ಬಿಜೆಪಿ ಸೈಕ್ಲೋಥಾನ್‌ ಸೈಕಲ್‌ ರಾಲಿ

Team Udayavani, Apr 15, 2019, 6:30 AM IST

ಉಡುಪಿ: ನರೇಂದ್ರ ಮೋದಿಯ ಅಭಿಮಾನಿಗಳು ದೇಶಾದ್ಯಂತ ನಡೆಸುವ “ಮೈ ಭಿ ಚೌಕೀದಾರ್‌’ ಆಂದೋಲನದ ಅಂಗವಾಗಿ ಉಡುಪಿಯಲ್ಲಿಯೂ ಶುಕ್ರವಾರ ಚೌಕೀದಾರ್‌ ಸೈಕ್ಲೋಥಾನ್‌ನ್ನು ಬಿಜೆಪಿ ಯುವ ಮೋರ್ಚಾದ ವತಿಯಿಂದ ಆಯೋಜಿಸಲಾಯಿತು.

ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕೆಂದು ಹಾರೈಸಿ ಬಿಜೆಪಿ ಯುವಮೋರ್ಚಾ ವತಿಯಿಂದ ತಾಲೂಕು ಕಚೇರಿ ಬಳಿಯಿಂದ ಅಜ್ಜರಕಾಡು, ಬ್ರಹ್ಮಗಿರಿ, ಜೋಡುಕಟ್ಟೆ, ಡಯನಾ ಸರ್ಕಲ್‌ದವರೆಗೆ ನಡೆದ ಸೈಕ್ಲೋಥಾನ್‌ ಸೈಕಲ್‌ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ರಘುಪತಿ ಭಟ್‌ ಅವರು, ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪ್ರಥಮ ಬಾರಿಗೆ ಈ ಜಾಥಾ ನಡೆಯುತ್ತಿದೆ ಎಂದರು.

ಮೋದಿಯವರ ಬೆಂಬಲಕ್ಕಾಗಿ ಕಳೆದ ವರ್ಷ ಕಾಶ್ಮೀರದಿಂದ ಕನ್ಯಾಕುಮಾರಿ, ಪಶ್ಚಿಮಬಂಗಾಳದವರೆಗೆ 14,195 ಕಿ.ಮೀ. ಓಡಿ ಯಶಸ್ವಿಯಾದ ಆ್ಯತ್ಲೀಟ್‌ ಮಧ್ಯಪ್ರದೇಶದ ಸಮೀರ್‌ ಸಿಂಗ್‌ ಮಾತನಾಡಿ, ನರೇಂದ್ರ ಮೋದಿ ನಮಗೆ ಎಷ್ಟು ಅಗತ್ಯ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು. ದೇಶಾದ್ಯಂತ 50 ನಗರಗಳಲ್ಲಿ ಮೋದಿ ಪರ ಪ್ರಚಾರ ನಡೆಸುತ್ತಿದ್ದೇವೆ. 19ನೆಯ ದಿನ ಇದಾಗಿದೆ ಎಂದು ಸಮೀರ್‌ ಸಿಂಗ್‌ ಹೇಳಿದರು.

ನಟಿ ಸ್ನೇಹಾ ಸಿಂಗ್‌ ಮಾತನಾಡಿ, ಮಾ. 25ಕ್ಕೆ ದಿಲ್ಲಿಯ ಇಂಡಿಯಾಗೇಟ್‌ನಿಂದ ಈ ರ್ಯಾಲಿ ಆರಂಭಗೊಂಡಿದು,ª ಮೇ 13ಕ್ಕೆ ಅಮೃತ್‌ಸರದಲ್ಲಿ ರ್ಯಾಲಿ ಕೊನೆಗೊಳ್ಳಲಿದೆ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗುವುದು ನಮ್ಮ ಉದ್ದೇಶ ಎಂದರು.

ಬಿಜೆಪಿ ಮುಖಂಡರಾದ ಯಶ್‌ಪಾಲ್‌ ಸುವರ್ಣ, ರಾಘವೇಂದ್ರ ಕಿಣಿ, ಮಹೇಶ್‌ ಠಾಕೂರ್‌, ಪ್ರತಾಪ್‌ ಶೆಟ್ಟಿ, ದಿನಕರ ಬಾಬು ಸಹಿತ ಹಲವಾರು ಮಂದಿ ಬಿಜೆಪಿ ಕಾರ್ಯ ಕರ್ತರು ಉಪಸ್ಥಿತರಿದ್ದರು. ಸುಮಾರು 200ರಷ್ಟು ಸೈಕಲ್‌ಗ‌ಳಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಚಿಕ್ಕಬಳ್ಳಾಪುರ: ಕಳೆದ ಏ.18 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಒಟ್ಟು 2,284 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮೇ.23 ರಂದು ನಗರದ ಹೊರ ವಲಯದ...

  • ಸಂತೆಮರಹಳ್ಳಿ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿರುವ ಪಡಸಾಲೆಯಲ್ಲಿ ಆಧಾರ್‌ ನೋಂದಣಿಯನ್ನು ಪುನಾರಂಭ ಮಾಡಲಾಗಿದೆ. ಈ ಬಗ್ಗೆ ಉದಯವಾಣಿ ಮೇ. 15 ರಂದು ಆಧಾರ್‌...

  • ಚಾಮರಾಜನಗರ: ಬಸವಾದಿ ಶರಣರು ಸ್ಥಾಪನೆ ಮಾಡಿರುವ ವೀರಶೈವ ಲಿಂಗಾಯತ ಧರ್ಮ ಸಂವಿಧಾನ ಕಲಂನಲ್ಲಿ ಪ್ರತ್ಯೇಕ ಧರ್ಮವಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು...

  • ಹುಮನಾಬಾದ: ಕ್ಯಾಂಪಸ್‌ ಸಂದರ್ಶನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ತೆಲಂಗಾಣ ಜಹೀರಾಬಾದನ ಮಹೀಂದ್ರಾ ಆ್ಯಂಡ್‌ ಮಹಿಂದ್ರಾ ಆಟೋಮೊಬೈಲ್...

  • ಬೀದರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿನ ಹವಾನಿಯಂತ್ರಿತ (ಎಸಿ)ವ್ಯವಸ್ಥೆ ಎರಡು ದಿನಗಳಿಂದ ಕೈ ಕೊಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ...

  • ದೇವನಹಳ್ಳಿ: ಇಲ್ಲಿನ ಪುರಸಭೆ ಚುನಾವಣೆ 29ರಂದು 23 ವಾರ್ಡ್‌ಗಳಿಗೆ ವಿವಿಧ ಪಕ್ಷಗಳಿಂದ 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ ಕಡೆ ದಿನವಾಗಿದ್ದರಿಂದ...