ಪಕ್ಷಿ ಸಂಕುಲದ ರಕ್ಷಣೆಗೆ ಕೈ ಜೋಡಿಸೋಣ: ಹರಿಪ್ರಸಾದ್‌

Team Udayavani, Apr 21, 2019, 6:30 AM IST

ಬೆಳ್ಮಣ್‌: ಪಕ್ಷಿಗಳ ನೀರಿನ ದಾಹ ನೀಗಿಸುವ ಉದ್ದೇಶದಿಂದ ನೀರು ಉಣಿಸುವ ಕಾಳು-ನೀರು ಯೋಜನೆ ಅಭಿಯಾನದ ಮೂಲಕ ನಾವೆಲ್ಲರೂ ಸ್ವಯಂ ಪ್ರೇರಣೆಯಿಂದ ಮನೆ, ಮರಗಳ ಮೇಲೆ ಪಕ್ಷಿಗಳಿಗಾಗಿ ನೀರು, ಧಾನ್ಯಗಳನ್ನು ಇಟ್ಟು ಪಕ್ಷಿ ಸಂಕುಲದ ರಕ್ಷಣೆಗೆ ಕೈ ಜೋಡಿಸೋಣ ಎಂದು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್‌ ಕ್ಲಬ್‌ನ ಕೋಶಾಧಿಕಾರಿ ಅಬ್ಬನಡ್ಕ ಹರಿಪ್ರಸಾದ್‌ ಆಚಾರ್ಯ ಹೇಳಿದರು.

ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್‌ ಕ್ಲಬ್‌ ವತಿಯಿಂದ ಅಬ್ಬನಡ್ಕದ ಕುಂಟಲಗುಂಡಿಯಲ್ಲಿ ನಡೆದ ಪಕ್ಷಿಗಳಿಗೆ ಕಾಳು-ನೀರಿನ ವ್ಯವಸ್ಥೆಗಳನ್ನು ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫ್ರೆಂಡ್ಸ್‌ ಕ್ಲಬ್‌ ಅಧ್ಯಕ್ಷ ನಂದಳಿಕೆ ರಾಜೇಶ್‌ ಕೋಟ್ಯಾನ್‌, ಸಂಚಾಲಕ ಅಬ್ಬನಡ್ಕ ಸಂದೀಪ್‌ ವಿ. ಪೂಜಾರಿ, ಸ್ಥಾಪಕಾಧ್ಯಕ್ಷ ವಿಟuಲ ಮೂಲ್ಯ, ಕಾರ್ಯದರ್ಶಿ ಪ್ರಶಾಂತ್‌ ಪೂಜಾರಿ ಕೋಶಾಧಿ ಕಾರಿ ಅಬ್ಬನಡ್ಕ ಹರಿಪ್ರಸಾದ್‌ ಆಚಾರ್ಯ, ಬಾಲಕೃಷ್ಣ ಮಡಿವಾಳ, ಸತೀಶ್‌ ಪೂಜಾರಿ, ಹರೀಶ್‌ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಲಲಿತಾ ಆಚಾರ್ಯ ಲೀಲಾ ಪೂಜಾರಿ, ಸುಲೋಚನಾ ಕೋಟ್ಯಾನ್‌, ಹರಿಣಿ ಪೂಜಾರಿ, ಹರಿಣಾಕ್ಷಿ ಪೂಜಾರಿ, ಗೀತಾ ಕುಲಾಲ್‌, ಅಶ್ವಿ‌ನಿ, ಮಮತಾ, ಪುಷ್ಪಾ³ ಕುಲಾಲ್‌, ಸುನೀತಾ ಪಿಂಟೋ, ವೀಣಾ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ