“ಪೇಪರ್‌ ಪೇಪರ್‌ ಮೆಣಸಿನ ಪೇಪರ್..”‌ ಅಷ್ಟಮಿ ಸಂಭ್ರಮದಲ್ಲಿ ಪೇಪರ್‌ ವೇಷಗಳ ಕಲರವ

Team Udayavani, Aug 23, 2019, 1:11 PM IST

ಉಡುಪಿ: ನಿಮಗೆ ರಕ್ಷಿತ್‌ ಶೆಟ್ಟಿ ನಿರ್ದೇಶನದ ʼಉಳಿದವರು ಕಂಡಂತೆʼ ಚಿತ್ರದ “ಪೇಪರ್‌ ಪೇಪರ್‌ ಮೆಣಸಿನ ಪೇಪರ್” ಹಾಡು ನೆನಪಿರಬಹುದು. ಆ ಹಾಡಿನ ದೃಶ್ಯದಲ್ಲಿ ಕೆಲವು ಹುಡುಗರು ಮುಖಕ್ಕೆ ಬಣ್ಣ ಬಳಿದು, ಕೈಯಲ್ಲಿ ಪೇಪರ್‌ ಹಿಡಿದು ಬೀದಿಯಲ್ಲಿ ಸುತ್ತುತ್ತಿರುತ್ತಾರೆ. ಇವರನ್ನು ಮತ್ತೆ ನೋಡುವ ಆಸೆಯಿದೆಯೇ? ಹಾಗಾದರೆ ಇಂದು ನಾಳೆ ಉಡುಪಿಗೆ ಬನ್ನಿ.

ಅಷ್ಟಮಿ ಅಂದ್ರೆ ಉಡುಪಿ ಜಿಲ್ಲೆಯವರಿಗಿಂತಲೂ ಬೇರೆ ಜಿಲ್ಲೆಯಿಂದ ಕೆಲಸಕ್ಕಾಗಿ ನಮ್ಮ ಜಿಲ್ಲೆಗೆ ಬಂದ ವಲಸೆ ಕಾರ್ಮಿಕರ ಮಕ್ಕಳಿಗೆ ಅದೇನೋ ಸಂತೋಷ. ಮನೆಯಲ್ಲೇ ಇರುವ ಬಟ್ಟೆಗಳನ್ನು ಹಾಕಿ, ಮುಖಕ್ಕೆ ಅಂಗಡಿಗಳಲ್ಲಿ ಸಿಗುವ ಒಂದಿಷ್ಟು ಬಣ್ಣಗಳನ್ನು ಹಚ್ಚಿ, ಕೈಯಲ್ಲೋಂದು ಪೇಪರ್ ಹಿಡಿದುಕೊಂಡು ಮನೆ ಮನೆಗೆ ಹೋಗುತ್ತಾರೆ ಈ ಮಕ್ಕಳು. ಇವರೇ ಪೇಪರ್‌ ವೇಷದ ಮಕ್ಕಳು.

ಮುಗ್ಧತೆ ಈ ಮಕ್ಕಳ ಮುಖದಲ್ಲಿ ಎದ್ದು ಕಾಣುತ್ತದೆ. ಊರಿನ ಮಕ್ಕಳು ಇಂಥಹ ವೇಷದಲ್ಲಿ ಸ್ವಲ್ಪ ದೂರನೇ ಉಳಿಯುತ್ತಾರೆ. ಆದರೆ ಈ ಮಕ್ಕಳು ಯಾವುದೇ ಅಂಜಿಕೆ ಇಲ್ಲದೆ ಪೇಪರ್ ಪೇಪರ್ ಅನ್ನುತ್ತಾ ಮನೆ ಮನೆಗೆ, ಅಂಗಡಿಗೆ ಹೋಗಿ ಹಣ ಕೇಳುತ್ತಾರೆ. ಅಷ್ಟಮಿಯ ಸಂಭ್ರಮದ ದಿನ ನೀವು ಉಡುಪಿಗೆ ಬಂದರೆ ನೀವು ಇಂತಹ ಪೇಪರ್‌ ವೇಷದ ಹುಡುಗರನ್ನು ಬೀದಿ ಬೀದಿಯಲ್ಲಿ ಕಾಣಬಹುದು.

ಹೀಗೆ ಸಂಗ್ರಹಿಸಿದ  ಹಣದಿಂದ ತಮ್ಮ ಶಾಲೆಗೆ ಪುಸ್ತಕಗಳನ್ನು ಕೊಳ್ಳಲು, ಅಷ್ಟಮಿಯ ಜಾತ್ರೆಗೆ ಖರ್ಚು ಮಾಡುತ್ತಾರಂತೆ. ಒಟ್ಟಾರೆಯಾಗಿ ಉಡುಪಿ ಕೃಷ್ಣಾಷ್ಟಮಿ, ವಿಟ್ಲಪಿಂಡಿಯ ದೊಡ್ಡ ದೊಡ್ಡ ವೇಷಗಳ ನಡುವೆ ಇಂತಹ ಪುಟ್ಟ ಪೇಪರ್‌ ವೇಷದ ಹುಡುಗರು ನಿಮ್ಮ ಮನಸನ್ನು ಮುದಗೊಳಿಸುವುದಂತೂ ನಿಜ.

ಪೂರ್ಣಿಮಾ ಪೆರ್ಣಂಕಿಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ