ಬುಕ್ ಮಾಡಿದ್ದು ಚಪ್ಪಲಿ; ಬಂದದ್ದು ವಿಷದ ಬಾಟಲಿ !
Team Udayavani, Nov 28, 2019, 4:30 AM IST
ಸಾಂದರ್ಭಿಕ ಚಿತ್ರ
ಕುಂಬಳೆ: ಪ್ರಸಿದ್ಧ ಕಂಪೆನಿಯಲ್ಲಿ ಆನ್ಲೈನ್ ಮೂಲಕ ಚಪ್ಪಲಿ ಬುಕ್ ಮಾಡಿದ ವ್ಯಕ್ತಿಯೋರ್ವರಿಗೆ ಇಲಿ ವಿಷ ತುಂಬಿದ ಬಾಟಲಿಯ ಪಾರ್ಸೆಲ್ ಕೈ ಸೇರಿದ ಅಚ್ಚರಿಯ ಘಟನೆ ಪೈವಳಿಕೆಯ ಬಾಯಾರಿನಲ್ಲಿ ಸಂಭವಿಸಿದೆ.
ಬಾಯಾರು ಪಟ್ಲದ ಕೃಷಿಕ ಪ್ರವೀಣ್ ರೈ ಅವರು 700 ರೂ. ಪಾವತಿಸಿ ಹೆಸರಾಂತ ಕಂಪೆನಿಯಲ್ಲಿ ಚಪ್ಪಲಿ ಬುಕ್ಕಿಂಗ್ ಮಾಡಿದ್ದರು. 779 ರೂ. ಪಾವತಿಸಿ ಪಾರ್ಸೆಲ್ ತೆರೆದು ನೋಡಿದಾಗ ಎರಡು ವಿಷದ ಬಾಟಲಿಗಳು ಕಂಡು ಬಂದವು. ತತ್ಕ್ಷಣ ಪ್ರವೀಣ್ ಕಂಪೆನಿಗೆ ಕರೆ ಮಾಡಿದಾಗ ಅಚಾತುರ್ಯದಿಂದ ಪ್ರಮಾದವಾಗಿರುವುದಾಗಿ ಕ್ಷಮೆಯಾಚಿಸಿ ಚಪ್ಪಲಿಯನ್ನು ಶೀಘ್ರ ಕಳುಹಿಸುವುದಾಗಿ ಭರವಸೆ ನೀಡಿದರು.