ಸೋರುತ್ತಿದೆ ವೇಣೂರು ನಾಡಕಚೇರಿ

32 ವರ್ಷಗಳಿಂದ ಬಾಡಿಗೆ ಕೋಣೆ ಆಸರೆ

Team Udayavani, Sep 11, 2019, 5:44 AM IST

ವೇಣೂರು: ಇಪ್ಪತ್ತೂಂಬತ್ತು ಗ್ರಾಮಗಳಿಗೆ ಸಂಬಂಧಿತ ಕಂದಾಯ ಇಲಾಖೆಯ ವೇಣೂರು ನಾಡ ಕಚೇರಿ ಅವ್ಯವಸ್ಥೆಯನ್ನು ನೋಡಿಯೇ ತಿಳಿಯಬೇಕು. ಸೋರುವ ಕಟ್ಟಡ, ಬಿರುಕುಬಿಟ್ಟ ಛಾವಣಿ, ಕೊಠಡಿ ತುಂಬಾ ಮಳೆ ನೀರು. ಈ ಎಲ್ಲದರ ಮಧ್ಯೆ ಕಡತಗಳನ್ನು ಶೇಖರಿಸಿಡಲು ಸಿಬಂದಿ ಪರದಾಡುವ ಕಷ್ಟ ಅಷ್ಟಿಷ್ಟಲ್ಲ.

1987ರಲ್ಲಿ ವೇಣೂರಿನಲ್ಲಿ ಪ್ರಾರಂಭಗೊಂಡ ನಾಡಕಚೇರಿಗೆ ಇನ್ನೂ ಸ್ವಂತ ಕಟ್ಟಡ ಭಾಗ್ಯ ಒದಗಿ ಬಂದಿಲ್ಲ. ಸುಮಾರು 32 ವರ್ಷಗಳಿಂದ ಬಾಡಿಗೆ ಕೋಣೆಯಲ್ಲೇ ದಿನ ಕಳೆಯುತ್ತಿದೆ. ಇಂದೋ ನಾಳೆಯೋ ಬೀಳುವ ಸ್ಥಿತಿ ಯಲ್ಲಿರುವ ಕಟ್ಟಡದಿಂದ ಗ್ರಾಮಸ್ಥರ ಕಡತಗಳಿಗೆ ಸುರಕ್ಷತೆಯೇ ಇಲ್ಲವಾಗಿದೆ.

ಇಲ್ಲಿನ ಕಂದಾಯ ನಿರೀಕ್ಷಕರೇ ಉಪ ತಹಶೀಲ್ದಾರರ ಹುದ್ದೆಯನ್ನು ಪ್ರಭಾರವಾಗಿ ನಿರ್ವಹಿಸುತ್ತಿದ್ದಾರೆ. ಇಲ್ಲಿ ಒಬ್ಬನೇ ಗ್ರಾಮ ಸಹಾಯಕ ಇಡೀ ಕಚೇರಿ ಕೆಲಸವನ್ನು ನಿರ್ವಹಿಸುತ್ತಿದ್ದು, ಅವರು ರಜೆ ಮಾಡಿದರೆ ಆ ದಿನ ಕಚೇರಿ ಬಂದ್‌!

ಮಾಸಾಶನಗಳು, ತಕರಾರು ಕೊಟೇ ಶನ್‌, ಜಾತಿ-ಆದಾಯ ಪ್ರಮಾಣ ಪತ್ರ, ಜನನ-ಮರಣ ಪ್ರಮಾಣ ಪತ್ರ, ಸಹಿತ ಪ್ರಾಕೃತಿಕ ವಿಕೋಪದಡಿ ಪರಿಹಾರ, ಸರಕಾರಿ ಸೌಲಭ್ಯಗಳು ಹೀಗೆ ಹತ್ತಾರು ಸಮಸ್ಯೆಗಳೊಂದಿಗೆ ಹೋಬಳಿ ಮಟ್ಟದ ಜನರು ಬರುತ್ತಿದ್ದು, ನಾಡಕಚೇರಿಯ ಅವ್ಯವಸ್ಥೆಯಿಂದಾಗಿ ಜನ ಸಮರ್ಪಕ ಸೇವೆ ಯಿಂದ ವಂಚಿತರಾಗಿದ್ದಾರೆ.

ಸಂಪೂರ್ಣ ಶಿಥಿಲಾವಸ್ಥೆ
ನಾಡಕಚೇರಿಗೆ ಬಾಡಿಗೆ ಕೋಣೆಯನ್ನು ಪಡೆದುಕೊಂಡಾಗ ಕೊಠಡಿ ವ್ಯವಸ್ಥಿತವಾಗಿಯೇ ಇತ್ತು. ಆದರೆ ಇಂದು ಕಟ್ಟಡದ ಈ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಛಾವಣಿ ಕಾಂಕ್ರಿಟ್ ಬೀಳುತ್ತಿದೆ. ಬಾಡಿಗೆ ನೀಡಿದವರೇ ಕಚೇರಿ ತೆರವಿಗೆ ಹಲವು ಬಾರಿ ಸೂಚಿ ಸಿದ್ದರೂ ಇಲಾಖೆ ಸ್ಥಳಾಂತರಕ್ಕೆ ಮುಂದಾಗುತ್ತಿಲ್ಲ.

ಜಾಗವಿದ್ದರೂ ಕಟ್ಟಡವಿಲ್ಲ
ವೇಣೂರು ಕಂದಾಯ ನಿರೀಕ್ಷಕರ ಕಚೇರಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿ ದಾಗ ದುರಸ್ತಿ ಕಾರ್ಯ ಮಾಡುವ ಬದಲು 2004ಲ್ಲಿ ಬಾಡಿಗೆ ಕೋಣೆಗೆ ಸ್ಥಳಾಂತರ ಮಾಡಲಾಗಿದೆ. ನಾಡ ಕಚೇರಿಗೆ ಸಂಬಂಧಿಸಿ 40 ಸೆಂಟ್ಸ್‌ ಜಾಗವಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣ ಆಗಬೇಕಿದೆ.

ಪ್ರಸ್ತಾವನೆ ಕಳುಹಿಸಿದೆ

ವೇಣೂರು ನಾಡಕಚೇರಿಗೆ ಸ್ವಂತ ಜಾಗವಿದ್ದರೂ ಕಟ್ಟಡವಿಲ್ಲದೆ ಬಾಡಿಗೆ ಕೊಠಡಿಯಲ್ಲಿರಬೇಕಾಗಿದೆ. ಹೊಸ ಕಟ್ಟಡದ ಬಗ್ಗೆ ಕಳೆದ ಬಾರಿಯೂ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಹೊಸ ಕಟ್ಟಡ ಅನುಮೋದನೆ ಗೊಂಡರೆ ಅನುಕೂಲ.
– ಪಾವಡಪ್ಪ ದೊಡ್ಡಮನಿ

ಕಂದಾಯ ನಿರೀಕ್ಷಕರು, ವೇಣೂರು ಹೋಬಳಿ

– ಪದ್ಮನಾಭ ವೇಣೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ