ಕಾರ್ಕಳ ಪೇಟೆಯಲ್ಲಿ ಪೊಲೀಸ್‌ ಪಥಸಂಚಲನ

Team Udayavani, Apr 18, 2019, 6:30 AM IST

ಕಾರ್ಕಳ: ಮುಕ್ತ ಹಾಗೂ ನಿರ್ಭೀತಿಯಿಂದ ಮತದಾರರು ಮತ ಚಲಾವಣೆ ಮಾಡಬೇಕೆಂದು ಪ್ರೇರೇಪಿ ಸುವ ಸಲುವಾಗಿ ಸೋಮವಾರ ಕಾರ್ಕಳ ಪೇಟೆಯಲ್ಲಿ ಪೊಲೀಸರಿಂದ ಅನಂತ ಶಯನದಿಂದ ಬಂಡಿಮಠದವರೆಗೆ ಪಥ ಸಂಚಲನ ನಡೆಯಿತು.

ಉಡುಪಿ ಎಸ್‌ಪಿ ನಿಶಾ ಜೇಮ್ಸ್‌ ನೇತೃತ್ವದಲ್ಲಿ ನಡೆದ ಪಥಸಂಚಲನದಲ್ಲಿ ಎಎಸ್‌ಪಿ ಪಿ. ಕೃಷ್ಣಕಾಂತ್‌, ವೃತ್ತ ನಿರೀಕ್ಷಕ ವಿ.ಎಸ್‌. ಹಾಲಮೂರ್ತಿ ರಾವ್‌,
ಎಆರ್‌ಒ ಸಂತೋಷ್‌ ಕುಮಾರ್‌, ತಹಶೀಲ್ದಾರ್‌ ಪುರಂದರ ಹೆಗ್ಡೆ, ಕಾರ್ಕಳ ನಗರ, ಗ್ರಾಮಾಂತರ, ಹೆಬ್ರಿ, ಅಜೆಕಾರು ಪೊಲೀಸ್‌ ಠಾಣಾ ಎಸ್‌ಐ, ಐಟಿಬಿಪಿ, ಕೆಎಸ್‌ಆರ್‌ಪಿ, ಸಿವಿಲ್‌ ಸೇರಿದಂತೆ ಒಟ್ಟು 150 ಸಿಬಂದಿ ಪಥಸಂಚಲನದಲ್ಲಿ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ