ಪೆರಿಯತ್ತೋಡಿ, ಸಿಂಗಾಣಿ ಪ್ರದೇಶದಲ್ಲಿ ನೀರಿಗೆ ತತ್ವಾರ

ಬತ್ತಿದ ಬಾವಿ, ಕೊಳವೆಬಾವಿ: 20ಕ್ಕೂ ಹೆಚ್ಚು ಮನೆಗಳಿಗೆ ಸಮಸ್ಯೆ, ನೀರು ಹೊತ್ತು ತರುವ ಸ್ಥಿತಿ

Team Udayavani, Jun 4, 2019, 6:00 AM IST

ಪೆರಿಯತ್ತೋಡಿ, ಸಿಂಗಾಣಿ ಪ್ರದೇಶದಲ್ಲಿ ನೀರಿಗಾಗಿ ಕಾಯುತ್ತಿರುವ ನಿವಾಸಿಗಳು

ನಗರ: ನಗರಸಭಾ ವ್ಯಾಪ್ತಿಯ ಪೆರಿಯತ್ತೋಡಿ, ಸಿಂಗಾಣಿ ಪ್ರದೇಶದ ಜನರ ನೀರಿಗೆ ಸಂಬಂಧಿಸಿದ ಬವಣೆ ತೀವ್ರಗೊಂಡಿದೆ. ಬೇಸಗೆಯಲ್ಲಿ ಇಲ್ಲಿ ನೀರಿನ ಸಮಸ್ಯೆ ನಿತ್ಯ ನಿರಂತರ ಎನ್ನುವಂತಾಗಿದ್ದು, ಈ ಪರಿಸರದ ಜನತೆ ಕಿಲೋ ಮೀಟರ್‌ ದೂರದಿಂದ ನೀರು ತರುವ ಪರಿಸ್ಥಿತಿ ಒಂದೆಡೆಯಾದರೆ, ಟ್ಯಾಂಕರ್‌ಗಳಲ್ಲಿ ಬರುವ ನಗರಸಭೆಯ ನೀರಿಗಾಗಿ ಕಾಯುವ ಪರಿಸ್ಥಿತಿ ಇನ್ನೊಂಡೆದೆ.

ನಗರದಿಂದ ಬಪ್ಪಳಿಗೆ ಮೂಲಕ ಬಲಾ°ಡು ಬಳಿ ಎಡಕ್ಕೆ ಒಳ ರಸ್ತೆಯಲ್ಲಿ ಚಲಿಸಿದರೆ ಈ ಸಿಂಗಾಣಿ, ಪೆರಿಯತ್ತೋಡಿ ಪ್ರದೇಶ ಸಿಗುತ್ತದೆ. ಈ ರಸ್ತೆ ಇನ್ನೊಂದು ಭಾಗದಿಂದ ಮಂಜಲ್ಪಡ³ನ್ನು ಸಂಪರ್ಕಿಸುತ್ತದೆ. ಈ ಪ್ರದೇಶದಲ್ಲಿ ದಾರಿಯುದ್ದಕ್ಕೂ ಸಾಗುತ್ತಿ ದ್ದಂತೆ ರಸ್ತೆಯುದ್ದಕ್ಕೂ ನೀರು ಸಂಗ್ರಹಿಸುವ ಪ್ಲಾಸ್ಟಿಕ್‌ ಡ್ರಮ್‌, ಬಕೆಟ್‌ ಮುಂತಾದ ಪಾತ್ರೆಗಳನ್ನು ರಸ್ತೆ ಬದಿ ಇಟ್ಟು ನಗರಸಭೆಯ ನೀರಿಗಾಗಿ ಕಾಯುವ ಸ್ಥಿತಿ ಕಾಣಸಿಗುತ್ತದೆ.

ಕೊಳವೆಬಾವಿಯೂ ಬತ್ತಿದೆ
ಪೆರಿಯತ್ತೋಡಿ ಪ್ರದೇಶದಲ್ಲಿರುವ ಕಾಲನಿಯಲ್ಲಿ ಸುಮಾರು 15-20ರಷ್ಟು ಮನೆಗಳಿದ್ದು, ಇಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಕೊಳವೆ ಬಾವಿ ನೀರಿಲ್ಲದೆ ಬತ್ತಿ ಹೋಗಿದೆ. ಅಕ್ಕಪಕ್ಕದಲ್ಲಿರುವ ಬಾವಿಯೂ ಬತ್ತಿ ಹೋಗಿದ್ದು, ನಗರಸಭೆಯ ವತಿಯಿಂದ ನೀಡುವ ನೀರೇ ಗತಿಯಾಗಿದೆ. ಕೆಲವೊಮ್ಮೆ ನೀರು ಬಂದರೂ ಆಯಿತು, ಬಾರದಿದ್ದರೂ ಆಯಿತು. ನೀರಿಗಾಗಿ ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಸಿಕ್ಕಿದರೂ ಅಗತ್ಯದಷ್ಟು ನೀರು ಕೆಲವೊಮ್ಮೆ ಸಿಗುವುದೇ ಇಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಮೂರು ತಿಂಗಳಿನಿಂದ ಹಾಹಾಕಾರ
ಮೂರು ತಿಂಗಳಿನಿಂದ ಪೆರಿಯತ್ತೋಡಿ, ಸಿಂಗಾಣಿ ಪ್ರದೇಶದ ನಿವಾಸಿಗಳು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಒಂದು ಕಿ.ಮೀ.ಗೂ ಅಧಿಕ ದೂರದಿಂದ ನೀರು ಹೊತ್ತು ತರುವ ಪರಿಸ್ಥಿತಿ ಉಂಟಾಗಿದೆ. ನೀರಿಗಾಗಿ ಹೊಸ ಕೊಳವೆ ಬಾವಿಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಗರಸಭೆ ವತಿಯಿಂದ ಟ್ಯಾಂಕರ್‌ಗಳಲ್ಲಿ ಹೆಚ್ಚಿನ ನೀರು ನೀಡುವ ಸರಿಯಾದ ವ್ಯವಸ್ಥೆ ಮಾಡಲಿ ಎನ್ನುವುದು ಇಲ್ಲಿನ ನಿವಾಸಿಗಳಾದ ಶಾಂತಿ, ಶೋಭಿತಾ ಅವರ ಆಗ್ರಹವಾಗಿದೆ.

 ಕೊಳವೆ ಬಾವಿ ಕೊರೆಸುತ್ತೇವೆ
ಪೆರಿಯತ್ತೋಡಿ, ಸಿಂಗಾಣಿ ಪರಿಸರದಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ. ಶಾಸಕರು ಹಾಗೂ ನಗರಸಭೆ ವತಿಯಿಂದ ಎರಡು ಕೊಳವೆ ಬಾವಿ ಕೊರೆಸಲು ಅನುದಾನ ಒದಗಿಸಲಾಗಿದೆ. ಪಾಯಿಂಟ್‌ ಕೂಡ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಇಲ್ಲಿ ಕೊಳವೆ ಬಾವಿ ಕೊರೆಸುತ್ತೇವೆ.
– ನವೀನ್‌ ಕುಮಾರ್‌, ನಗರಸಭೆ ಸದಸ್ಯರು

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹುಬ್ಬಳ್ಳಿ: ರೈತರ ಹಾಗೂ ವ್ಯಾಪಾರಿಗಳ ಅನುಕೂಲಕ್ಕಾಗಿ ಇಲ್ಲಿನ ಎಪಿಎಂಸಿ ಆವರಣದಲ್ಲಿ ಗೋದಾಮುಗಳನ್ನು ನಿರ್ಮಿಸಲಾಗಿದೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ...

  • ಬಜಪೆ: ಮಳಲಿಯಲ್ಲಿ ಜು. 14ರಂದು ನಡೆದಿದ್ದ ದರೋಡೆ ಪ್ರಕರಣದ ಪ್ರಮುಖ ರೂವಾರಿ, ಕುಖ್ಯಾತ ಆರೋಪಿ ರೌಡಿ ಶೀಟರ್‌ ಉಳಾಯಿಬೆಟ್ಟಿನ ಮಹಮ್ಮದ್‌ ಖಾಲಿದ್‌ ಯಾನೆ ಕೋಯ(32)ನನ್ನು...

  • ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕಲಬೆರಕೆ ತುಪ್ಪ ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಸಾರ್ವಜನಿಕರು, ಓರ್ವನನ್ನು ವಿಟ್ಲ...

  • ಉಳ್ಳಾಲ: ಅಕ್ರಮವಾಗಿ ಕೇರಳ ಕಡೆಗೆ ಲಾರಿ ಮೂಲಕ ಜಾನುವಾರು ಸಾಗಿಸುತ್ತಿದ್ದ ನಾಲ್ವರ ತಂಡವನ್ನು ಬಂಧಿಸಿರುವ ಉಳ್ಳಾಲ ಪೊಲೀಸರು, ಲಾರಿ ಸಹಿತ 10 ಜಾನುವಾರುಗಳನ್ನು...

  • ಮಂಗಳೂರು: ಮಾದಕ ವಸ್ತುಗಳ ವಿರುದ್ಧ ನಗರ ಪೊಲೀಸರು ಕಠಿನ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ವಿವಿಧ ಮಾದಕ ವಸ್ತು ಪ್ರಕರಣಗಳಲ್ಲಿ ಭಾಗಿಯಾಗಿದ್ದ 94 ಮಂದಿ ಹಳೆ...

  • ಬೆಂಗಳೂರು: ರಾಜೀನಾಮೆ ಸಲ್ಲಿಸಿರುವ 15 ಮಂದಿ ಶಾಸಕರಿಗೂ ತನ್ನ ಮುಂದೆ ಮಂಗಳವಾರ ಬೆಳಗ್ಗೆ 11 ಗಂಟೆಯೊಳಗೆ ಹಾಜರಾಗುವಂತೆ ಸ್ಪೀಕರ್‌ ರಮೇಶ್‌ ಕುಮಾರ್‌ ನೋಟಿಸ್‌ ನೀಡಿದ್ದಾರೆ. ವಿಧಾನಸೌಧದ...