ಕೋಲ್ಕತಾ ಫಿಲಂ ಫೆಸ್ಟ್‌ನಲ್ಲಿ ಬೆಯಿಲ್‌ ಕೋಲು ಪ್ರದರ್ಶನ

ಇಂದ್ರಪ್ರಸ್ಥದ ಸಿಮ್ರಿನ್‌, ಸಾನಿಯಾ ಅಭಿನಯ

Team Udayavani, Nov 14, 2019, 5:35 AM IST

ಉಪ್ಪಿನಂಗಡಿ: ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಸಿಮ್ರಿನ್‌, ಸಾನಿಯಾ ಅಭಿನಯದ ಬೆಯಿಲ್‌ ಕೋಲು ಹೆಸರಿನ ಬ್ಯಾರಿ ಭಾಷೆಯ ಚಿತ್ರ ಕೋಲ್ಕತಾ ಇಂಟರ್‌ನ್ಯಾಶನಲ್‌ ಫಿಲಂ ಫೆಸ್ಟಿವಲ್‌ನಲ್ಲಿ ನ. 15ರಂದು ಅಪರಾಹ್ನ 2 ಗಂಟೆಗೆ ಪ್ರದರ್ಶನ ಕಾಣಲಿದೆ.

ಈ ಚಿತ್ರಕ್ಕೆ ಉಪ್ಪಿನಂಗಡಿಯ ರಾಜ್ಯಪ್ರಶಸ್ತಿ ಪುರಸ್ಕೃತ ನಟ ಎಂ.ಕೆ. ಮಠ ಸಂಭಾಷಣೆ ಬರೆದಿದ್ದಾರಲ್ಲದೆ ಮನೆಯ ಯಜಮಾನನಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಂತನು ಗಂಗೂಲಿ ಅವರು ನಿರ್ದೇಶನ ಮಾಡಿದ್ದು, ಮಂಜು ಪಾಂಡವಪುರ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಪಿ.ವಿ.ಆರ್‌. ಸ್ವಾಮಿ ಛಾಯಾಗ್ರಹಣ ಮಾಡಿದ್ದು, ನಿತೀಶ್‌ ಕುಮಾರ್‌ ಸಂಕಲನ ಮಾಡಿದ್ದಾರೆ.

ದಕ್ಷಿಣ ಕನ್ನಡದ ರಂಗಭೂಮಿಯ ಕಲಾವಿದರಾದ ಚಂದ್ರಹಾಸ ಉಳ್ಳಾಲ, ರೂಪಶ್ರೀ ವರ್ಕಾಡಿ, ಪತ್ರಕರ್ತ ಆಜಾದ್‌ ಖಂಡಿಗ, ಮಾಸ್ಟರ್‌ ಧನುಷ್‌ ಮಣಿಪಾಲ, ಭವ್ಯ ಕೆ., ಸಂದೀಪ್‌ ಕುಮಾರ್‌ ಉಡುಪಿ, ಭಾಸ್ಕರ್‌ ಮಣಿಪಾಲ್‌ ಮೊದಲಾದವರು ಅಭಿನಯಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕಡೂರು: ತಾಲೂಕಿಗೆ ಕೃಷ್ಣಾ ಕೊಳ್ಳದಿಂದ ಮಂಜೂರಾಗಿರುವ 1.45 ಟಿಎಂಸಿ ನೀರಿನ ಸದುಪಯೋಗ ಸಂಪೂರ್ಣವಾಗಿ ತಾಲೂಕಿಗೆ ಲಭಿಸಲಿ ಎಂದು ಮಾಜಿ ಶಾಸಕ ವೈ.ಎಸ್‌.ವಿ ದತ್ತ ಹೇಳಿದರು. ಸುದ್ದಿಗೋಷ್ಠಿಯಲ್ಲಿ...

  • ಚಿತ್ರದುರ್ಗ: ಕಳೆದೊಂದು ವಾರದಿಂದ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಕಡೆಗೂ ಸೆರೆ ಹಿಡಿಯಲಾಗಿದೆ. ದಸರಾ ಆನೆ ಅಭಿಮನ್ಯು ನೇತೃತ್ವದ...

  • ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ವಿಭೂತಿಕೆರೆ ಗ್ರಾಮದ ಮಾವಿನ ತೋಟವೊಂದರಲ್ಲಿ ಶನಿವಾರ ರಾತ್ರಿ ನಡೆಯುತ್ತಿದ್ದ ಅಕ್ರಮ ರೇವ್‌ ಪಾರ್ಟಿಯ ಮೇಲೆ ಗ್ರಾಮಾಂತರ...

  • ತಿರುವನಂತಪುರಂ:  ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಕೇರಳದ ವಿಕೆಟ್‌ ಕೀಪರ್‌, ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌, ತಿರುವನಂತಪುರಂಗೆ ಭಾರತ ತಂಡದೊಂದಿಗೆ...

  • ಹರಪನಹಳ್ಳಿ: ಮುಂದಿನ ದಿನಗಳಲ್ಲಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರು...