ಪರಿವರ್ತನೆಗಿರುವ ಅವಕಾಶ ಸದ್ವಿನಿಯೋಗಿಸಿ: ಡಾ| ಹೆಗ್ಗಡೆ

148ನೇ ವಿಶೇಷ ಮದ್ಯವರ್ಜನ ಶಿಬಿರ

Team Udayavani, Dec 10, 2019, 8:09 PM IST

ಉಜಿರೆ: ಡ್ರಗ್ಸ್‌, ಕುಡಿತ, ಅತ್ಯಾಚಾರ, ಕಳ್ಳತನ ಇವೆಲ್ಲ ದೋಷಗಳು ದೌರ್ಬಲ್ಯಗಳಾಗಿದ್ದು, ಮುಚ್ಚಿಟ್ಟಷ್ಟು ಜಟಿಲವಾದ ಅನಾಹುತಗಳಿಗೆ ಕಾರಣವಾಗುತ್ತವೆ. ಇವೆಲ್ಲವನ್ನು ಬಿಚ್ಚಿಟ್ಟಲ್ಲಿ ಪರಿವರ್ತನೆ ಕಾಣಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು. ಅಖಿಲ ಕರ್ನಾಟಕ ಜನಜಾಗೃತಿ ವೇದಿ ಕೆಯ ಲಾೖಲ ವ್ಯಸನ ಮುಕ್ತಿ ಕೇಂದ್ರದಲ್ಲಿ ನಡೆದ 148ನೇ ವಿಶೇಷ ಮದ್ಯವರ್ಜನ ಶಿಬಿರದಲ್ಲಿ 74 ಮಂದಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹೃದಯದ ಕನ್ನಡಿ
ಮುಖ ಹೃದಯದ ಕನ್ನಡಿಯಾಗಿದೆ. ಮನಸ್ಸಿನಲ್ಲಿರುವ ಗೊಂದಲ, ಸಂತೋಷ ವನ್ನು ಮುಖದಲ್ಲಿ ಕಾಣ ಬಹುದು. ಪರಿಶುದ್ಧ ಮನಸ್ಸುಳ್ಳವರ ಚಲನ ವಲನ, ಮಾತು, ಕೃತಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅದೇ ವ್ಯಸನಿಗಳಾದವರು ವಿಕೃತವಾಗಿ ವರ್ತಿಸುತ್ತಾರೆ. ಆದುದರಿಂದ ಜೀವನ ಬದಲಾಯಿಸಿ, ಸ್ವಾಭಿಮಾನದ ಬದುಕಿ ನೊಂದಿಗೆ ಹೆಮ್ಮೆಯಿಂದ, ದೃಢವಾದ ಸಂಕಲ್ಪದಿಂದ ಬಾಳು ನಡೆಸಬೇಕು. ಮೋಡ ಮರೆಯಾದಂತೆ ಸೂರ್ಯ ಪ್ರಜ್ವಲಿ ಸುತ್ತಾನೆ. ಸ್ನೇಹಿತರ ಸಹವಾಸ, ದಾಕ್ಷಿಣ್ಯ, ಬೇಸರ, ಸೇಡು, ಸಂಭ್ರಮಾಚರಣೆ ಗಳ ನೆಪದಲ್ಲಿ ಮದ್ಯಸೇವನೆ ಮಾಡದೆ ಅಚಲವಾದ ಮನಸ್ಸಿನಿಂದ ಜೀವನ ನಡೆಸಬೇಕು. ಹೆಣ್ಣುಮಕ್ಕಳು ಸೇಡು ತೀರಿಸದೆ, ಹಳೆಯ ಕಹಿ ಘಟನೆಗಳನ್ನು ನೆನಪಿಸದೆ ಸಹಕರಿಸಬೇಕೆಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಕೆ.ಮಹಾವೀರ ಅಜ್ರಿ, ವೇದಿಕೆಯ ನಿರ್ದೇಶಕರಾದ ವಿವೇಕ್‌ ವಿ. ಪಾçಸ್‌, ಯೋಜನಾಧಿಕಾರಿ ಪಿ.ಚೆನ್ನಪ್ಪ ಗೌಡ, ಶಿಬಿರಾಧಿಕಾರಿ ದಿವಾಕರ್‌, ಆರೋಗ್ಯ ಸಹಾಯಕಿ ಜಯಲಕ್ಷ್ಮೀ, ಶಿಬಿರ ಸಹಾಯಕರಾದ ನವೀನ್‌ ಮತ್ತು ದೀಪು ಮೊದಲಾದವರು ಉಪಸ್ಥಿತರಿದ್ದರು.
ಶಿಬಿರಾರ್ಥಿಗಳ ಪರವಾಗಿ ಮಾರುತಿ ಮಂಡ್ಯ ಅನಿಸಿಕೆ ವ್ಯಕ್ತಪಡಿಸಿದರು. ಮುಂದಿನ ವಿಶೇಷ ಶಿಬಿರವು ಡಿ.16 ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟನೆ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ