ಫೇಸ್‌ಬುಕ್‌ ಲೈವ್‌: ಇನ್ನು ಹಿಂಸಾ ಚಿತ್ರೀಕರಣ ಇಲ್ಲ

Team Udayavani, May 17, 2019, 6:10 AM IST

ಮಣಿಪಾಲ: ಫೇಸ್‌ಬುಕ್‌ ಅನ್ನು ಬಳಕೆದಾರರು ದುರ್ಬಳಕೆ ಮಾಡದಂತೆ ಹೊಸ ನಿಯಮ ಜಾರಿಗೊಳಿಸಲಿದೆ.

ಫೇಸ್‌ಬುಕ್‌ ಬಳಕೆದಾರರು ಇನ್ನು ಮುಂದೆ ಯಾವುದೇ ರೀತಿಯ ಹಿಂಸಾತ್ಮಕ ವೀಡಿಯೋಗಳನ್ನು ಲೈವ್‌ ಮಾಡು ವುದು, ಶೇರ್‌ ಮಾಡುವಂತಿಲ್ಲ. ಇಂತಹ ಘಟನೆಗಳು ಕಂಡುಬಂದರೆ ಅಂತಹ ಖಾತೆಗಳು ಬ್ಲಾಕ್‌ ಆಗಲಿದೆ ಎಂದು ಫೇಸ್‌ಬುಕ್‌ ಹೇಳಿದೆ.

ಒಂದು ವೇಳೆ ಬಳಕೆದಾರರು ಈ ನಿಯಮ ಗಳನ್ನು ಮೀರಿದರೆ, ಆ ಖಾತೆಯನ್ನು ಯಾವುದೇ ಮುಲಾಜಿಲ್ಲದೆ ಬ್ಲಾಕ್‌ ಮಾಡಲಾಗುವುದು ಎಂದು ಸಂಸ್ಥೆ ಹೇಳಿದೆ. ನ್ಯೂಜಿಲೆಂಡ್‌ ಘಟನೆ ಬಳಿಕ ಫೇಸ್‌ಬುಕ್‌ ಸಂಸ್ಥಾಪಕರಲ್ಲಿ ಈ ಬಗ್ಗೆ ಹಲವು ದೇಶಗಳ ನಾಯಕರು ಚರ್ಚಿಸಿದ್ದರು.

ಸಂಸ್ಥೆ ಹೇಳಿದ್ದೇನು?

  • ಬಳಕೆದಾರರು ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಹೇಳಿಕೆ ಅಥವಾ ವೀಡಿಯೋಗಳ ಲಿಂಕ್‌ ಹಂಚಿಕೊಳ್ಳುವುದೂ ಈ ನಿಯಮದ ಸುಪರ್ದಿಗೆ ಬರುತ್ತದೆ. ನಿಯಮದನ್ವಯ ಅಂಥ ಖಾತೆಯೂ ನಿಷೇಧ.
  • ಫೇಸ್‌ಬುಕ್‌ನ ಈ ಕ್ರಮದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದು ತಪ್ಪುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸಲು ಇದು ಸಹಕಾರಿಯಾಗಲಿದೆ.
  • ಈ ನಿಯಮಗಳನ್ನು ಉಲ್ಲಂಘಿಸಿದರೆ ಬಳಕೆದಾರರ ಖಾತೆಯನ್ನು ಬ್ಲಾಕ್‌ ಮಾಡಲಾಗುತ್ತದೆ ಅಥವಾ ನಿಮಗೆ ನೀಡಲಾದ ಕೆಲವು ಆಯ್ಕೆಗಳನ್ನು ನಿಷೇಧಿಸಲಾಗುತ್ತದೆ.
  • ನ್ಯೂಜಿಲೆಂಡ್‌ ಚರ್ಚ್‌ ದಾಳಿ ವೀಡಿಯೋವನ್ನು ಈಗಾಗಲೇ ಅನೇಕ ಖಾತೆಗಳಿಂದ ಅಳಿಸಿ ಹಾಕಲಾಗಿದೆ. ಕೆಲವರು ಈ ವೀಡಿಯೋವನ್ನು ಸೇವ್‌ ಮಾಡಿಕೊಂಡಿದ್ದು, ಅಂತಹ ಖಾತೆಗಳೂ ನಿಷೇಧಕ್ಕೊಳಗಾಗಲಿವೆ.

ಯಾಕೆ ಈ ಕ್ರಮ?

ಇತ್ತೀಚೆಗೆ ನ್ಯೂಜಿಲೆಂಡ್‌ನ‌ ಕ್ರೈಸ್ಟ್‌ ಚರ್ಚ್‌ ಮಸೀದಿ ಮೇಲೆ ಭಯೋತ್ಪಾದಕ ದಾಳಿ ನಡೆದ ವೇಳೆ ಉಗ್ರ ತನ್ನ ಕೃತ್ಯವನ್ನು ಫೇಸ್‌ಬುಕ್‌ ಲೈವ್‌ ಸ್ಟ್ರೀಮಿಂಗ್‌ ಮಾಡಿದ್ದನು. ಈ ವೀಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿತು. ದಾಳಿಯ ಸಂದರ್ಭ ಈ ಆಯ್ಕೆಯ ಕುರಿತಂತೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಇಂತಹ ಸಂದರ್ಭಗಳ ಬಗ್ಗೆ ಕಠಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಇದರನ್ವಯ ನಿಯಮದಲ್ಲಿ ಬದಲಾವಣೆ ತರಲಿದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹಾವೇರಿ: ಮಳೆ ಆರಂಭಕ್ಕೂ ಮುನ್ನವೇ ಡೆಂಘೀ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆರೋಗ್ಯ, ಶಿಕ್ಷಣ, ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ...

  • ಸಕಲೇಶಪುರ: ತಾಲೂಕಿನಲ್ಲಿ ಅನುಷ್ಠಾನಗೊಳಿಸ ಲಾಗುತ್ತಿರುವ ಎತ್ತಿನಹೊಳೆ ಸಮಗ್ರ ನೀರಾವರಿ ಯೋಜನೆಯಿಂದ ಮಲೆನಾಡಿನ ಪರಿಸರ ಹದಗೆಡಲು ಕಾರಣವಾಗಿದೆ ಎಂಬ ಮಾತುಗಳು...

  • ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬಿತ್ತನೆ ಆಲೂಗಡ್ಡೆ ವ್ಯಾಪಾರ ಆರಂಭವಾಗಿ ಎರಡು ವಾರ ಗಳಾಗುತ್ತಾ ಬಂದರೂ ಆಲೂಗಡ್ಡೆ ಖರೀದಿಗೆ ರೈತರಿಂದ ನೀರಸ ಪ್ರತಿಕ್ರಿಯೆ...

  • ನರೇಗಲ್ಲ: ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಸಂಚಾರಿ ಸುರಕ್ಷಾ ಸಪ್ತಾಹ ಅಡಿಯಲ್ಲಿ ರವಿವಾರ ವಿಶೇಷ ಕಾರ್ಯಾಚರಣೆ ನಡೆಸಿ ಆಟೋಗಳ ದಾಖಲೆಗಳನ್ನು ನರಗುಂದ ಡಿವೈಎಸ್‌ಪಿ...

  • ಗದಗ: ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವುದು, ಮೊದಲ ದಿನದಿಂದಲೇ ಮಕ್ಕಳು ಶಾಲೆಗೆ ಹಾಜರಾಗುವಂತೆ ಪ್ರೇರೇಪಿಸುವ ಉದ್ದೇಶದಿಂದ ಕೆಲ ವರ್ಷಗಳಿಂದ ಶಾಲಾ ಆರಂಭೋತ್ಸವ...

  • ಮೊಳಕಾಲ್ಮೂರು: ಇಲ್ಲಿನ ಪಟ್ಟಣ ಪಂಚಾಯತ್‌ ಗದ್ದುಗೇರಲು ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ತುರುಸಿನ ಹಣಾಹಣಿ ನಡೆದಿದ್ದು, ಪಟ್ಟಣ ಪಂಚಾಯತ್‌ ಚುನಾವಣೆ...