ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆ ರೇಷನಿಂಗ್‌ ಮುಂದುವರಿಕೆ; ಇಂದೂ ನೀರಿಲ್ಲ

Team Udayavani, May 2, 2019, 10:45 AM IST

ಮಹಾನಗರ: ಮಂಗಳೂರಿಗೆ ನೀರುಣಿಸುವ ತುಂಬೆ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರೇಷನಿಂಗ್‌ ವ್ಯವಸ್ಥೆ ಮತ್ತೆ ಬುಧವಾರದಿಂದ ಜಾರಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಮೇ 2ರಂದು ಕೂಡ ನಗರಕ್ಕೆ ನೀರು ಸರಬರಾಜು ಸ್ಥಗಿತವಾಗಲಿದೆ.

ಬುಧವಾರ ಬೆಳಗ್ಗೆ 6 ಗಂಟೆಯಿಂದ ತುಂಬೆ ಡ್ಯಾಂನಲ್ಲಿ ನೀರು ಪಂಪಿಂಗ್‌ ಸ್ಥಗಿತಗೊಳಿಸಲಾಗಿದ್ದು, ಪರಿಣಾಮವಾಗಿ ನಗರವಾಸಿಗಳು ಸಮರ್ಪಕವಾಗಿ ನೀರು ಲಭ್ಯವಾಗದೆ ಸಮಸ್ಯೆ ಎದುರಿಸಲು ಆರಂಭವಾಗಿದೆ. ಬುಧವಾರ ಸಂಜೆಯ ವೇಳೆಗೆ ಡ್ಯಾಂನಲ್ಲಿ ನೀರಿನ ಮಟ್ಟ 4.68 ಮೀ. ಆಗಿದೆ.

ರೇಷನಿಂಗ್‌ ಆರಂಭವಾಗುತ್ತಿದ್ದಂತೆ ನಗರದ ಕೆಲವು ಭಾಗಗಳಲ್ಲಿ ನೀರಿಲ್ಲದೆ ಕೆಲವರು ಪರಿತಪಿಸಿದರು. ಮಾಜಿ ಕಾರ್ಪೊರೇಟರ್‌ಗಳು ಸೇರಿದಂತೆ ಅಧಿಕಾರಿಗಳಿಗೆ ಕರೆ ಮಾಡಿದ ಕೆಲವು ನಿವಾಸಿಗಳು ನೀರು ಒದಗಿಸುವಂತೆ ಆಗ್ರಹಿಸಿದರು. ಈ ಮಧ್ಯೆ, ಫ್ಲ್ಯಾಟ್‌ನವರು ತಮ್ಮಲ್ಲಿರುವ ಸಂಪಿನಲ್ಲಿ ನೀರು ಶೇಖರಿಸಿಟ್ಟ ಪರಿಣಾಮ ಬುಧವಾರ ಕೆಲವೆಡೆ ನೀರಿನ ಸಮಸ್ಯೆ ಎದುರಾಗಲಿಲ್ಲ. ಜತೆಗೆ ಕೆಲವು ಮನೆ ಮಂದಿ ನೀರು ಶೇಖರಿಸಿಟ್ಟ ಪರಿಣಾಮ ಅವರಿಗೂ ಸಮಸ್ಯೆ ಆಗಲಿಲ್ಲ. ಆದರೆ, ಸಿಂಗಲ್ ರೂಟ್‌ನಲ್ಲಿ ಮನೆ ಇರುವವರು ಹಾಗೂ ಬಡವರು ನೀರು ಶೇಖರಿಸಲು ಸ್ಥಳವಿಲ್ಲದೆ ಸಮಸ್ಯೆ ಅನುಭವಿಸುವಂತಾಯಿತು. ಈ ಮಧ್ಯೆ ಗುರುವಾರವೂ ನಗರದಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳುವ ಹಿನ್ನೆಲೆಯಲ್ಲಿ ನೀರಿನ ಬೇಡಿಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

ಈ ಮಧ್ಯೆ ತುರ್ತು ಅಗತ್ಯದ ಹಿನ್ನೆಲೆ ಯಲ್ಲಿ ಪಾಲಿಕೆಯ ಅಧಿಕಾರಿಗಳ ಸೂಚ ನೆಯ ಮೇರೆಗೆ ಸುಮಾರು 18ರಷ್ಟು ಟ್ಯಾಂಕರ್‌ಗಳು ಬುಧವಾರ ನೀರು ಸರಬರಾಜು ಮಾಡಿದೆ. ನಗರದ ಮಂಗಳಾದೇವಿ, ಬಂದರ್‌, ಕುದ್ರೋಳಿ, ಹೊಗೆಬಜಾರ್‌, ಜಪ್ಪಿನಮೊಗರು ಸೇರಿ ದಂತೆ ಹಲವು ಪ್ರದೇಶಗಳಿಗೆ ಟ್ಯಾಂಕರ್‌ ನೀರನ್ನು ಸರಬರಾಜು ಮಾಡಲಾಗಿದೆ.

••ತುಂಬೆ ಡ್ಯಾಂ: 4.68 ಮೀ. ಇಳಿಕೆ

•ನೀರು ಪಂಪಿಂಗ್‌ ಸ್ಥಗಿತ

•ಪರದಾಡುತ್ತಿರುವ ಸಾರ್ವಜನಿಕರು

ಈಗ ಜಾರಿಯಲ್ಲಿರುವ ರೇಷನಿಂಗ್‌ ನಿಯಮದ ಪ್ರಕಾರ ಮೇ 3ರ ಬೆಳಗ್ಗೆ 6 ಗಂಟೆಯಿಂದ ಮೇ 7ರ ಬೆಳಗ್ಗೆ 6 ಗಂಟೆಯವರೆಗೆ (96 ಗಂಟೆಗಳ ಕಾಲ) ನೀರು ಸರಬರಾಜು ಮಾಡಲಾಗುತ್ತದೆ. ಅಲ್ಲಿಂದ ಮೇ 9ರ ಬೆಳಗ್ಗೆ 6 ಗಂಟೆಯವರೆಗೆ ಪೂರೈಕೆ ಸ್ಥಗಿತಗೊಳಿಸಲಾಗುವುದು. ಮೇ 9 ರ ಬೆಳಗ್ಗೆ 6 ಗಂಟೆಯಿಂದ ಮೇ 13ರ ಬೆಳಗ್ಗೆ 6 ಗಂಟೆಯವರೆಗೆ 96 ತಾಸುಗಳ ಕಾಲ ಸರಬರಾಜು ಇರುತ್ತದೆ. ಬಳಿಕ ಮೇ15 ರ ಬೆಳಗ್ಗೆ 6 ಗಂಟೆಯವರೆಗೆ ಸ್ಥಗಿತಗೊಳ್ಳುತ್ತದೆ. ಮೇ 15 ರಂದು 6 ಗಂಟೆಯಿಂದ ಪ್ರಾರಂಭವಾಗುವ ಪೂರೈಕೆ ಮೇ19 ರ ಬೆಳಗ್ಗೆ 6 ಗಂಟೆಯವರೆಗೆ ಸರಬರಾಜು ಮಾಡಲಾಗುತ್ತದೆ. ಬಳಿಕ ಸ್ಥಗಿತಗೊಳ್ಳಲಿದ್ದು ಮೇ 21ರ ಬೆಳಗ್ಗೆ 6 ಗಂಟೆಗೆ ಪ್ರಾರಂಭಗೊಳ್ಳಲಿದೆ.

ನಾಳೆಯಿಂದ ನೀರು ಸರಬರಾಜು

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ