ಮನಪಾ ಮತದಾನ: ಅವ್ಯವಸ್ಥೆಯ ಆಗರವಾದ ಕೋಡಿಕಲ್ ಚುನಾವಣಾ ಬೂತ್

Team Udayavani, Nov 12, 2019, 2:59 PM IST

ಪಣಂಬೂರು: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಯುತ್ತಿದ್ದು, ನಗರದ ಬಂಗ್ರಕೂಳೂರು 16 ಮತ್ತು ದೇರೆಬೈಲ್ ಉತ್ತರ 17 ವಾರ್ಡ್ ಬರುವ ಕೋಡಿಕಲ್ ಚುನಾವಣಾ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ.

ಇಲ್ಲಿ ಒಟ್ಟು 11 ಮತಗಟ್ಟೆ ಬೂತ್ ಇದ್ದು 150 ಚುನಾವಣಾ ಅಧಿಕಾರಿಗಳ ಸಹಿತ ಸಿಬಂದಿ ಕೆಲಸ ಮಾಡುತ್ತಿದ್ದಾರೆ.

ಸೋಮವಾರ ರಾತ್ರಿ ಇವಿಎಂ ಮೆಷಿನ್ ನೊಂದಿಗೆ ಬಂದ ಸಿಬ್ಬಂದಿಗಳಿಗೆ ಶಾಲೆಯ ಒಂದೇ ಶೌಚಾಲಯ ಬಳಕೆಗೆ ಇತ್ತು. ಅದರಲ್ಲೂ ಪಿಟ್ ಸರಿ ಇಲ್ಲದೆ ಅಕ್ಕಪಕ್ಕದ ಮನೆಯ ಆಶ್ರಯ ಪಡೆಯಬೇಕಾಯಿತು.ಇದರಿಂದಾಗಿ ಮಹಿಳಾ ಪೊಲೀಸ್ ಹಾಗೂ ಮಹಿಳಾ ಚುನಾವಣಾ ಸಿಬ್ಬಂದ ಸಮಸ್ಯೆ ಎದುರಿಸಬೇಕಾಯಿತು.

ರಾತ್ರಿ ಮತ್ತು ಬೆಳಗ್ಗೆ ಸ್ವತಃ ಅಭ್ಯರ್ಥಿಗಳು ಊಟೋಪಚಾರ, ತಿಂಡಿ ವ್ಯವಸ್ಥೆ ಮಾಡಬೇಕಾಯಿತು.ಇಷ್ಟಾದರೂ ಕಂದಾಯ ಇಲಾಖೆ ಮಾತ್ರ ನಿದ್ರಾಸ್ಥಿ ತಿಯಲ್ಲಿದ್ಧಾರೆ.

ಇಂದು ಬೆಳಿಗ್ಗೆ ಅಭ್ಯರ್ಥಿಗಳು ಟೇಬಲ್ ಚಯರ್ ಜೋಡಿಸಿ ಸಹಾಯಹಸ್ತ ಚಾಚಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ