ಜಗನ್‌ ಗೆಲುವು: ಹೆದ್ದಾರಿ ಆಸೆಗೆ ಚಿಗುರು!

Team Udayavani, May 25, 2019, 6:00 AM IST

ಉಡುಪಿ: ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಗೆಲುವು ಸಾಧಿಸಿರುವುದಕ್ಕೂ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌-ಕುಂದಾಪುರ ನಡುವಿನ ಕಾಮಗಾರಿಗೂ ಸಂಬಂಧವೇರ್ಪಟ್ಟಿದೆ!

ಹೌದು. ಜಗನ್‌ ನೇತೃತ್ವದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪ್ರಚಂಡ ಗೆಲುವು ಸಾಧಿಸಿದ ವರದಿ ಹೊರಬೀಳುತ್ತಿರುವಂತೆ ಉಡುಪಿ, ಪಡುಬಿದ್ರಿ, ಕಾಪು, ಕುಂದಾಪುರದ ಕೆಲವೆಡೆ ಹೆದ್ದಾರಿ ಚತುಷ್ಪಥ ಕಾಮಗಾರಿ ಕುರಿತ ಚರ್ಚೆ ಗರಿಗೆದರಿತು. ಇದಕ್ಕೆ ಕಾರಣ ಈ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ನವಯುಗ ಕಂಪೆನಿ ರೆಡ್ಡಿ ಮಾಲಕತ್ವದಲ್ಲಿರುವುದು. ಹಲವು ವರ್ಷಗಳಿಂದ ಕುಂಟುತ್ತಿರುವ ಈ ಹೆದ್ದಾರಿ ಕಾಮಗಾರಿ, ಟೋಲ್‌ ವಿರುದ್ಧ ಈಗಾಗಲೇ ಪ್ರತಿಭಟನೆಗಳು ನಡೆದಿವೆ.

ಎಚ್ಚರಿಕೆ, ಸಹಾಯ?
ಹೆದ್ದಾರಿ ಅವ್ಯವಸ್ಥೆ ಕುರಿತು ಈ ಹಿಂದೆ ಮಾಧ್ಯಮದವರು ಸಂಸದೆ ಶೋಭಾ ಅವರನ್ನು ಪ್ರಶ್ನಿಸಿದಾಗಲೆಲ್ಲ, ನಾನು ಹಲವು ಬಾರಿ ಸಚಿವ ನಿತಿನ್‌ ಗಡ್ಕರಿ ಅವರೊಂದಿಗೆ ಮಾತನಾ ಡಿದ್ದೇನೆ. ಅವರು ನವಯುಗ ಕಂಪೆನಿಯವರೊಂದಿಗೆ ಮಾತುಕತೆ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಅದು ತಾನು ಆರ್ಥಿಕ ಸಂಕಷ್ಟದಲ್ಲಿರುವುದನ್ನು ಹೇಳುತ್ತಾ ಬಂದಿದೆ’ ಎನ್ನುತ್ತಿದ್ದರು. ಈಗ ಶೋಭಾ ಮತ್ತೂಮ್ಮೆ ಸಂಸದೆಯಾಗಿದ್ದಾರೆ.

ಆರ್ಥಿಕ ಸಂಕಷ್ಟದಿಂದ ಪಾರು?
ಜಗನ್‌ ಗೆಲುವು ಅವರ ವ್ಯವಹಾರಕ್ಕೂ ಲಾಭ ತಂದುಕೊಡಬಹುದಾಗಿದ್ದು. ಆ ಮೂಲಕವಾದರೂ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಬಹುದು ಎಂಬ ಆಶಯ ಜನರದ್ದು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ