ನೀರು ಸರಬರಾಜಿಗೆ ಕ್ರಮ; ನೀರಿನ ಟ್ಯಾಂಕ್‌ಗಳ ಸ್ವಚ್ಛತೆ ಕಾಮಗಾರಿ

ವಿಟ್ಲ ಪಟ್ಟಣ ಪಂಚಾಯತ್‌

Team Udayavani, Mar 19, 2020, 5:34 AM IST

vittla-water

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ. ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತ ಸರಣಿ ಇದು.

ವಿಟ್ಲ ಪಟ್ಟಣ ಪಂಚಾಯತ್‌ವ್ಯಾಪ್ತಿಯ 18 ವಾರ್ಡ್‌ಗಳಲ್ಲಿ ನೀರು ಸರಬರಾಜು ಯೋಜನೆ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಕುಡಿಯುವ ನೀರಿನ ಗಂಭೀರ ಸಮಸ್ಯೆಯಿಲ್ಲ. ಕೆಲವೊಂದು ಪ್ರದೇಶಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ. ಅದನ್ನು ನಿವಾರಿಸಲು ಪ.ಪಂ. ಕ್ರಮ ತೆಗೆದುಕೊಂಡಿದೆ. ಜತೆಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿಯಲ್ಲಿ ತುಂಬಿರುವ ನೀರು ಊರಿನ ಜಲಮಟ್ಟ ವೃದ್ಧಿಗೆ ಕಾರಣವಾಗಿದೆ.

ವಿಟ್ಲ : ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿ ಪ್ರಸ್ತುತ ಕುಡಿಯುವ ನೀರಿಗೆ ಹಾಹಾಕಾರವಿಲ್ಲ. ಮೂರು ವರ್ಷಗಳ ಹಿಂದೆ ಜಲಸಂಪನ್ಮೂಲದ ಕೊರತೆ ಇತ್ತು. ಆಗ ಟ್ಯಾಂಕರ್‌ ನೀರು ಸರಬರಾಜು ಮಾಡಿದ್ದರೂ ಆ ಬಳಿಕ ಇಂತಹ‌ ಅನಿವಾರ್ಯ ಉಂಟಾಗಲಿಲ್ಲ. ಈ ವರ್ಷವೂ ಈ ತನಕ ನೀರಿನ ಸಮಸ್ಯೆ ಉಲ್ಬಣಗೊಂಡಿಲ್ಲ. ಸಣ್ಣ, ಪುಟ್ಟ ಸಮಸ್ಯೆಗಳಿವೆ. ಅದನ್ನು ನಿವಾರಿಸಲು ಮತ್ತು ನೀರು ಸರಬರಾಜು ಮಾಡುವ ಟ್ಯಾಂಕ್‌ಗಳನ್ನು ಸ್ವತ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

ಅಂತರ್ಜಲ ಮಟ್ಟ ಏರಿತೇ ?
ಪ.ಪಂ. ಅಧಿಕಾರ ಆರಂಭಿಸಿದ ವರ್ಷ ನೀರಿನ ಸಮಸ್ಯೆ ಇತ್ತು. ಮುಂದಿನ ಸಾಲಿನಲ್ಲಿ 7 ಕಡೆಗಳಲ್ಲಿ ಒಕ್ಕೆತ್ತೂರು ನದಿ ಮತ್ತು ತೋಡು ಗಳಿಗೆ 7 ತಾತ್ಕಾಲಿಕ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. ಅದರ ಪರಿಣಾಮ ಅಂತರ್ಜಲ ವೃದ್ಧಿಯಾಯಿತು. ಕಳೆದ ವರ್ಷವೂ ಆ ಯೋಜನೆಯನ್ನು ಮುಂದುವರಿಸಲಾಗಿತ್ತು. ಕಳೆದ ವರ್ಷ ಅದರ ಸಂಖ್ಯೆ 10ಕ್ಕೇರಿತ್ತು. ಪ್ರಸಕ್ತ ಸಾಲಿನಲ್ಲಿ ಅದೇ 10 ಅಣೆಕಟ್ಟುಗಳ ನಿರ್ಮಾಣವಾಗಿದೆ. ಅಣೆಕಟ್ಟುಗಳಲ್ಲಿ ಫೆಬ್ರವರಿ ತಿಂಗಳ ಕೊನೆಯವರೆಗೆ ನೀರಿನ ಉಳಿತಾಯವಿತ್ತು. ಇದರ ಪರಿಣಾಮ ಊರಿನಲ್ಲಿ ಜಲಮಟ್ಟ ವೃದ್ಧಿಯಾಗಿರುವುದು ಕಂಡು ಬರು ತ್ತಿದೆ. ಜತೆಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುಷ್ಕರಿಣಿಯಲ್ಲಿ ತುಂಬಿ ರುವ ನೀರು ಊರಿನ ಜಲಮಟ್ಟ ವೃದ್ಧಿಗೆ ಕಾರಣವಾಗಿದೆ. ಎಕ್ರೆಗಟ್ಟಲೆ ವಿಸ್ತಾರದ ಕೋಟಿಕೆರೆ, ಕಾಶಿಮಠ ಕೆರೆಗಳು ಅಂತರ್ಜಲ ಮಟ್ಟ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

ವಿವಿಧ ಅನುದಾನ
ಪ. ಪಂ. ವ್ಯಾಪ್ತಿಯ 18 ವಾರ್ಡ್‌ ಗಳಲ್ಲಿ ನೀರು ಸರಬರಾಜು ಯೋಜನೆ ಕಾರ್ಯನಿರ್ವಹಿಸುತ್ತಿದೆ. ಸರಕಾರದ ಎಸ್‌ಎಫ್‌ಸಿ ಅನುದಾನದಲ್ಲಿ ಕುಡಿ ಯುವ ನೀರು ಯೋಜನೆ, ಎಸ್‌ಎಫ್‌ಸಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಅನುದಾನ, ಜಿಲ್ಲಾಧಿಕಾರಿಯವರ ಬರ ಪರಿಹಾರ ನಿಧಿ, ಪುರಸಭಾ ನಿಧಿಯ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಅನೇಕ ಸಾಂಪ್ರದಾಯಿಕ ಜಲಶೇಖರಣೆ ಯೋಜನೆಗಳ ಮೂಲಕವೂ ಸಮಸ್ಯೆ ಯನ್ನು ಬಗೆಹರಿಸಲು ಪ್ರಯತ್ನಿಸಿದೆ.

33 ಟ್ಯಾಂಕ್‌ಗಳು
ಉಕ್ಕುಡ, ನೆಲ್ಲಿಗುಡ್ಡೆ, ಮೇಗಿನ ಪೇಟೆ, ಕಲ್ಲಕಟ್ಟ ಎಂಬಲ್ಲಿ ಸರಕಾರದ ತೆರೆದ ಬಾವಿಗಳ ನೀರನ್ನು ಬಳಕೆ ಮಾಡಲಾಗುತ್ತಿದೆ. ಒಕ್ಕೆತ್ತೂರು ಮೂಲೆ, ಒಕ್ಕೆತ್ತೂರು, ಕೊಳಂಬೆ, ಬೊಳಂತಿ ಮೊಗರು, ಕೆದುಮೂಲೆ, ನೆಕ್ಕಿಲಾರು, ಪಳಿಕೆ, ಪಳಿಕೆ ಕಾಲೊನಿ, ಸೀಗೆಬಲ್ಲೆ, ಡಿಗ್ರಿ ಕಾಲೇಜು ಬಳಿ, ವನಭೋಜನ, ಕೆಮ್ಮಲೆ, ನವಗ್ರಾಮ, ಸುರುಳಿಮೂಲೆ, ಅನ್ನಮೂಲೆ, ಐಇಬಿ, ಇರಂದೂರು ಪಡೀಲು, ನೆಕ್ಕರೆಕಾಡು ಆನಂದ ನಾಯ್ಕರ ಮನೆಯ ಬಳಿ, ನೆಕ್ಕರೆಕಾಡು ರಕ್ಷಿತಾರಣ್ಯದ ಬಳಿ, ಉಕ್ಕುಡ ದರ್ಬೆ, ಉಕ್ಕುಡ ದರ್ಬೆಯ ಜನತಾ ಕಾಲನಿ, ವಿಟ್ಲ ಮೇಗಿನಪೇಟೆ, ಸಿಸಿಪಿಸಿಆರ್‌ಐ, ಉಕ್ಕುಡ ಸರೋಳಿ, ಉಕ್ಕುಡ ಅರಣ್ಯ ಇಲಾಖೆ ಬಳಿ, ಕಾಶಿಮಠ, ಪುಚ್ಚೆಗುತ್ತು ಎಂಬಲ್ಲಿ ಎರಡು ಕಡೆ, ಬಸವನಗುಡಿ, ಚಂದಳಿಕೆ ಕಲ್ಲಕಟ್ಟ ಬಳಿ, ಕುರುಂಬಳ ಈಶ್ವರ ಪುರುಷ ಮನೆ ಬಳಿ ಒಟ್ಟು 33 ಸ್ಥಳಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ವಿಟ್ಲ ಪ್ರವಾಸಿ ಮಂದಿರದ ಬಳಿಯ ಟ್ಯಾಂಕ್‌ 2 ಲಕ್ಷ ಲೀ. ಸಾಮರ್ಥ್ಯ ಹೊಂದಿದೆ. ಈ ಟ್ಯಾಂಕ್‌ನಲ್ಲಿ ನೀರಿನಲ್ಲಿ ಬಿಳಿಯ ಅಂಟು ನಿರ್ಮಾಣವಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರ ದೂರು ಬಂದಿತ್ತು. ಪಟ್ಟಣ ಪಂಚಾಯತ್‌ ಸಾಮಾನ್ಯ ಸಭೆ ಯಲ್ಲೂ ಈ ವಿಷಯ ಪ್ರಸ್ತಾವವಾಗಿತ್ತು. ಇದನ್ನು ಮನಗಂಡು ಎಲ್ಲ ಟ್ಯಾಂಕ್‌ಗಳನ್ನು ಸ್ವತ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕೆಲವು ಟ್ಯಾಂಕ್‌ಗಳ ಸ್ವತ್ಛತೆ ಕಾಮಗಾರಿ ಪೂರ್ಣಗೊಂಡಿದೆ.

ಸಮಗ್ರ ಕುಡಿಯುವ ನೀರಿನ ಯೋಜನೆ
ವಿಟ್ಲ ಪ.ಪಂ.ಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಲಭ್ಯವಾಗಿಲ್ಲ. ಆದರೆ ಬರಿಮಾರು ಕಾಗೆಕಾನ ಎಂಬಲ್ಲಿ ನೇತ್ರಾವತಿ ನದಿಯಿಂದ ಸಮಗ್ರ ಕುಡಿಯುವ ನೀರಿನ ಯೋಜನೆ (ಕೆಯುಡಬ್ಲ್ಯುಎಸ್‌) ರೂಪಿಸಲಾಗಿದ್ದು, ಈಗಾಗಲೇ 15 ಲಕ್ಷ ರೂ. ಡಿಪಿಆರ್‌ ಮಾಡಲು ಪಾವತಿಸಲಾಗಿದೆ. ಇದು ರೂ. 9 ಕೋ.ಗೂ ಹೆಚ್ಚು ಮೊತ್ತದ ಯೋಜನೆಯಾಗಿದ್ದು, ಅನುಷ್ಠಾನವಾದಾಗ ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಬರ ಇರದು. ಆದರೆ ಡಿಪಿಆರ್‌ಗೆ ಇನ್ನು 8 ಲಕ್ಷ ರೂ. ಪಾವತಿಸಲು ಬಾಕಿಯಿದೆ. ಅದನ್ನು ಪಾವತಿಸದೇ ಕೆಯು ಡಬ್ಲ್ಯುಎಸ್‌ ಮುಂದಿನ ಕ್ರಮ ಕೈಗೊಂಡಿಲ್ಲ. 8 ಲಕ್ಷ ರೂ.ಗಳನ್ನು 2020-21ನೇ ಸಾಲಿನಲ್ಲಿ ಪಾವತಿಸಲು ಪಂ. ತೀರ್ಮಾನಿಸಿದೆ.

ಸೇರಾಜೆಯಲ್ಲಿ ಸ್ವಲ್ಪ ಮಟ್ಟಿನ ಸಮಸ್ಯೆ
ಸೇರಾಜೆಯಲ್ಲಿ ಸ್ವಲ್ಪ ನೀರಿನ ಸಮಸ್ಯೆಯಿದೆ. ಅದಕ್ಕೆ ಕೊಳವೆಬಾವಿ ಕೊರೆಯಲು ತೀರ್ಮಾನಿಸಲಾಗಿದೆ. ಮಂಗಳವಾರ ಕೊಳವೆಬಾವಿ ಕೊರೆಯುವ ಯಂತ್ರ ಬಂದಾಗ ನೀರಕಣಿ ಮತ್ತು ಇನ್ನೊಂದು ಕಡೆ ಸಾರ್ವಜನಿಕರ ಆಕ್ಷೇಪ ಬಂದು, ಕಾಮಗಾರಿ ಸ್ಥಗಿತಗೊಂಡಿದೆ. ಅದನ್ನು ಪರಿಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಟ್ಯಾಂಕ್‌ಗಳನ್ನು ಸ್ವತ್ಛಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಆದಷ್ಟು ಬೇಗನೆ ಪೂರ್ಣಗೊಳ್ಳಲಿದೆ. ಅತಿಥಿಗೃಹದ ಬಳಿಯಿರುವ ಟ್ಯಾಂಕ್‌ ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ ನೀರಿನ ಸಮಸ್ಯೆ ಗಂಭೀರವಾಗದಂತೆ ಜಾಗರೂಕತೆ ವಹಿಸುತ್ತೇವೆ. ಮುಂದಿನ ದಿನಗಳಲ್ಲಿ ಅನುದಾನ ಕಾಯ್ದಿರಿಸುತ್ತೇವೆ.
– ದಮಯಂತಿ, ಅಧ್ಯಕ್ಷರು, ವಿಟ್ಲ ಪಟ್ಟಣ ಪಂಚಾಯತ್‌

ಸೂಕ್ತ ಕ್ರಮ ಕೈಗೊಳ್ಳಲಾಗಿದೆ
ಪ್ರಸಕ್ತ ಸಾಲಿನಲ್ಲಿ ಈ ತನಕ ಯಾವುದೇ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಲ್ಬಣ ಗೊಂಡಿಲ್ಲ. ತಾತ್ಕಾಲಿಕ ಅಣೆಕಟ್ಟೆಗಳು ಉಪಯುಕ್ತವಾಗಿವೆ. ನೀರು ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. 23 ಲಕ್ಷ ರೂ. ಪಾವತಿಸಿ, ನೇತ್ರಾವತಿ ನದಿಯಿಂದ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿತ್ತು. ಹಣವಿಲ್ಲದೆ ಎಲ್ಲವನ್ನೂ ಪಾವತಿಸಲಾಗಿರಲಿಲ್ಲ. 15 ಲಕ್ಷ ರೂ. ಪಾವತಿಸಲಾಗಿದ್ದು, ಬಾಕಿಯುಳಿದ ಮೊತ್ತವನ್ನು ಮುಂದಿನ ಸಾಲಿನಲ್ಲಿ ಪಾವತಿಸಿ, ಅನುಷ್ಠಾನಗೊಳಿಸಲು ಪ್ರಯತ್ನಿಸಲಾಗುವುದು.
– ಮಾಲಿನಿ, ಮುಖ್ಯಾಧಿಕಾರಿ, ವಿಟ್ಲ ಪಟ್ಟಣ ಪಂಚಾಯತ್‌

-  ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.