪ್ರಾಂಶುಪಾಲ ಬಾಬು ಪಿ.ಎಂ. ಮಾತನಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶಯದಂತೆ 2019ರ ವರ್ಷವನ್ನು ಜಲ ವರ್ಷ ಎಂದು ಆಚರಿಸಲಾಗುತ್ತಿದೆ. ‘ಉದಯವಾಣಿ’ ಪತ್ರಿಕೆಯ ಸಹಯೋಗದೊಂದಿಗೆ ಈ ಸಂಸ್ಥೆಯ ಸುಮಾರು 120 ಮಂದಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ‘ಮನೆಮನೆಗೆ ಮಳೆಕೊಯ್ಲು’ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದರು.

ಶಿಕ್ಷಕರಾದ ನಿತಿನ್‌ ಕುಮಾರ್‌, ಮಂಜುನಾಥ್‌ ನಾಯ್ಕ, ಪ್ರಿಯಾ ಎ., ಶ್ವೇತಾ ಹಳದೀಪುರ, ರಫೀಕ್‌ ಉಪಸ್ಥಿತರಿದ್ದರು. ಇಕೋ ಕ್ಲಬ್‌ ಸಂಯೋಜಕಿ ಪ್ರವೀಣಾ ನಿರೂಪಿಸಿದರು.

ಮನೆಯಲ್ಲಿ ಅಳವಡಿಸಿದರು; ಪಕ್ಕದ ಮನೆಗೂ ಪ್ರೇರಣೆಯಾದರು
ಮೂಲ್ಕಿ ಕಾರ್ನಾಡ್‌ನ‌ ಕ್ರಿಸ್ಟಿ ಸೋನ್ಸ್‌ ಅವರು ತಮ್ಮ ಮನೆಯಲ್ಲಿ ವಾರದ ಹಿಂದೆ ಮಳೆಕೊಯ್ಲು ವಿಧಾನವನ್ನು ಅಳವಡಿಸಿದ್ದಾರೆ. ‘ನಮ್ಮ ಮನೆಯಲ್ಲಿ ನೀರಿನ ಸಮಸ್ಯೆ ಈವರೆಗೆ ಕಾಣಿಸಿಲ್ಲ. ಆದರೆ ‘ಉದಯವಾಣಿ’ಯಲ್ಲಿ ಮಳೆಕೊಯ್ಲು ಅಭಿಯಾನ ನೋಡಿದ ಬಳಿಕ ಮಳೆಕೊಯ್ಲು ಅಳವಡಿಸುವ ಯೋಚನೆಯಾಯಿತು. ಹಾಗಾಗಿ ಯೂಟ್ಯೂಬ್‌ ನೋಡಿಕೊಂಡು ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಕ್ರಿಸ್ಟಿ ಸೋನ್ಸ್‌ ಪತ್ನಿ ಮೇವಿಸ್‌ ಸೋನ್ಸ್‌.

ಇಳೆಗೆ ಮಳೆ ಅಪರೂಪವಾಗುತ್ತಿರುವ ಸಂದರ್ಭ ಯಾವುದೇ ರೀತಿಯಲ್ಲೂ ಮಳೆಯ ನೀರು ವ್ಯರ್ಥವಾಗಬಾರದು ಎನ್ನುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ. ಮುಂದೆ ನೀರಿನ ಸಮಸ್ಯೆ ಎದುರಾಗದು ಎಂಬ ವಿಶ್ವಾಸವಿದೆ. ನಮ್ಮ ಮನೆಗೆ ಅಳವಡಿಸಿದ ಬಳಿಕ ಪಕ್ಕದ ಮನೆಯವರೂ ಅಳವಡಿಸಿದ್ದಾರೆ. ಅದೇ ರೀತಿ ಎಲ್ಲರೂ ಈ ವಿಧಾನ ಅಳವಡಿಸಲಿ ಎನ್ನುತ್ತಾರೆ ಅವರು. ಮಳೆಯ ನೀರು ಮನೆಯ ಟೆರೇಸ್‌ನಲ್ಲಿರುವ ಪ್ಲಾಸ್ಟಿಕ್‌ ಡ್ರಮ್‌ಗೆ ಬೀಳುವಂತೆ ಮಾಡಲಾಗಿದ್ದು, ಇದರಲ್ಲಿ ಮರಳು, ಜಲ್ಲಿ, ಇದ್ದಿಲು ಹಾಕಲಾಗಿದೆ. ಇದಕ್ಕೆ ಫಿಲ್ಟರ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಲ್ಲಿಂದ ನೇರವಾಗಿ ಪೈಪ್‌ ಮೂಲಕ ಮನೆಯ ಬಾವಿಗೆ ನೀರನ್ನು ಹರಿಸಲಾಗುತ್ತದೆ.

ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ.ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ

ಪ್ರಶಂಸನೀಯ ಅಭಿಯಾನ

ಕಳೆದ ಮಳೆಗಾಲದಲ್ಲಿ ಸಾಕಷ್ಟು ಮಳೆ ಬಂದಿದ್ದರೂ ನಾವು ಈ ಬಾರಿಯ ಬೇಸಗೆಯಲ್ಲಿ ನಿರಂತರ ನೀರಿಗೆ ಹಾಹಾಕಾರ ಪಟ್ಟಿದ್ದೇವೆ. ಈ ಬಾರಿ ಮಳೆ ತುಂಬಾ ಕಡಿಮೆ ಬಂದಿದ್ದು, ಜಲಕ್ಷಾಮಕ್ಕೆ ಮುನ್ಸೂಚನೆಯಂತಿದೆ. ಜನರಲ್ಲಿ ಜಲಜಾಗೃತಿ ಮೂಡಿಸಲು ‘ಉದಯವಾಣಿ’ಯ ಮಳೆಕೊಯ್ಲು ಅಭಿಯಾನ ತುಂಬಾ ಉಪಯುಕ್ತ. ಪ್ರಶಂಸನೀಯ ಅಭಿಯಾನವನ್ನು ನಿರಂತರವಾಗಿ ನಡೆಸಬೇಕು.

-ಜಯಕಲಾ ಜೆ. ಶೆಟ್ಟಿ, ಬಿಜೈ

ಮೇಲ್ಪಂಕ್ತಿ ಹಾಕಿಕೊಟ್ಟ ‘ಉದಯವಾಣಿ’

ಮಳೆಕೊಯ್ಲು ಬಗ್ಗೆ ಕೇಳಿ ಬರುತ್ತಿರುವುದು ನಿನ್ನೆ ಮೊನ್ನೆಯಿಂದಲ್ಲ. ಆದರೆ ಇದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅಭಿಯಾನವಾಗಿ ಜನರ ಪಾಲ್ಗೊಳ್ಳುವಿಕೆಗೆ ಪ್ರೇರೇಪಿಸಿದ್ದು ಉದಯವಾಣಿ. ಕಟ್ಟಡದ ಟೆರೇಸ್‌ನಿಂದ ಬೀಳುವ ನೀರು, ಭೂಮಿಯ ಮೇಲ್ಮೈಯಲ್ಲಿ ಹರಿಯುವ ಮಳೆ ನೀರನ್ನು ಕೆರೆ, ಬಾವಿ, ತಗ್ಗಾದ ಪ್ರದೇಶದಲ್ಲಿ ಶೇಖರಣೆ ಮಾಡುವ ಮೂಲಕ ಜನರು ಕಾರ್ಯಪ್ರವೃತ್ತರಾಗಿರುವುದು ಈ ಅಭಿಯಾನದ ಯಶಸ್ಸೇ ಸರಿ.
-ಸಾಂತಪ್ಪ ಯು., ಬಾಬುಗುಡ್ಡ, ಅತ್ತಾವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ದಕ್ಷಿಣದಲ್ಲಿ ಅಬ್ಬರಿಸಿ ಅಪಾರ ಸಾವು- ನೋವು, ಆಸ್ತಿ ಪಾಸ್ತಿ ಹಾನಿಗೆ ಕಾರಣನಾದ ಮಳೆರಾಯ ಉತ್ತರದಲ್ಲಿ ತನ್ನ ಪ್ರತಾಪ ಮುಂದುವರಿಸಿದ್ದಾನೆ. ದಿಲಿ,...

  • ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಹಾಗೂ ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಬಂದಿರುವ 'ಅನ್ನಭಾಗ್ಯ' ಹಾಗೂ 'ಇಂದಿರಾ ಕ್ಯಾಂಟೀನ್‌' ಯೋಜನೆಗೆ...

  • ಮನುಷ್ಯನ ದೇಹದಲ್ಲಿರುವ ಒಂದು ಅವಿಭಾಜ್ಯ ಅಂಗವೆಂದರೆ ಅದು ಕಣ್ಣು. ಪ್ರಪಂಚವನ್ನು ಇಷ್ಟು ಸುಂದರವಾಗಿ ಕಾಣಲು ಕಾರಣವೇ ಕಣ್ಣು.ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ...

  • ರಾಯಚೂರು: ಮಂತ್ರಾಲಯದ ಶ್ರೀರಾಘ ವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ರಾಯರ ಮಧ್ಯಾರಾಧನೆ ವಿಜೃಂಭಣೆಯಿಂದ ನೆರವೇರಿತು. ಸಂಪ್ರದಾಯದಂತೆ...

  • ಬೆಂಗಳೂರು: ವಿಶೇಷ ಸ್ಥಾನಮಾನ ರದ್ದುಪಡಿಸುವ ನಿರ್ಧಾರಕ್ಕೆ ಪೂರ್ವಭಾವಿಯಾಗಿ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಲ್ಲಿ ಭಾರೀ ಸಂಖ್ಯೆಯಲ್ಲಿ ಸೇನಾ ಯೋಧರನ್ನು...

  • ಹುಬ್ಬಳ್ಳಿ: ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿರ್ದೇಶನದಂತೆ ನ.1ರಿಂದ ಬೆಳಗಾವಿ-ಬೆಂಗಳೂರು (06526/06525) ಸೂಪರ್‌ಫಾಸ್ಟ್‌ ತತ್ಕಾಲ್ ಸ್ಪೇಷಲ್ ರೈಲನ್ನು ಪ್ರತಿದಿನ...