ಸಾಂಪ್ರದಾಯಿಕ ಶೈಲಿಯ ಕಟ್ಟ: ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ


Team Udayavani, Jan 23, 2020, 4:34 AM IST

led-10

ವೇಣೂರು: ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ-ಮಾನವಿಕಾ ವಿಭಾಗ ಆಳ್ವಾಸ್‌ ಕಾಲೇಜು ಮೂಡುಬಿದಿರೆ ಮತ್ತು ಗ್ರಾ.ಪಂ. ಮರೋಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮರೋಡಿ ಗ್ರಾ.ಪಂ. ವ್ಯಾಪ್ತಿಯ ಮರೋಡಿ ಮತ್ತು ಪೆರಾಡಿ ಗ್ರಾಮದ ಒಟ್ಟು 14 ವಿವಿಧ ಸ್ಥಳಗಳಲ್ಲಿ ಸಾಂಪ್ರದಾಯಿಕ ಶೈಲಿಯ ಕಟ್ಟಗಳನ್ನು ನಿರ್ಮಿಸುವ ಮೂಲಕ ಜಲ ಸಾಕ್ಷರತೆಯ ಅರಿವು ಮೂಡಿಸಿದರು.

ಒಂದೇ ದಿನ 3 ಕಟ್ಟ !
ಮರೋಡಿ ಗ್ರಾಮದ ಕಲ್ಲೊಟ್ಟುಬೈಲು, ಗುಂಡಾವುಬೈಲು, ನಡ್ಯಾರುಬೈಲು, ಕಲ್ಲಟ್ಟ, ಬಳ್ಳಿದಡ್ಡ, ಹಾಂತ್ಯಾರು, ಮತ್ತೂಟ್ಟು, ಪಿಜತ್ತಾರು, ಬೋವುರಿ, ಹೊಯಿಗೆದಿಡ್ಡು, ಪೆರಾಡಿ ಗ್ರಾಮದ ಹಾರ್ದೊಟ್ಟು, ಹಲೆಕ್ಕಿ ಬೈಲು, ಕಾಂತ್ಯೊಟ್ಟು, ಬಾಂತೊಟ್ಟು, ಪಂಬುದೊಟ್ಟು ಸ್ಥಳಗಳಲ್ಲಿ ಗೋಣಿ ಚೀಲಗಳಿಗೆ ಮಣ್ಣು-ಮರಳು ಮಿಶ್ರಣವನ್ನು ತುಂಬಿಸಿ ಮತ್ತು ಹಲಗೆಗಳನ್ನು ಬಳಸಿ ಕಟ್ಟಗಳನ್ನು ನಿರ್ಮಿಸಲಾಗಿದೆ. ಈ ಎಲ್ಲ ಕಟ್ಟ ಗಳಲ್ಲಿ ನೀರು ಸಂಗ್ರಹಿಸಿ ಕೃಷಿ ಜಮೀನಿಗೆ ಒದಗಿಸುವ ಮೂಲಕ ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗಿದೆ. ಅದರಲ್ಲೂ ಒಂದೇ ದಿನ ಮೂರು ಕಟ್ಟಗಳನ್ನು ನಿರ್ಮಿಸಿರುವುದು ಜಲ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳಲ್ಲಿ ಇರುವ ಆಸಕ್ತಿಯನ್ನು ತೋರಿಸುತ್ತದೆ.

ಮರೋಡಿ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯರಾದ ಉಮೇಶ್‌ ಸಾಲ್ಯಾನ್‌, ಪದ್ಮಶ್ರೀ, ಗ್ರಾ.ಪಂ. ಸಿಬಂದಿ, ಸ್ಥಳೀಯ ಕೃಷಿಕರಾದ ವಿನೋಧರ ಸಾಲ್ಯಾನ್‌ ಕಲ್ಲಟ್ಟ, ಚೆರಿಯಾ ಅತ್ತಸ, ಬಾಲಕೃಷ್ಣ ಬಂಗೇರ ಗಾಂದ್ಯೊಟ್ಟ, ವೀರೇಂದ್ರ ಬಲ್ಲಾಳ್‌, ರಾಜೇಂದ್ರ ಬಲ್ಲಾಳ್‌, ಬಾಬು ಸಾಲ್ಯಾನ್‌ ಸಂಭ್ರಮ, ರಾಜು ಸಾಲ್ಯಾನ್‌ ಹೆಟೊಟ್ಟು, ಜೀವಂಧರ ಪೂಜಾರಿ, ಚಂದಪ್ಪ ಪೂಜಾರಿ ಹೊಸಮನೆ, ಜೀವಂಧರ ಸಾಲ್ಯಾನ್‌ ನಡ್ಯಾರು, ಜಯಾನಂದ ಗುಂಡಾವು ಮತ್ತಿತರರು ಕಟ್ಟ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದರು.

117 ಮಂದಿ ವಿದ್ಯಾರ್ಥಿಗಳು ಭಾಗಿ
ಕಟ್ಟ ನಿರ್ಮಾಣದಲ್ಲಿ ಮೂಡುಬಿದಿರೆ ಅಳ್ವಾಸ್‌ ಕಾಲೇಜಿನ ಎನ್ನೆಸ್ಸೆಸ್‌ನ 47 ಮಂದಿ, ಮಾನವಿಕಾ ವಿಭಾಗದ 70 ಮಂದಿ ವಿದ್ಯಾರ್ಥಿಗಳೊಂದಿಗೆ ಸ್ಥಳೀಯರೂ ಕೈ ಜೋಡಿಸಿದ್ದಾರೆ. ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌ ಮಾರ್ಗದರ್ಶನದಲ್ಲಿ ಎನ್ನೆಸ್ಸೆಸ್‌ ಪ್ರಾಧ್ಯಾಪಕ ವಸಂತ ಎನ್‌., ಉಪನ್ಯಾಸಕಿ ದೀಕ್ಷಿತಾ, ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ, ಹರಿಣಾಕ್ಷಿ ನೇತೃತ್ವ ವಹಿಸಿದ್ದರು.

  3,000ಕ್ಕೂ ಹೆಚ್ಚು ಗೋಣಿಚೀಲ ಬಳಕೆ
ಮರೋಡಿ ಗ್ರಾಮಸ್ಥರು ಜಲಸಂರಕ್ಷಣೆ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು, 11 ಕಟ್ಟ ನಿರ್ಮಿಸುವುದಾಗಿ ತಿಳಿಸಿದ್ದರು. ಇದೀಗ ವಿವಿಧೆಡೆಗಳಲ್ಲಿ 14 ಕಟ್ಟಗಳನ್ನು ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿಗಳ ಸಹಕಾರದಲ್ಲಿ ನಿರ್ಮಿಸಿದ್ದಾರೆ. ಎಲ್ಲ ಕಟ್ಟಗಳ ನಿರ್ಮಾಣಕ್ಕೆ ಪೆರಿಂಜೆಯ ಇಂಟರ್‌ಲಾಕ್ಸ್‌ ಮಾಲಕರು 3,000ಕ್ಕೂ ಹೆಚ್ಚು ಗೋಣಿಚೀಲ ಒದಗಿಸಿದ್ದಾರೆ.
– ಪಿ. ಧರಣೇಂದ್ರ ಕುಮಾರ್‌, ಜಿ.ಪಂ. ಸದಸ್ಯರು

  ಜಲಸಂರಕ್ಷಣೆ ಉತ್ತಮ ಕಾರ್ಯ
ಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವ ಅವರ ಸೂಚನೆಯಂತೆ ಮೂಡುಬಿದಿರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜಲಸಂರಕ್ಷಣೆ ಮಾಡುವ ಉದ್ದೇಶದಿಂದ ವಿವಿಧ ಗ್ರಾ.ಪಂ.ಗಳಲ್ಲಿ ಎನ್ನೆಸ್ಸೆಸ್‌ ವಿದ್ಯಾರ್ಥಿಗಳಿಂದ ಕಟ್ಟ ನಿರ್ಮಿಸಲಾಗಿದೆ. ಅದರಲ್ಲಿ ನಾರಾವಿ ಜಿ.ಪಂ. ವ್ಯಾಪ್ತಿಯಲ್ಲಿ ನೀರಿನ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯ ನಡೆಸಲು ಹೆಚ್ಚಿನ ಪ್ರೋತ್ಸಾಹ ಲಭಿಸಿದೆ. ಜಲಸಂರಕ್ಷಣೆ ಉತ್ತಮ ಕಾರ್ಯ.
– ಪ್ರೊ| ವಸಂತ್‌, ಎನ್ನೆಸ್ಸೆಸ್‌ ಘಟಕದ ಶಿಬಿರಾಧಿಕಾರಿ, ಮೂಡುಬಿದಿರೆ ಆಳ್ವಾಸ್‌ ಕಾಲೇಜು

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.