ಪಿಲಿಗೂಡು ಶಾಲಾ ಆವರಣದಲ್ಲಿ ಕಂಗೊಳಿಸಿದ ಪಚ್ಚೆ ಪೈರು

Team Udayavani, Jul 10, 2019, 5:00 AM IST

ಬೆಳ್ತಂಗಡಿ: ಎಳವೆಯಿಂದಲೇ ಕೃಷಿಯತ್ತ ಒಲವು ಬೆಳೆಸುವ ಉದ್ದೇಶ ದಿಂದ ತಾ|ನ ಕಣಿಯೂರು ಗ್ರಾ.ಪಂ.ನ ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲೇ ಹೊಲ ಉತ್ತು ಪಚ್ಚೆ ಪೈರು ಹಸನಾಗಿಸಿದ ಯಶೋಗಾಥೆಯಿದು.

ಶಿಕ್ಷಣವನ್ನು ಪ್ರತ್ಯಕ್ಷವಾಗಿ ಅನು ಭವಿಸಿದಾಗ ಜ್ಞಾನ ಸಂಪಾದನೆ ಜತೆಗೆ ಅರಿವು ಮೂಡಿಸಲು ಸಾಧ್ಯ. ಗದ್ದೆ ಎಂದರೆ ಏನು, ಅಕ್ಕಿ ಹೇಗೆ ಸಿದ್ಧವಾಗುತ್ತದೆ ಎಂಬ ಅರಿವಿರದ ಸ್ಥಿತಿ ಮುಂದಿನ ಜನಾಂಗಕ್ಕೆ ಬರಬಾರ ದೆನ್ನುವ ನಿಟ್ಟಿನಲ್ಲಿ ಶಿಕ್ಷಕರು, ಶಾಲಾಭಿ ವೃದ್ಧಿ ಸಮಿತಿ, ಹಳೇ ವಿದ್ಯಾರ್ಥಿಗಳ ಸಲಹೆಯಂತೆ ಶಾಲೆಯಲ್ಲೇ ಗದ್ದೆ ನಿರ್ಮಾಣ ಮಾಡಲಾಗಿದೆ.

ಶಾಲೆಯ 1.54 ಎಕ್ರೆ ಸ್ಥಳಾವಕಾಶ ದಲ್ಲಿ 20 ಸೆಂಟ್ಸ್‌ ಸ್ಥಳದಲ್ಲಿ ಗದ್ದೆ ನಿರ್ಮಿಸಿ ಹೊಸ ಹೆಜ್ಜೆ ಇರಿಸಿದೆ. ಈಗಾಗಲೇ ಅಕ್ಷರ ಕೈತೋಟ ನಿರ್ಮಿಸುವ ಮೂಲಕ 182 ಅಡಿಕೆ ಗಿಡ, 60 ತೆಂಗು ಬೆಳೆದು ತಾ|ಗೆ ಮಾದರಿ ಶಾಲೆ ಎಂಬ ಹೆಗ್ಗಳಿ ಕೆಗೆ ಪಾತ್ರವಾಗಿತ್ತು ಇದೀಗ ಒಂದು ಹೆಜ್ಜೆ ಮುಂದೆ ಬಂದು ಸರಕಾರಿ ಶಾಲೆ ಉನ್ನತಿಗೆ ಹೊಸ ಆಯಾಮ ಬರೆದಿದೆ.

ದಾನಿಗಳ ನೆರವು
20 ಸೆಂಟ್ಸ್‌ ಸ್ಥಳಾವಕಾಶದಲ್ಲಿ 10 ದಿನ ಗಳಲ್ಲಿ ಗದ್ದೆ ಸಿದ್ಧವಾಗಿ ಉತ್ತು, ನೇಜಿ ನೆಡ ಲಾಗಿತ್ತು. ಸ್ಥಳೀಯ ರಾಜಕಮಲ್ ಕನ್‌ಸ್ಟ್ರಕ್ಷನ್‌ ಮಾಲಕರು ಜೆಸಿಬಿಯಿಂದ ಮಣ್ಣು ಹದಾಗೊಳಿಸಿ, ಅಬ್ದುಲ್ ಖಾದರ್‌ ಕೋಡಿ ಯೇಲು ಒದಗಿಸಿದ 100 ಬಟ್ಟಿ ಸೆಗಣಿ, ಚಂದ್ರಾಯ ಆಚಾರ್‌ ನೀಡಿದ 10 ಬ್ಯಾಗ್‌ ಬೂದಿ, ಕೊರಗಪ್ಪ ಪೂಜಾರಿ ನೀಡಿದ ನೇಜಿ ಗದ್ದೆ ಹಚ್ಚ ಹಸುರಾಗುವಲ್ಲಿ ಸಾಕ್ಷಿಯಾಗಿದೆ.

ಪಾಡ್ದನ ಹಾಡು
ಹಿಂದಿನ ಮಾದರಿಯಲ್ಲಿ ಮಹಿಳೆಯ ರಿಂದ ಪಾಡ್ದನ ಹಾಡಿಸಿ, ಗ್ರಾಮ ಪಂಚಾಯತ್‌ ಅಧ್ಯಕ್ಷ ಸುನಿಲ್ ಸಾಲ್ಯಾನ್‌ ಬೇಂಗಾಯಿ ನೇಜಿ ಗದ್ದೆಯಲ್ಲಿ ದೀಪ ಬೆಳಗಿಸಿ ಕೆಲಸಕ್ಕೆ ಚಾಲನೆ ನೀಡಲಾಗಿತ್ತು ಹಳೇ ವಿದ್ಯಾರ್ಥಿಗಳು, ಮಕ್ಕಳು, ಶಿಕ್ಷಕರು, ವಿದ್ಯಾಭಿಮಾನಿಗಳು ಜತೆಗೂಡಿ ನೇಜಿ ನೆಟ್ಟು ಖುಷಿ ಪಟ್ಟರು.

ಗದ್ದೆ ಕಲ್ಪನೆ ಸಾಕಾರ
ಸರಕಾರಿ ಶಾಲೆಯಲ್ಲಿ ಅಧ್ಯಾಪಕರು ತಮ್ಮನ್ನು ತಾವು ತೊಡಗಿಸುವ ಜತೆಗೆ ಸ್ಥಳೀಯರು ಶಾಲೆ ಬೆಳವಣಿಗೆಗೆ ಸಹಕಾರ ನೀಡುತ್ತಾರೆ. ಇವುಗಳು ಶಾಲೆಯ ಕೀರ್ತಿಗೆ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಹಕಾರಿ. ಮಕ್ಕಳು ಗದ್ದೆ ಬೇಸಾಯ ಅನುಭವ ಸಿಗುವ ಸಲುವಾಗಿ, ಭತ್ತ ಹೇಗೆ ಬೆಳೆಯುತ್ತೇವೆ ಎಂಬ ಕಲ್ಪನೆ ಮಕ್ಕಳಿಗೆ ನೀಡುವ ದೃಷ್ಟಿಯಿಂದ ಗದ್ದೆ ಕಲ್ಪನೆ ಸಾಕಾರಗೊಂಡಿದೆ.
– ಲೀಲಾವತಿ ಕೆ., ಪ್ರಭಾರ ಮುಖ್ಯೋಪಾಧ್ಯಾಯಿನಿ

ಕೃಷಿಯೆಡೆಗೆ ಒಲವು
ಎಲ್ಲರ ಸಹಕಾರದಿಂದ ಶಾಲೆಯಲ್ಲಿ ಹೊಸ ಕಲ್ಪನೆ ಅಳವಡಿಸಿದ್ದೇವೆ. ಮಕ್ಕಳು ಇದರ ಪ್ರಯೋಜನ ಪಡೆಯುವುದರೊಂದಿಗೆ ಕೃಷಿಯೆಡೆಗೆ ಒಲವು ಬೆಳೆಸುವ ಸದುದ್ದೇಶ ನಮ್ಮದು. ವಿಮುಖವಾಗುತ್ತಿರುವ ಕೃಷಿ ಕೈಹಿಡಿಯುವ ಜವಾಬ್ದಾರಿ ಮಕ್ಕಳಲ್ಲಿ ಬೆಳೆಸುವುದು ಉದ್ದೇಶ.
– ಇಸ್ಮಾಯಿಲ್, ಅಧ್ಯಕ್ಷರು, ಎಸ್‌.ಡಿ.ಎಂ.ಸಿ.

ಊರಿನವರಿಂದ ಕೊಡುಗೆ

ಸುಮಾರು 15 ಸಾವಿರ ರೂ.ವರೆಗೆ ತಗಲುವ ಖರ್ಚಿನ ಕೆಲಸವನ್ನು ಊರವರು ಉಚಿತವಾಗಿ ಮಾಡಿದ್ದಾರೆ. ಸುಮಾರು 2 ಕ್ವಿಂ.ಅಕ್ಕಿ ನಿರೀಕ್ಷಿಸಲಾಗಿದೆ. ಮಕ್ಕಳು ತಾವೇ ಕೈ ಕೆಸರಾಗಿಸಿ ಬೆಳೆಸಿದ ಪೈರಿನಿಂದ ಬಂದ ಅಕ್ಕಿ ಅನ್ನವಾಗಿಸಿ ಸ್ವಾಧಿಸುವ ತವಕದಲ್ಲಿದ್ದಾರೆ. ಶಿಕ್ಷರ ಅಭಿಪ್ರಾಯದಂತೆ ಸುಮಾರು ಎರಡು ತಿಂಗಳು ಬಿಸಿಯೂಟಕ್ಕೆ ಪ್ರಯೋಜನ ಬರಲಿದೆ. ಹಿಂದಿನ ಸಂಪ್ರದಾಯದಂತೆ ಹೊಸ ಅಕ್ಕಿ ಊಟ ಮಾಡುವ ಅಂಬೋಣ ವ್ಯಕ್ತಪಡಿಸಿದ್ದಾರೆ.

•ಚೈತ್ರೇಶ್‌ ಇಳಂತಿಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ನಗರದಲ್ಲಿ ಆಸ್ತಿ ಮಾಲೀಕರಿಂದ ಆಸ್ತಿ ತೆರಿಗೆಯೊಂದಿಗೆ ಶೇ.2ರಷ್ಟು ಭೂ ಸಾರಿಗೆ ಉಪ ಕರ (ಸೆಸ್‌) ವಸೂಲಿ ಮಾಡುವ ಬಿಬಿಎಂಪಿ ನಿರ್ಣಯಕ್ಕೆ ಸಾರ್ವಜನಿಕ ವಲಯದಿಂದ...

  • ಬೆಂಗಳೂರು: ನೆರೆ ಸಂತ್ರಸ್ತರು ತ್ವರಿತವಾಗಿ ಎರಡನೇ ಕಂತಿನ ಹಣವನ್ನು ಪಡೆದು ಮನೆಗಳನ್ನು ಮೂರು ತಿಂಗಳಲ್ಲಿ ನಿರ್ಮಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌...

  • ಮುಖ್ಯಮಂತ್ರಿ ಯಡಿಯೂರಪ್ಪ ಅವರ ದೆಹಲಿ ಭೇಟಿ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಾದ ಚರ್ಚೆ ಗರಿಗೆದರುತ್ತಿದ್ದು, ಸಚಿವಾಕಾಂಕ್ಷಿಗಳಲ್ಲಿ...

  • ಬೆಂಗಳೂರು: ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಶೇ.49 ಹುದ್ದೆಗಳನ್ನು ಭರ್ತಿ ಮಾಡಿ ಕೊಳ್ಳುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು...

  • ಬೆಂಗಳೂರು: ಶಿಕ್ಷಣ ಇಲಾಖೆಯಲ್ಲಿ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ವರ್ಗಾವಣೆ ಹೊಂದಿರುವ ಶಿಕ್ಷಕರು ಮುಂಬಡ್ತಿಯಿಂದಲೂ ವಂಚಿತರಾಗುತ್ತಿದ್ದಾರೆ. 2006ಕ್ಕಿಂತ...