ಧಾರ್ಮಿಕ ಕ್ಷೇತ್ರಗಳು ಸಂಸ್ಕೃತಿಯ ಪ್ರತೀಕ: ಯದುವೀರ ಒಡೆಯರ್‌

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ: ಬ್ರಹ್ಮಕಲಶೋತ್ಸವ ಸಂಭ್ರಮ

Team Udayavani, Jan 22, 2020, 10:47 PM IST

ಕಟೀಲು: ಧಾರ್ಮಿಕ ಕ್ಷೇತ್ರಗಳು ನಾಡಿನ ಸಂಸ್ಕೃತಿಯ ಪ್ರತೀಕ ದಂತಿದ್ದು ಅವುಗಳ ಪರ್ವಕಾಲಗಳು ನಿರಂತರವಾಗಿ ನಡೆಯುತ್ತಿರಬೇಕು. ಇದರಿಂದ ಧಾರ್ಮಿಕ ಜಾಗೃತಿ ಮೂಡಲು ಸಹಕಾರಿ ಎಂದು ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ಜ. 22ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವ ಸ್ಥಾ ನದಲ್ಲಿ ಬ್ರಹ್ಮಕಲ ಶೋತ್ಸವದ ಅಂಗವಾಗಿ ಶ್ರೀ ಭ್ರಾಮರೀ ಸಭಾಮಂಟಪದಲ್ಲಿ ಉಗ್ರಾಣ ಮುಹೂರ್ತ, ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದಿನ ರಾಜ ಪರಂಪರೆಯ ಕಾಲದಲ್ಲಿಯೂ ಕಟೀಲು ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡಿ ಧಾರ್ಮಿಕ ಕೈಂಕರ್ಯಕ್ಕೆ ಒತ್ತು ಕೊಡುವ ಕೆಲಸ ಮಾಡಲಾಗಿದೆ. ದೇವಸ್ಥಾನದಲ್ಲಿ ಪ್ಲಾಸ್ಟಿಕ್‌ ಮುಕ್ತ ಪ್ರದೇಶ ಮಾಡಿರುವುದು ಹೆಮ್ಮೆಯ ಹಾಗೂ ಇತರ ಕಡೆಗಳಿಗೂ ಮಾದರಿಯಾಗಿದೆ ಎಂದರು.

ಗುರುಪುರ ವಜ್ರ ದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕಾರ್ಕಳ ಬಲ್ಲೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಟ್ಟಲದಾಸ ಸ್ವಾಮೀಜಿ ಆಶೀರ್ವವಚನಗೈದರು.

ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಸಂಸದ ನಳಿನ್‌ ಕುಮಾರ್‌ ಕಟೀಲು, ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಸನತ್‌ಕುಮಾರ್‌ ಶೆಟ್ಟಿ, ಎಲ್‌. ಸುಬ್ರಹ್ಮಣ್ಯ ಮೈಸೂರು, ಲಕ್ಷ್ಮೀನಾರಾಯಣ ಆಸ್ರಣ್ಣ, ವಾಸುದೇವ ಶಿಬರಾಯ, ಶಿಬರೂರು ಗುತ್ತು ಗುತ್ತಿನಾರ್‌ ಉಮೇಶ್‌ ಎನ್‌. ಶೆಟ್ಟಿ, ವೆಂಕಟರಾಜ ಉಡುಪ, ಶಂಭು ಮುಕ್ಕಾಲ್ದಿ ಅತ್ತೂರು ಭಂಡಾರಮನೆ, ವೇದವ್ಯಾಸ ಉಡುಪ ದೇವಸ್ಯ ಮಠ ಕೊಡೆತ್ತೂರು, ಜಯರಾಮ ಮುಕ್ಕಾಲ್ದಿ ಕೊಡೆತ್ತೂರು, ನಿತಿನ್‌ ತಿಮ್ಮ ಕಾವ ಉಪಸ್ಥಿತರಿದ್ದರು. ಶ್ರೀಹರಿ ನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿ, ಡಾ| ಸೋಂದಾ ಭಾಸ್ಕರ ಭಟ್‌ ನಿರೂಪಿಸಿ, ದಯಾನಂದ ವಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ