ತ್ಯಾಜ್ಯ ಎಸೆತ ತಡೆಗೆ ಕ್ರಮ; ಕಸ ಸಂಗ್ರಹಕ್ಕೆ ಶೀಘ್ರ 8 ವಾಹನ

ತ್ಯಾಜ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಪುರಸಭೆ

Team Udayavani, Dec 4, 2019, 4:05 AM IST

rt-16

ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ತ್ಯಾಜ್ಯ ಸಮಸ್ಯೆಯನ್ನು ಗಂಭೀರ ವಾಗಿ ಪರಿಗಣಿಸಿರುವ ಪುರಸಭೆಯು ತ್ಯಾಜ್ಯ ಎಸೆಯುವವರ ಮೇಲೆ ಹದ್ದಿನ ಕಣ್ಣಿಟ್ಟಿ ರುವ ಜತೆಗೆ ತ್ಯಾಜ್ಯ ಸಂಗ್ರಹಕ್ಕೆ ಎಲ್ಲ 23
ವಾರ್ಡ್‌ಗಳನ್ನೂ ತಲುಪುವ ದೃಷ್ಟಿಯಿಂದ ಪುರಸಭೆಗೆ ನೂತನ 8 ತ್ಯಾಜ್ಯ ಸಂಗ್ರಹ ವಾಹನಗಳು ಆಗಮಿಸಲಿವೆ. ತ್ಯಾಜ್ಯದ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಪುರಸಭೆ ಹಲವು ಪ್ರಯತ್ನಗಳನ್ನು ಮಾಡಿದ್ದು, ಇದೀಗ ತ್ಯಾಜ್ಯ ರಾಶಿಗಳು ಕಂಡುಬರುತ್ತಿರುವ ಪ್ರದೇಶ ಗಳಲ್ಲಿ ಹಗಲು – ರಾತ್ರಿ ಸಿಬಂದಿ ನಿಯೋಜಿಸಿ ತ್ಯಾಜ್ಯ ಹಾಕುವವರನ್ನು ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗಿದೆ.

ಈ ನಡುವೆ ಅಲ್ಲಲ್ಲಿ ತ್ಯಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಪುರಸಭೆಯ ಎಲ್ಲ ವಾರ್ಡ್‌ಗಳಲ್ಲಿ ಪ್ರತಿ ಮನೆಯ ತ್ಯಾಜ್ಯ ಸಂಗ್ರಹದ ದೃಷ್ಟಿಯಿಂದ 8 ವಾಹನಗಳು ಆಗಮಿಸಲಿದ್ದು, ಇವು ಗಳ ಕಾರ್ಯಾಚರಣೆ ಆರಂಭಗೊಂಡರೆ ಸಾರ್ವ ಜನಿಕರು ರಸ್ತೆ ಬದಿ ಅಥವಾ ನದಿಗೆ ತ್ಯಾಜ್ಯ ಎಸೆಯುವುದು ಕಡಿಮೆಯಾಗಲಿದೆ. ಈಗಲೂ ಸಾರ್ವಜನಿಕರು ತ್ಯಾಜ್ಯ ಇರುವ ಕುರಿತು ಪುರಸಭೆಗೆ ಕರೆ ಮಾಡಿ ಮಾಹಿತಿ ನೀಡಿದರೆ ತ್ಯಾಜ್ಯ ಸಂಗ್ರಹ ಕಾರ್ಯ ಮಾಡುತ್ತೇವೆ. ಆದರೂ ಸಾರ್ವಜನಿಕರು ರಸ್ತೆ ಬದಿ ತ್ಯಾಜ್ಯ ಎಸೆಯುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ತ್ಯಾಜ್ಯದ ಸಮಸ್ಯೆ?
ಪುರಸಭೆ ವ್ಯಾಪ್ತಿಯ ಬಿ.ಸಿ. ರೋಡ್‌ನ‌ ಲಯನ್ಸ್‌ ಸೇವಾ ಮಂದಿರ, ರಿಕ್ಷಾ ಭವನ, ರೈಲ್ವೇ ನಿಲ್ದಾಣ, ಟಿಎಚ್‌ಒ ಕಚೇರಿ, ಪಾಣೆಮಂಗಳೂರಿನಿಂದ ನಂದಾವರಕ್ಕೆ ಹೋಗುವ ರಸ್ತೆ, ಪಾಣೆಮಂಗಳೂರು ಸೇತುವೆ, ನಂದಾವರ ಶಾಲಾ ಬಳಿ, ಬ್ರಹ್ಮರಕೂಟ್ಲು, ಬಂಟ್ವಾಳ ಬಡ್ಡಕಟ್ಟೆ ಶ್ಮಶಾನದ ಬಳಿ ಹೀಗೆ ಹತ್ತಾರು ಕಡೆಗಳಲ್ಲಿ ರಾಶಿಗಟ್ಟಲೆ ತ್ಯಾಜ್ಯ ಕಂಡುಬರುತ್ತಿದೆ.

ನೇತ್ರಾವತಿ ನದಿ ಕಿನಾರೆಯಲ್ಲೂ ತ್ಯಾಜ್ಯ ವನ್ನು ನೇರವಾಗಿ ನದಿಗೆ ಬಿಡುವ ಕೆಲಸಗಳೂ ನಡೆಯುತ್ತಿದೆ. ಜತೆಗೆ ಕಿಡಿಗೇಡಿಗಳು ತಮ್ಮ ಮನೆಯ ತ್ಯಾಜ್ಯವನ್ನು ನದಿ, ರಸ್ತೆ ಬದಿಯಲ್ಲಿ ಹಾಕುವ ಕಾರ್ಯಮಾಡುತ್ತಿದ್ದಾರೆ. ಅಂತಹ ಕಿಡಿಗೇಡಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರೂ ಮತ್ತೆ ಮತ್ತೆ ಅದೇ ಸಮಸ್ಯೆ ಪುನರಾವರ್ತನೆಯಾಗುತ್ತಿದೆ.

ಟೆಂಡರ್‌ ಪ್ರಕ್ರಿಯೆ ಆರಂಭ
ಹಾಲಿ ಬಂಟ್ವಾಳ ಪುರಸಭೆಯಿಂದ ಮನೆ ಮನೆ ತ್ಯಾಜ್ಯ ಸಂಗ್ರಹ ಕಾರ್ಯ ನಡೆಯುತ್ತಿದ್ದರೂ ಇನ್ನೂ ಎಲ್ಲ ಕಡೆಗಳಲ್ಲೂ ಸಂಗ್ರಹ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. ಅಂದರೆ ತ್ಯಾಜ್ಯ ಸಂಗ್ರಹಿಸಲು 2 ಸ್ವಂತ ವಾಹನಗಳು ಹಾಗೂ 2 ಬಾಡಿಗೆ ವಾಹನಗಳು ಸಹಿತ ಒಟ್ಟು 4 ವಾಹನಗಳು ಕಾರ್ಯಾಚರಿಸುತ್ತಿವೆ.

ಆದರೆ ಇದರಿಂದ ಎಲ್ಲ ಕಡೆಗಳಿಗೂ ತಲುಪುವುದು ಅಸಾಧ್ಯವಾಗಿರುವುದರಿಂದ ನೂತನ 8 ತ್ಯಾಜ್ಯ ಸಂಗ್ರಹ ವಾಹನ ಖರೀದಿಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಆರಂಭಗೊಂಡಿದೆ. ಮುಂದಿನ ಒಂದೂವರೆ
ತಿಂಗಳಲ್ಲಿ ಈ ವಾಹನಗಳು ಕಾರ್ಯಾರಂಭದ ಕುರಿತು ಪುರಸಭೆಯ ಮೂಲಗಳು ತಿಳಿಸಿವೆ.
ಪುರಸಭೆಯಲ್ಲಿ 41 ಪೌರ ಕಾರ್ಮಿಕರು ದುಡಿಯುತ್ತಿದ್ದು, ನೂತನವಾಗಿ ಆಗಮಿಸುವ ವಾಹನಗಳಲ್ಲೂ ಇವರೇ ಕರ್ತವ್ಯ ನಿರ್ವಹಿಸಲಿದ್ದಾರೆ. ಆದರೆ ನೂತನ ವಾಹನಗಳಿಗೆ ಹೆಚ್ಚುವರಿಯಾಗಿ ಬೇಕಿರುವ ಚಾಲಕರನ್ನು ಪುರಸಭೆಯು ಹೊರಗುತ್ತಿಗೆಯಿಂದ ನೇಮಿಸಿಕೊಳ್ಳಲಿದೆ.

ಭಾರೀ ದಂಡ
ರಸ್ತೆ ಬದಿ, ನದಿಗೆ ತ್ಯಾಜ್ಯ ಎಸೆಯುವವರ ಕುರಿತು ಕ್ರಮ ಜರಗಿಸಲು ಪುರಸಭೆಯು ಪರಿಸರ ವಿಭಾಗದ ಮೂಲಕ ಹಗಲು-ರಾತ್ರಿ ಸಿಬಂದಿ ನಿಯೋಜನೆ ಮಾಡುವ ಕಾರ್ಯ ಮಾಡಿದೆ. ತ್ಯಾಜ್ಯ ಎಸೆಯುವರು ಕಂಡುಬಂದಲ್ಲಿ ಅವರಿಗೆ ಭಾರೀ ದಂಡ ವಿಧಿಸಲಿದ್ದೇವೆ. ಮುಂದೆ ಮನೆ ಮನೆ ಕಸ ಸಂಗ್ರಹಕ್ಕೆ 8 ವಾಹನಗಳು ಬರಲಿದ್ದು, ಟೆಂಡರ್‌ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
– ರಾಯಪ್ಪ, ಪ್ರಭಾರ ಮುಖ್ಯಾಧಿಕಾರಿ, ಬಂಟ್ವಾಳ

  ಕಿರಣ್‌ ಸರಪಾಡಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.