ಕತ್ತು ಹಿಡಿದು ಮಹಿಳೆಗೆ ಕಿರುಕುಳ

ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ; ಆರೋಪಿ ಬಂಧನ

Team Udayavani, Nov 20, 2019, 12:05 AM IST

ಕಡಬ: ಪುತ್ತೂರಿನಿಂದ ನೆಟ್ಟಣಕ್ಕೆ ಸಂಚರಿಸುತ್ತಿದ್ದ ಲೋಕಲ್‌ ರೈಲಿನಲ್ಲಿ ಪುತ್ತೂರಿನಿಂದ ಎಡಮಂಗಲಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯ ಕುತ್ತಿಗೆ ಒತ್ತಿ ಹಿಡಿದು ಕಿರುಕುಳ ನೀಡಿದ ಆರೋಪಿಯನ್ನು ರೈಲ್ವೇ ಸಿಬಂದಿ ಹಾಗೂ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳವಾರ ಸಂಭವಿಸಿದೆ.

ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ಪ್ರಿಂಟಿಂಗ್‌ ಪ್ರಸ್‌ ಹೊಂದಿರುವ ಆಶಾ ಮೋಹನ್‌ ಅವರು ಮಂಗಳವಾರ ಮಧ್ಯಾಹ್ನ ಎಡಮಂಗಲದಲ್ಲಿರುವ ತನ್ನ ಮಾವನ ಮನೆಗೆ ರೈಲಿ ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಸವಣೂರು ಸಮೀಪ ತಲುಪು ತ್ತಿದ್ದಂತೆಯೇ ಅದೇ ಬೋಗಿಯಲ್ಲಿದ್ದ ಯುವಕನೋರ್ವ ಎದ್ದು ಬಂದು ಆಶಾ ಅವರ ಕತ್ತಿಗೆಗೆ ಕೈ ಹಾಕಿ ಹಿಸುಕಿದ್ದಾನೆ.

ಈ ಹಠಾತ್‌ ಬೆಳವಣಿಗೆಯಿಂದ ಭಯಭೀತರಾದ ಮಹಿಳೆ ಜೀವ ಭಯದಿಂದ ಬೊಬ್ಬೆ ಹೊಡೆದಾಗ ರೈಲ್ವೇ ಸಿಬಂದಿ ಹಾಗೂ ಸಹ ಪ್ರಯಾಣಿಕರು ಬಂದು ಆರೋಪಿಯನ್ನು ಹಿಡಿದ್ದಾರೆ. ಆರೋಪಿಯನ್ನು ನೆಟ್ಟಣರೈಲು ನಿಲ್ದಾ ಣದಲ್ಲಿ ಹಿಡಿದಿಟ್ಟು ಕಡಬ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆರೋಪಿಯನ್ನು ಕೊಂಬಾರು ಗ್ರಾಮದ ಬೊಟ್ಟಡ್ಕ ನಿವಾಸಿ ಸತೀಶ್‌ ಎಂದು ಸ್ಥಳೀಯರು ಗುರುತಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಡಬ ಪೊಲೀಸರು ಮಹಿಳೆಯ ದೂರಿನಂತೆ ಆರೋಪಿಯನ್ನು ವಶಕ್ಕೆ ಪಡೆದರು.

ಆರೋಪಿ ಸತೀಶ್‌ ಮಾನಸಿಕ ಅಸ್ವಸ್ಥ
ಆರೋಪಿ ಸತೀಶ್‌ ಮಾನಸಿಕ ಅಸ್ವಸ್ಥನಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಆತನನ್ನು 4 ದಿನಗಳ ಹಿಂದೆಯಷ್ಟೇ ಮನೆಗೆ ಕರೆತರಲಾಗಿತ್ತು. ಸೋಮವಾರ ಬೆಳಗ್ಗೆ ಮನೆಯವರ ಕಣ್ಣುತಪ್ಪಿಸಿ ಹೊರ ಹೋಗಿದ್ದ ಆತ ಮನೆಗೆ ಹಿಂದಿರುಗದೆ ಇದ್ದುದರಿಂದ ನಾವು ಆತನನ್ನು ಹುಡುಕುತ್ತಿದ್ದೆವು ಎಂದು ಸತೀಶನ ತಾಯಿ ಆತನ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಕಾಗದಪತ್ರಗಳೊಂದಿಗೆ ಕಡಬ ಠಾಣೆಗೆ ಆಗಮಿಸಿ ಮಾಹಿತಿ ನೀಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ