ಬೆಳ್ಮಣ್‌: ಇನ್ನೂ ಉಳಿದಿದೆ ತರಗೆಲೆಗಳ ಬಣವೆ !

Team Udayavani, Jul 11, 2019, 5:21 AM IST

ಬೆಳ್ಮಣ್‌: ಕೃಷಿ, ಹೈನುಗಾರಿಕೆಗೆ ಕಡಿಮೆಯಾಗುತ್ತಿರುವ ದಿನಗಳಲ್ಲಿ ಬೇಸಗೆಯಲ್ಲಿ ತರಗೆಲೆಗಳನ್ನು ರಾಶಿ ಮಾಡಿ, ಬಣವೆ ಮಾಡಿ ಅದನ್ನು ಮಳೆಗಾಲಕ್ಕೆ ಬಳಸುವ ಸಂಪ್ರದಾಯ ಬೆಳ್ಮಣ್‌ನಲ್ಲಿ ಇಂದಿಗೂ ಇದೆ.

ಇಂತಹ ಬಣವೆಗಳು ಈಗ ತೀರಾ ಅಪರೂಪ. ಆದರೆ ಕೃಷಿಕ ಎಸ್‌.ಕೆ.ಸಾಲ್ಯಾನ್‌ ಅವರ ನಿವಾಸದಲ್ಲಿ ಈಗಲೂ ಇದೆ. ಎರಡು ಬಣವೆಗಳನ್ನು ಅವರು ವರ್ಷವೂ ಮಾಡುತ್ತಾರೆ. ಹಟ್ಟಿಗೊಬ್ಬರದ ಉದ್ದೇಶದಿಂದ ಅವರು ತರಗೆಲೆಗಳ ಸಂಗ್ರಹ ಮಾಡುತ್ತಾರೆ. ಮಳೆಗಾಲದಲ್ಲಿ ತರಗೆಲೆ ಹೆಚ್ಚು ಬೆಚ್ಚನೆ ಇರುವುದರಿಂದ ಹಸುಗಳು ಹಾಯಾಗಿ ಮಲಗುತ್ತವೆ. ಜತೆಗೆ ಉತ್ತಮ ಹಟ್ಟಿಗೊಬ್ಬರವೂ ರೂಪುಗೊಳ್ಳುತ್ತದೆ.

ತರಗೆಲೆಗಳನ್ನು ಸಂಗ್ರಹಿಸಲು ಹಿಂದೆ ಗೋಮಾಳ ಜಾಗಗಳು ಹಾಗೂ ವಿಸ್ತೃತ ಕಾಡು ನೆರವಾಗುತ್ತಿತ್ತು. ಆದರೆ ಇಂದು ಎರಡೂ ಇಲ್ಲ. ಆ ಜಾಗದಲ್ಲಿ ಕಟ್ಟಡಗಳು, ಮನೆಗಳು ಅನ್ಯ ಕೃಷಿ ಉದ್ದೇಶಕ್ಕೆ ಬಳಕೆ ಯಾಗಿವೆ. ಆದರೂ ಸಾಲ್ಯಾನ್‌ ಅವರ ಕುಟುಂಬ ತರಗೆಲೆಗಳನ್ನು ಸಂಗ್ರಹಿ ಸುತ್ತಿದೆ.

ಸಾಂಪ್ರದಾಯಿಕ ಕೃಷಿಯಲ್ಲಿ ಆಸಕ್ತಿ ಹೊಂದಿರುವ ಎಸ್‌.ಕೆ. ಸಾಲ್ಯಾನ್‌ ಅವರು ಬೈಹುಲ್ಲಿನ ಬಣವೆಗಳನ್ನೂ ಮಾಡುತ್ತಾರೆ. ಹಳೆಯ ಕೃಷಿ ಪರಂಪರೆ ಉಳಿಸುವ ಉತ್ಸಾಹವೂ ಇವರದ್ದು.

ಕೃಷಿ ಪ‌‌ರಂಪರೆ ಉಳಿಸಲು ಪ್ರಯತ್ನ

ನಮ್ಮದು ಕೃಷಿ ಪ್ರಧಾನ ಕುಟುಂಬ, ಹೀಗಾಗಿ ನಮ್ಮ ನಾಡಿನ ಕೃಷಿ ಪರಂಪರೆ, ಉಳಿಸಬೇಕಿದೆ. ಸಾಧ್ಯವಾದಷ್ಟು ಮಟ್ಟಿಗೆ ಉಳಿಸಲು ಪ್ರಯತ್ನಿಸುತ್ತೇವೆ.
– ಎಸ್‌. ಕೆ. ಸಾಲ್ಯಾನ್‌, ಬೆಳ್ಮಣ್‌

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ