ಪಕ್ಷಾತೀತ ಹೋರಾಟಕ್ಕೆ ಸಂದ ಗೆಲುವು: ದಯಾಕರ ಆಳ್ವ

Team Udayavani, Jun 16, 2019, 9:36 AM IST

.z-30

ಬೆಳ್ಳಾರೆ: ಕಳೆದ 55 ವರ್ಷಗಳಿಂದ ಮುಕ್ಕೂರಿನ ಭಾಗವಾಗಿದ್ದ ಅಂಚೆ ಕಚೇರಿ ಸ್ಥಳಾಂತರದ ವಿರುದ್ಧ ಗ್ರಾಮಸ್ಥರು ಜಾತಿ, ಮತ, ಧರ್ಮ ಬೇಧವಿಲ್ಲದೆ ಹೋರಾಟ ನಡೆಸಿದ ಕಾರಣ ಅಂಚೆ ಕಚೇರಿ ಮರಳಿ ಮುಕ್ಕೂರಿನಲ್ಲಿ ಪುನಾರಂಭಗೊಂಡಿದೆ. ಇದು ನಮ್ಮೆಲ್ಲರ ಪಕ್ಷಾತೀತ ಪ್ರಯತ್ನಕ್ಕೆ ಸಂದ ಗೆಲುವು ಎಂದು ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಹೇಳಿದರು.

ಪೆರುವಾಜೆ ಗ್ರಾ.ಪಂ. ಕಟ್ಟಡದಿಂದ ಮರಳಿ ಮುಕ್ಕೂರಿಗೆ ಅಂಚೆ ಕಚೇರಿ ಸ್ಥಳಾಂತರಿಸುವ ನಿಟ್ಟಿನಲ್ಲಿ ಶ್ರಮಿಸಿದ ಅಂಚೆ ಕಚೇರಿ ಉಳಿಸಿ ಹೋರಾಟ ಸಮಿತಿ ವತಿಯಿಂದ ಶನಿವಾರ ನಡೆದ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ಈ ಒಗ್ಗಟ್ಟು ಅಂಚೆ ಕಚೇರಿ ಉಳಿವಿಗೆ ಮಾತ್ರ ಸೀಮಿತವಲ್ಲ. ಮುಕ್ಕೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಕಾಲ ಇರಬೇಕು ಎಂದವರು ತಿಳಿಸಿದರು.

ಅಂಚೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಉಮೇಶ್‌ ಕೆ.ಎಂ.ಬಿ. ಮಾತನಾಡಿ, ಯಾವುದೇ ಮಾಹಿತಿ ನೀಡದೆ ಉದ್ದೇಶಪೂರ್ವಕವಾಗಿ ಅಂಚೆ ಕಚೇರಿ ಸ್ಥಳಾಂತರಿಸಿದ್ದು ಇಲ್ಲಿನ ಗ್ರಾಮಸ್ಥರಿಗೆ ನೋವು ತಂದಿತ್ತು. ಹೋರಾಟ ಸಮಿತಿ, ಗ್ರಾಮಸ್ಥರು, ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಸಹಕಾರದಿಂದ ಮತ್ತೆ ಮುಕ್ಕೂರಿನಲ್ಲಿ ಅಂಚೆ ಕಚೇರಿ ತೆರೆಯುವಂತಾಗಿದೆ ಎಂದರು.

ಅಂಚೆ ಉಳಿಸಿ ಹೋರಾಟ ಸಮಿತಿ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ಕಾನಾವು, ಸದಸ್ಯ ತಿರುಮಲೇಶ್ವರ ಭಟ್ ಕಾನಾವು ಮಾತನಾಡಿ ಗ್ರಾಮಸ್ಥರ ಹೋರಾಟಕ್ಕೆ ಪ್ರತಿಫಲ ಸಿಕ್ಕಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದರು.

ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ನಿವೃತ್ತ ಕಂದಾಯ ನಿರೀಕ್ಷಕ ದಾಮೋದರ ಗೌಡ, ಹೋರಾಟ ಸಮಿತಿಯ ಕುಶಾಲಪ್ಪ ಗೌಡ ಪೆರುವಾಜೆ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಗುಡ್ಡಪ್ಪ ಗೌಡ ಅಡ್ಯತಕಂಡ, ಮಂಜುನಾಥ ಗೌಡ ಕಂಡಿಪ್ಪಾಡಿ, ದಯಾನಂದ ಜಾಲು, ಮುಕ್ಕೂರು ಕುಂಡಡ್ಕ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯರಾದ ಜಯಂತ ಕುಂಡಡ್ಕ, ರವೀಂದ್ರ ಅನವುಗುಂಡಿ, ಅಬ್ದುಲ್ ರಹಿಮಾನ್‌, ಇಬ್ರಾಹಿಂ ಮುಕ್ಕೂರು, ಕಿರಣ್‌ ಚಾಮುಂಡಿಮೂಲೆ ಮತ್ತಿತರರು ಉಪಸ್ಥಿತರಿದ್ದರು.

ಮಾದರಿ ಕಚೇರಿಯನ್ನಾಗಿಸೋಣ
ಅಂಚೆ ಕಚೇರಿ ಮರಳಿ ಊರಿಗೆ ಬಂದಿದೆ. ಇನ್ನು ಇದನ್ನು ಉಳಿಸಿ ಬೆಳೆಸುವ ಜವಬ್ದಾರಿ ಇಲ್ಲಿನ ಗ್ರಾಮಸ್ಥರಿಗೆ ಸೇರಿದ್ದು. ಹಾಗಾಗಿ ಅಂಚೆ ಕಚೇರಿಯೊಂದಿಗೆ ಹೆಚ್ಚು ವ್ಯವಹಾರ ನಡೆಸುವ ಮೂಲಕ ಮಾದರಿ ಅಂಚೆ ಕಚೇರಿಯನ್ನಾಗಿ ರೂಪಿಸುವ ಸಂಕಲ್ಪವನ್ನು ನಾವೆಲ್ಲರೂ ಸೇರಿಕೊಂಡು ಪ್ರಾಮಾಣಿಕವಾಗಿ ಮಾಡಬೇಕು.
– ಗಣೇಶ್‌ ಶೆಟ್ಟಿ ಕುಂಜಾಡಿ, ಹೋರಾಟ ಸಮಿತಿ ಮುಖಂಡ

ಟಾಪ್ ನ್ಯೂಸ್

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Venur: ನಾಯಿಯನ್ನು ಹೊತ್ತೊಯ್ದ ಚಿರತೆ! ವೈರಲ್ ಆಯ್ತು ಸಿಸಿಟಿವಿ ದೃಶ್ಯ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Uppinangady ಬೆಲೆಬಾಳುವ ಮರ ಕಡಿದು ಸಾಗಾಟ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Padmaraj ಅವರಿಂದ ಕೋಮು ಸಾಮರಸ್ಯ ಮರು ಸ್ಥಾಪನೆ: ರಮಾನಾಥ ರೈ ವಿಶ್ವಾಸ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

Belthangady ಲಾರಿ-ಆಮ್ನಿ ನಡುವೆ ಅಪಘಾತ: ಚಾಲಕನಿಗೆ ಗಾಯ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.