ಮೆಸ್ಕಾಂ ಬಳಕೆದಾರರಿಗೆ “ಡಿಜಿಟಲ್‌ ಮೀಟರ್‌’ ಬರೆ!

Team Udayavani, Jun 23, 2019, 5:00 AM IST

39

ಈಶ್ವರಮಂಗಲ: ಕೇಂದ್ರ ಸರಕಾರವು ಜಾರಿಗೆ ತಂದ ಹೊಸ ನಿಯಮದ ಪ್ರಕಾರ ವಿದ್ಯುತ್‌ ಬಳಕೆದಾರರಿಗೆ ಡಿಜಿಟಲ್‌ ಮೀಟರ್‌ ಆಳವಡಿಕೆ ಕಾರ್ಯವನ್ನು ಮೆಸ್ಕಾಂ ಉಚಿತವಾಗಿ ಮಾಡಿದೆ. ಹೊಸ ಮೀಟರ್‌ ಸೋರಿಕೆಯನ್ನು ತಡೆಯು ತ್ತಿದೆ. ಹಳೆಯ ಮೀಟರ್‌ಗಿಂತ ಭಿನ್ನವಾಗಿದೆ. ಚಿಕ್ಕ ಸೋರಿಕೆಯನ್ನೂ ಕಂಡು ಹಿಡಿಯುವುದ ರಿಂದ ವಿದ್ಯುತ್‌ ಬಿಲ್‌ ಜಾಸ್ತಿ ಬರುವುದು ಸಾಮಾನ್ಯವಾಗಿದೆ. ಹೊಸ ಮೀಟರ್‌ ಅಳವಡಿಕೆ ಬಳಕೆದಾರಿಗೆ ಬಹಳ ತೊಂದರೆ ಜತೆಗೆ ಮಾನಸಿಕ ಹಿಂಸೆಗೆ ಕಾರಣವಾಗುತ್ತಿದೆ. ಮೆಸ್ಕಾಂ ಇಲಾಖೆ ಗುಣಮಟ್ಟದ ಸೇವೆ ನೀಡಲೆಂದು ಕಾಲ ಕಾಲಕ್ಕೆ ವಿದ್ಯುತ್‌ ದರ ಏರಿಕೆ ಮಾಡಿದರೂ ತಾಂತ್ರಿಕ ತೊಂದರೆ ಸರಿಪಡಿಸಲು ಎಡವುತ್ತಿರುವುದರಿಂದ ಬಳಕೆದಾರರಿಗೆ ಸಮಸ್ಯೆಯಾಗುತ್ತಿದೆ.

ಸಮಸ್ಯೆ ಸರಿಪಡಿಸಲು ಆಗ್ರಹ
ಪಾಣಾಜೆ ಗ್ರಾಮದ ಹೆಚ್ಚಿನ ಬಳಕೆದಾರಿಗೆ ಈ ರೀತಿಯಲ್ಲಿ ಬಿಲ್‌ ಬಂದಿದೆ. ಈ ಸಮಸ್ಯೆಯನ್ನು ಮೆಸ್ಕಾಂ ಬಗೆಹರಿಸಬೇಕಾಗಿದೆ. ಯಾರೋ ಮಾಡಿದ ತಪ್ಪಿಗೆ ಬಡ ಬಳಕೆದಾರರು ತೊಂದರೆ ಪಡುವಂತಾಗಿದೆ. ಆದರೆ, ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಬೇಕಿದ್ದರೂ ಗ್ರಾಹಕರು ಕುಂಬ್ರಕ್ಕೆ ತೆರಳಬೇಕು. ಹೆಚ್ಚಿನ ಬಳಕೆದಾರರಿಗೆ ತೊಂದರೆ ಆಗಿರುವುದರಿಂದ, ಅದನ್ನು ಸರಿಪಡಿಸಿಕೊಂಡು ಸರಿಯಾದ ಬಿಲ್‌ ಪಾವತಿಸಲು ಎರಡು ತಿಂಗಳ ಕಾಲಾವಕಾಶ ಕೊಡಬೇಕೆಂದು ಬಳಕೆದಾರರು ಆಗ್ರಹಿಸಿದ್ದಾರೆ.

ಹೋಗುವುದೇ ತ್ರಾಸದಾಯಕ
ಗಡಿಭಾಗದ ಪಾಣಾಜೆ, ಬೆಟ್ಟಂಪಾಡಿ, ನಿಡ³ಳ್ಳಿ ಗ್ರಾಮದ ಬಳಕೆದಾರರು ವಿದ್ಯುತ್‌ ಬಿಲ್‌ನ ಸಮಸ್ಯೆಯನ್ನು ಪರಿಹರಿಸಲು ಕುಂಬ್ರ ಮೆಸ್ಕಾಂ ಕಚೇರಿಗೆ ಹೋಗಬೇಕಾಗಿದೆ. ಕುಂಬ್ರ ಗ್ರಾಮಾಂತರ ವಿಭಾಗ ಆದ ಮೇಲೆ ಗ್ರಾಹಕರಿಗೆ ಇದು ಹೊರೆಯಾಗಿದೆ. ಗಡಿಭಾಗದ ಜನರಿಗೆ ಕುಂಬ್ರಕ್ಕೆ ನೇರವಾದ ಸಾರಿಗೆ ಸಂಪರ್ಕ ಇಲ್ಲದ ಕಾರಣ ಸುತ್ತು ಬಳಸಿ ಸಂಚರಿಸಿ, ಪುತ್ತೂರು ನಗರದ ಮೂಲಕ ಕುಂಬ್ರಕ್ಕೆ ಬರಬೇಕಾಗುದೆ. ಹಣ ಮಾತ್ರವಲ್ಲದೆ ಸಮಯವೂ ಅಪವ್ಯಯವಾಗುತ್ತಿದೆ. ಮಳೆಗಾಲದ ಕೃಷಿ ಕೆಲಸಗಳನ್ನು ಬಿಟ್ಟು ಗ್ರಾಹಕರು ವಿದ್ಯುತ್‌ ಬಿಲ್‌ ಸರಿಪಡಿಸಲು ಓಡಾಡಬೇಕಾಗಿದೆ. ಇದರ ಬದಲು ಅಧಿಕಾರಿಗಳೇ ಜನರಿಗೆ ಸರಿಯಾದ ಬಿಲ್‌ ಕೊಡಲು ವ್ಯವಸ್ಥೆ ಮಾಡಬೇಕೆಂದು ಗ್ರಾಹಕರು ಒತ್ತಾಯಿಸಿದ್ದಾರೆ.

420 ರೂ. ಬದಲಿಗೆ 17,251 ರೂ.
ಗ್ರಾಮಾಂತರ ಪ್ರದೇಶದಲ್ಲಿ ಮೇ, ಜೂನ್‌ ತಿಂಗಳ ವಿದ್ಯುತ್‌ ಬಿಲ್ಲುಗಳು ಬಳಕೆದಾರರಿಗೆ ಹೆಚ್ಚು ತೊಂದರೆ ಉಂಟು ಮಾಡಿವೆ. ಮೇ ತಿಂಗಳಲ್ಲಿ ಬಿಲ್ಲುಗಳು ಅಸಮರ್ಪಕವಾಗಿವೆ. ಪಾಣಾಜೆ ಗ್ರಾಮದ ಆರ್ಲಪದವು ನಿವಾಸಿಯೋರ್ವರ ವಿದ್ಯುತ್‌ ಬಿಲ್‌ನ ಹಾಲಿ ಮಾಪಕ 1,842 ಇದ್ದರೆ ಬಳಸಿದ ಯೂನಿಟ್‌ 1842 ಎಂದು ಮಾಪಕ ತೋರಿಸುತ್ತಿದೆ. ನಿಗದಿತ ಶುಲ್ಕ 420 ರೂ., ವಿದ್ಯುತ್‌ ಶುಲ್ಕ 15,357 ರೂ., ಇದರ ಮೇಲೆ ತೆರಿಗೆ 1,382 ರೂ. ಸಹಿತ 17,251 ರೂ. ಬಿಲ್‌ ತೋರಿಸುತ್ತಿದೆ. ಹೆಚ್ಚುವರಿ ಪಾವತಿ ಕಳೆದು ನಿವ್ವಳ 17,054 ರೂ. ಮೊತ್ತವನ್ನು ಜು. 3ರ ಒಳಗಡೆ ಪಾವತಿಸುವಂತೆ ಸೂಚಿಸಲಾಗಿದೆ. ತಿಂಗಳಿಗೆ 1,200 ರೂ. ಬರುವ ಬಿಲ್‌, ಒಂದೇ ತಿಂಗಳಲ್ಲಿ 15 ಪಟ್ಟು ಹೆಚ್ಚಾಗಲು ಸಾಧ್ಯವೇ ಎಂಬ ಪ್ರಶ್ನೆ ಕಾಡುತ್ತಿದೆ. ನಿಗದಿತ ಶುಲ್ಕ 60 ರೂ. ಇದ್ದಲ್ಲಿ 420 ರೂ. ಬಂದಿದೆ. ಒಂದೇ ತಿಂಗಳಲ್ಲಿ ಏಳು ಪಟ್ಟು ಶುಲ್ಕವನ್ನು ಮೆಸ್ಕಾಂ ಏರಿಸಿದೆಯೇ ಎಂಬ ಪ್ರಶ್ನೆಯೂ ಮೂಡಿದೆ.

ಮನೆಗೆ ಬಂದು ಸರಿಪಡಿಸಿ
ಎರಡು ತಿಂಗಳಿನಿಂದ ಮೆಸ್ಕಾಂ ವತಿಯಿಂದ ಹಳೆಯ ಮೀಟರ್‌ ತೆಗೆದು ಅಧುನಿಕ ಡಿಜಿಟಲ್‌ ಮೀಟರ್‌ ಆಳವಡಿಕೆ ಕಾರ್ಯ ನಡೆದಿದೆ. ಮೀಟರ್‌ ರೀಡರ್‌ ನೀಡುವ ಮೆಸ್ಕಾಂ ಬಿಲ್‌ ಶಾಕ್‌ ನೀಡುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಗಮನಹರಿಸಿ ಬಳಕೆದಾರರ ಮನೆಗೆ ಬಂದು ಸಮಸ್ಯೆಯನ್ನು ಸರಿಪಡಿಸಬೇಕು.
– ರವೀಂದ್ರ ಭಂಡಾರಿ ಪಾಣಾಜೆ,  ನೊಂದ ಬಳಕೆದಾರ

ಗಮನಕ್ಕೆ ತನ್ನಿ
ವಿದ್ಯುತ್‌ ಸೋರಿಕೆಯನ್ನು ತಡೆಯಲು ಹೊಸ ಮೀಟರ್‌ ಆಳವಡಿಕೆ ಕಾರ್ಯ ನಡೆದಿದೆ. ಹೊಸ ಮೀಟರ್‌ ಮಾಪನದಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆ ಅಥವಾ ತಾಂತ್ರಿಕ ಸಮಸ್ಯೆಗಳು ಇದ್ದರೆ ಬಗೆಹರಿಸುತ್ತೇವೆ. ಹೆಚ್ಚುವರಿ ಬಿಲ್‌ ಬಂದಿದ್ದರೆ ನಮ್ಮ ಗಮನಕ್ಕೆ ತನ್ನಿ.
– ರಾಮಚಂದ್ರ ಎ., ಇ.ಇ., ಕುಂಬ್ರ ಮೆಸ್ಕಾಂ

ಮಾಧವ ನಾಯಕ್‌ ಕೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.