ಮಂಗಳೂರಿನ ಕೆಥೋಲಿಕ್‌ ಶಿಕ್ಷಣ ಮಂಡಳಿಯಿಂದ ಆರಂಭವಾದ ಶಾಲೆಗೀಗ 121 ವರ್ಷ

ನೀರುಡೆ ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ಹಿರಿಯ ಪ್ರಾಥಮಿಕ ಶಾಲೆ

Team Udayavani, Dec 6, 2019, 1:11 AM IST

19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

1898 ಶಾಲೆ ಆರಂಭ
ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ಶಾಲೆ

ಮೂಡುಬಿದಿರೆ: 1898ರ ಅಕ್ಟೋಬರ್‌ 25ರಂದು ಕಳವಾರು (ಪೇಜಾವರ)ಇಗರ್ಜಿಯ ಆಶ್ರಯದಲ್ಲಿ ಮಂಗಳೂರಿನ ಕೆಥೋಲಿಕ್‌ ಶಿಕ್ಷಣ ಮಂಡಳಿಯು ನೀರುಡೆಯ ಮಚ್ಚಾರಿನಲ್ಲಿ ಸ್ಥಾಪಿಸಿದ ಸಂತ ಫ್ರಾನ್ಸಿಸ್‌ ಕ್ಸೇವಿಯರ್‌ ಕಿರಿಯ ಪ್ರಾಥಮಿಕ ಶಾಲೆಯು ಮುಂದೆ ಮೂಡುಪೆರಾರ ಇಗರ್ಜಿಯ ವ್ಯಾಪ್ತಿಗೊಳಪಟ್ಟಿತು.

ವಂ| ರೆಜಿನಾಲ್ಡ್‌ ಪಿಂಟೋ ಮೇಲ್ವಿಚಾರಕರಾಗಿ ಶಾಲೆಯ ಅಭಿವೃದ್ಧಿಗೆ ಪರಿಶ್ರಮಿಸಿದ್ದರು. 1915ರಲ್ಲಿ ಸಾಲ್ವದೊರ್‌ ಡಿ’ಸೋಜಾ, ಅನಂತರ ಇಪ್ಲೆಂಮೆರ್ಶಿನ್‌ ಫೆರ್ನಾಂಡಿಸ್‌ ಮುಖ್ಯ ಶಿಕ್ಷಕರಾಗಿದ್ದರು. ವಂ| ಜೋಸೆಫ್‌ ಮಿನೇಜಸ್‌ ಮಚ್ಚಾರು ಬುಡಿಗಾಡಿನಲ್ಲಿ ಒಂದು ಎಕ್ರೆ ಜಾಗವನ್ನು ದರ್ಕಾಸ್ತಿಗೆ ಪಡೆದುಕೊಂಡು ಶಾಲಾ ಕಟ್ಟಡ ಮತ್ತು ಬಾವಿಯನ್ನು ನಿರ್ಮಿಸಿದರು; ಮುಂದೆ, ನಿಡ್ಡೋಡಿಯ ಆಂಜೆಲಿನ್‌ ಫೆರ್ನಾಂಡಿಸರಿಂದ ಒಂದು ಎಕ್ರೆ ಜಾಗವನ್ನು ದಾನವಾಗಿ ಪಡೆದು ಈ ಜಾಗದಲ್ಲಿ ವಂ| ಜೇಮ್ಸ್‌ ಸಿಕ್ವೇರ ಅವರು ವಸತಿ ಗೃಹವನ್ನು ನಿರ್ಮಿಸಿ ಶಾಲೆಯನ್ನು ಅಲ್ಲಿಗೆ ವರ್ಗಾಯಿಸಿದರು. 1945ರಲ್ಲಿ ಪೆರಾರ್‌ ಚರ್ಚ್‌ನಿಂದ ಬೇರ್ಪಟ್ಟು ನೀರುಡೆ ಚರ್ಚ್‌ಸ್ಥಾಪನೆಯಾಗಿ ಜೋಸೆಫ್‌ ಎಂ. ಲೋಬೋ ಅವರು ನೂತನ ಧರ್ಮಗುರುಗಳಾಗಿ ಅ ಧಿಕಾರ ಸ್ವೀಕರಿಸಿ, 1946ರಲ್ಲಿ ಶಾಲಾ ಕಟ್ಟಡವನ್ನು ಕ್ರಮಬದ್ಧವಾಗಿ ನಿರ್ಮಿಸಿದರು.

ಮೇಲ್ದರ್ಜೆಗೆ
1953ರಲ್ಲಿ ವಿದ್ಯಾ ಇಲಾಖೆಯ ಮಂಜೂರಾತಿ ಲಭಿಸಿ, ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು. 1956ರಲ್ಲಿ ಎಂಟನೇ ತರಗತಿಯ ಮೊದಲ ತಂಡ ಹೊರಬಿದ್ದಿತು. ವಂ| ಲೋರೆನ್‌ ಫೆರ್ನಾಂಡಿಸ್‌ “ಪೇರಿಷ್‌ ಹಾಲ್‌’ ನಿರ್ಮಿಸಿರುವುದರ ಜತೆಗೆ ಶಾಲೆಗೆ ಪೀಠೊಪಕರಣ ಒದಗಿಸಿಕೊಟ್ಟರು. ಮುಂದೆ ವಂ| ಲಾರೆನ್ಸ್‌ ಮಾರ್ಟಿಸ್‌ ಶಾಲಾ ಸಂಚಾಲಕರಾದಾಗ ಮಕ್ಕಳ ಸಂಖ್ಯೆ 620ರ ಮಟ್ಟಕ್ಕೇರಿತು. ಜೋನ್‌ ಮೆಂಡೋನ್ಸರು ಆಗ ಮುಖ್ಯೋಪಾಧ್ಯಾಯರಾಗಿ ಶಾಲಾ ಪ್ರಗತಿಗೆ ಪರಿಶ್ರಮಿಸಿದ್ದರು. 1998ರಲ್ಲಿ ಶಾಲಾ ಶತಮಾನೋತ್ಸವ ನೆರವೇರಿತು. 2004ರಲ್ಲಿ ಶತಮಾನೋತ್ಸವ ಸ್ಮಾರಕ ಕಟ್ಟಡವನ್ನು ಆಗಿನ ಬಿಷಪ್‌ ವಂ| ಡಾ| ಎ.ಎಫ್‌. ಡಿ’ಸೋಜಾ ಉದ್ಘಾಟಿಸಿದರು.

ಜೋನ್‌ ಮೆಂಡೋನ್ಸಾ, ಫ್ರೆಡ್ರಿಕ್‌ ಎಂ. ಪಾçಯಸ್‌, ಸಿ| ಕಾರ್ಮಿನ್‌ ಶಿಕ್ಷಕರಲ್ಲಿ ವೆಂಕಪ್ಪಯ್ಯ ಮಾಸ್ಟ್ರೆ, ಹರಿ ಮಾಸ್ಟ್ರೆ, ಬಿಬಿಯಾನ ಪಿಂಟೋ, ವಲೇರಿಯನ್‌ ಡಿ’ಸೋಜಾ, ಜೋಸೆಫ್‌ ಪಿಂಟೋ, ಸಿ| ಕಾರ್ಮಿನ್‌, ಸೆಲ್ಲಿ ಪಿಂಟೋ, ತೆರೆಸಾ, ಜೂಲಿಯನ್‌ ಪಿಂಟೋ, ಇಗ್ನೇಶಿಯಸ್‌ ಸೆರಾವೊ, ಸಿ| ಐರಿನ್‌, ಸಿ| ಈಮಾ, ಸಿ| ಪಾವನಾ ಇನ್ನೂ ಅನೇಕರು ಮುಖ್ಯ ಶಿಕ್ಷಕರು, ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಹೆಮ್ಮೆಯ ಹಳೆ ವಿದ್ಯಾರ್ಥಿಗಳು
ಡಾ| ಎ.ಎಫ್‌. ಪಿಂಟೋ (ರಾಯನ್‌ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಪ್ರವರ್ತಕ), ಗೋಡ್ವಿನ್‌ ಪಾçಸ್‌ (ವಿಜ್ಞಾನಿ), ಮಿಶಲ್‌ ಕ್ವೀನಿ ಡಿ’ಕೋಸ್ತ (ಜಿಎಸ್‌ಟಿ ಸ.ಆಯುಕ್ತೆ), ಮಾಜಿ ಗ್ರಾ.ಪಂ. ಅಧ್ಯಕ್ಷ ಲಾಝರಸ್‌ ಡಿ’ಕೋಸ್ತ, ಸಂತೋಷ್‌ಕುಮಾರ್‌ ಶೆಟ್ಟಿ ಮುಚ್ಚಾರು (ಗುತ್ತಿಗೆದಾರರು), ಡಾ| ವಾದೀಶ್‌ ಭಟ್‌ (ಪ್ರಾಧ್ಯಾಪಕ), ಐವನ್‌ ಲೋಬೋ (ಪ್ರಗತಿಪರ ಕೃಷಿಕ), ವಂ| ಎವುಜಿನ್‌ ಲೋಬೋ (ರೋಮ್‌ ವ್ಯಾಟಿಕನ್‌ ರೇಡಿಯೋ ನಿರ್ದೇಶಕ), ತಿರುಚಿರಪಳ್ಳಿಯಲ್ಲಿ ಬಿಷಪ್‌ ಆಗಿದ್ದ ವಂ| ಜೇಕಬ್‌ ಮಿನೇಜಸ್‌, ಜಗದೀಶ್‌ ಬಲ್ಲಾಳ್‌ಬೈಲು (ಇಂಡಿಯನ್‌ ನೇವಿ), ರೋಶನ್‌ ಪಾçಸ್‌ (ಎನ್‌ಐಟಿಕೆ ಪ್ರಾಧ್ಯಾಪಕ), ವಂ| ಮೆಲ್ವಿನ್‌ ಪಿಂಟೋ (ರೇಡಿಯೋ ಸಾರಂಗ್‌), ಮಾರ್ಕ್‌ ಡಿಸೋಜ ಬೆಂಗಳೂರು(ಸಿಎ), ಉದ್ಯಮಿಗಳಾದ ಲ್ಯಾನ್ಸಿ ವಾಸ್‌, ಓಸ್ವಾಲ್ಡ್‌ ಡಿ’ಸೋಜಾ, ಫೆಲಿಕ್ಸ್‌ ಪಿಂಟೋ, ನವ್ಯಜ್ಯೋತಿ ನೆಲ್ಲಿಜೆ(ಪತ್ರಕರ್ತೆ) ಶಾಲೆಯ ಹಳೆಯ ವಿದ್ಯಾರ್ಥಿಗಳು.

ಸುಸಜ್ಜಿತ ಸೌಲಭ್ಯಗಳು
ಪ್ರಸ್ತುತ ಸಂಚಾಲಕರಾಗಿ ವಂ| ಅಸ್ಸಿಸಿ ರೆಬೆಲ್ಲೋ, ಮುಖ್ಯೋಪಾಧ್ಯಾಯರಾಗಿ ಫ್ಲೊಸ್ಸಿ ಜೆಸಿಂತಾ ಡಿ’ಸೋಜಾ ಜತೆಗೆ 4 ಮಂದಿ ಗೌರವ ಶಿಕ್ಷಕರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಒಟ್ಟು 92 ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಕಂಪ್ಯೂಟರ್‌ ಶಿಕ್ಷಣ, ರಂಗಮಂದಿರ, ವಿಶಾಲ ಆಟದ ಬಯಲು . ಕೈತೋಟ ಎಲ್ಲವೂ ಇಲ್ಲಿವೆ. ಶಾಲಾ ಸ್ವತ್ಛತೆ ಚೆನ್ನಾಗಿದೆ. ಅಗ್ರಸ್ಥಾನಿ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶಿಕ್ಷಕರು ಓದಿನಲ್ಲಿ ಹಿಂದೆ ಬಿದ್ದಿರುವ ಮಕ್ಕಳ ಶೈಕ್ಷಣಿಕ ಮಟ್ಟವನ್ನು ಎತ್ತರಿಸಲು ಸದಾ ಕಾಳಜಿ ತೋರುತ್ತಿದ್ದಾರೆ.

ಶಾಲೆ ಯಲ್ಲಿ ಗೌರವ ಶಿಕ್ಷಕರನ್ನು ನೇಮಿಸಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಆಂಗ್ಲಭಾಷಾ ಪ್ರೌಢಿಮೆ ವೃದ್ಧಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಲಿಕೆಯಲ್ಲಿ ಹಿಂದಿರುವವರನ್ನು ಮುಂದಕ್ಕೆ ತರಲು ವಿಶೇಷವಾಗಿ ಪ್ರಯತ್ನಿಸುತ್ತಿದ್ದೇವೆ.
-ಫ್ಲೊಸ್ಸಿ ಜೆಸಿಂತಾ ಡಿ’ಸೋಜಾ, ಮುಖ್ಯೋಪಾಧ್ಯಾಯಿನಿ

ಶಿಕ್ಷಕರು, ಸಹಪಾಠಿ ಗಳೊಂದಿಗೆ ಮರೆಯಲಾಗದ ಸಂಬಂಧವಿದೆ. ಇಂದು ನಾನೇನಾದರೂ ಸಾಧಿಸಿದ್ದಲ್ಲಿ ಅದರ ಶ್ರೇಯಸ್ಸು ಶಾಲೆಗೆ ಸಲ್ಲುತ್ತದೆ. ನಮ್ಮ ಶಾಲೆ ನನ್ನಲ್ಲಿ ಬಿತ್ತಿದ ಮೌಲ್ಯ, ಸಹಬಾಳ್ವೆ ಹಾಗೂ ಸೇವೆಯ ಮನೋಭಾವಕ್ಕೆ ನಾನು ಎಂದೆಂದೂ ಋಣಿ.
– ಮಿಶಲ್‌ ಕ್ವೀನಿ ಡಿ’ಕೋಸ್ತ, ಹಳೆ ವಿದ್ಯಾರ್ಥಿನಿ

– ಧನಂಜಯ ಮೂಡುಬಿದಿರೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

  • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...

  • ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹನುಮಸಾಗರ ಗ್ರಾಮದ ಪ್ರವಾಸಿ ಮಂದಿರ(ಐಬಿ) ಕುಡಿಯುವ ನೀರು ಹಾಗೂ ಸಿಬ್ಬಂದಿ...