ಸರಳ ವಿಧಾನ ಅನುಸರಿಸಿ ಜಲ ಮರುಪೂರಣ ವ್ಯವಸ್ಥೆ ಅಳವಡಿಕೆ

"ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು

Team Udayavani, Sep 17, 2019, 5:14 AM IST

ಕುಲಶೇಖರ: ಬೋರ್‌ವೆಲ್‌ಗೆ ಜಲ ಮರುಪೂರಣ ಕುಲಶೇಖರ ಜಯಶ್ರೀ ಗೇಟ್‌ನ ಸುನಿಲ್‌ ಕುಂದರ್‌ ಅವರ ಮನೆಯ ಬೋರ್‌ವೆಲ್‌ಗೆ ಜಲ ಮರುಪೂರಣ ವ್ಯವಸ್ಥೆ ಕೈಗೊಳ್ಳಲಾಗಿದೆ. ಸರಳ ವಿಧಾನದ ಮೂಲಕ ಈ ವ್ಯವಸ್ಥೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಯಥೇಚ್ಛ ನೀರು ಪಡೆಯುವ ವಿಶ್ವಾಸ ಅವರದು.

ಬೋರ್‌ವೆಲ್‌ ಪಕ್ಕ ಎಂಟು ಅಡಿ ಆಳದ ಗುಂಡಿ ತೋಡಲಾಗಿದ್ದು, ಜಲ್ಲಿ, ಮರಳು, ಇದ್ದಿಲನ್ನು ಕ್ರಮವಾಗಿ ಗುಂಡಿಯಲ್ಲಿ ಹಾಕಲಾಗಿದೆ. ಚಾವಣಿ ನೀರನ್ನು ಒಂದೆಡೆ ಹಿಡಿದಿಟ್ಟು ಪೈಪ್‌ ಮುಖಾಂತರ ಈ ಗುಂಡಿಗೆ ಬೀಳುವಂತೆ ನೋಡಿಕೊಳ್ಳಲಾಗಿದೆ. ನಡುವೆ ನೀರು ಶುದ್ಧೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ. “ಪ್ರಸ್ತುತ ನೀರಿನ ಅಭಾವ ಎಲ್ಲ ಕಡೆಯೂ ಬಹಳವಾಗಿಯೇ ಇದೆ. ಭವಿಷ್ಯದಲ್ಲಿ ಈ ಸಮಸ್ಯೆ ಇನ್ನಷ್ಟು ಜಟಿಲಗೊಳ್ಳುವ ಮುನ್ನ ನಾವೆಲ್ಲರು ಎಚ್ಚೆತ್ತುಕೊಂಡು ಮಳೆ ನೀರಿಂಗಿಸುವ ವಿಧಾನಕ್ಕೆ ಮುಂದಾಗಬೇಕು. ತತ್‌ಕ್ಷಣಕ್ಕೇ ಅಲ್ಲದಿದ್ದರೂ ಭವಿಷ್ಯದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲು ಇದು ಕಾರಣವಾಗುತ್ತದೆ’ ಎನ್ನುವುದು ಸುನಿಲ್‌ ಕುಂದರ್‌ ಅವರ ಮಾತು.

ಸರಕಾರವೂ ಮುತುವರ್ಜಿ ವಹಿಸಲಿ
“ಮನೆಮನೆಗೆ ಮಳೆಕೊಯ್ಲು’ ಅಭಿಯಾನದ ಮುಖಾಂತರ ಉದಯವಾಣಿಯು ಜನರಲ್ಲಿ ಜಲಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಪತ್ರಿಕೆಯ ಈ ಅಭಿಯಾನಕ್ಕೆ ಸರಕಾರವೂ ಕೈ ಜೋಡಿಸಿ ಗ್ರಾಮ ಮಟ್ಟದಿಂದಲೇ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಮಳೆಕೊಯ್ಲು ಅಳವಡಿಸಲು ಉತ್ತೇಜನ ನೀಡಬೇಕು.
– ಆಲ್ವಿನ್‌ ಸೆರಾವೋ, ಪಾಲಡ್ಕ

ಸುತ್ಯರ್ಹ ಕೆಲಸ
ಮನೆ ಮನೆಗೆ ಮಳೆ ಕೊಯ್ಲು ಅಭಿಯಾನ ನೀರಿನ ಮಹತ್ವದ ಕುರಿತು ಅರಿವು ಮೂಡಿಸುವ ಕೆಲಸವನ್ನು ಕರಾವಳಿ ಓದುಗರ ನಾಡಿಮಿಡಿತ ಉದಯವಾಣಿ ಶತದಿನೋತ್ಸವದತ್ತ ಮಾಡಿಕೊಂಡು ಬರುತ್ತಿದೆ. ಇದು ಅಭಿನಂದನೀಯ ಕಾರ್ಯ. ಮಳೆ ಕೊಯ್ಲು ಪ್ರತಿಯೊಂದು ಮನೆಗಳಲ್ಲಿ ಸರಕಾರದ ಇಲಾಖೆಗಳಲ್ಲಿ ಸಾರ್ವಜನಿಕವಾಗಿ ಕಡ್ಡಾಯ ಎಲ್ಲರೂ ತೆರೆದ ಮನಸ್ಸಿನಿಂದ ಜಾಗೃತಿ ಮೂಡಿಸುವ ಕೆಲಸ ಮಾಡ ಬೇಕಾಗಿದೆ. ಮಳೆಕೊಯ್ಲು ಮಾಹಿತಿ ಜನರಿಗೆ ಮನಮುಟ್ಟು ವಂತೆ ಮಾಡಲು ಹೊರಟಿರುವ ಉದಯವಾಣಿ ಇನ್ನೂ ಒಂದಷ್ಟು ಕಾಲ ಮುಂದುವರಿಸಿಕೊಂಡು ಹೋಗಲಿ ಅನ್ನುವುದೇ ಜನಸಾಮಾನ್ಯರ ಆಶಯ.
 - ಚಂದ್ರಹಾಸ , ಕೋಟೆಕಾರ್‌

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ
ಕೇಂದ್ರಗಳಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ ಪರಿಸರದಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಸೋಮವಾರ...

  • ಬೆಂಗಳೂರು: ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದ ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಪೊಲೀಸ್‌ ಅಧಿಕಾರಿ,...

  • ಗಂಗಾವತಿ: ಪ್ರವಾಹದಿಂದಾಗಿ ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ 350ಕ್ಕೂ ಹೆಚ್ಚು ಟೆಕ್ಕಿಗಳನ್ನು ರಕ್ಷಿಸಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ...

  • ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ...

  • ಕೊಲ್ಲೂರು: ಮಹಾತ್ಮಾ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಸ್ವದೇಶಿ, ಸ್ವರಾಜ್‌, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ...