ಆಂಗ್ಲ ಪ್ರಭಾವಕ್ಕೆ ಜಗ್ಗದೆ ಇಂದಿಗೂ ದ್ವಿಶತಕಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ

ಶಂಕರಪುರ ಸೈಂಟ್‌ ಜೋನ್ಸ್‌ ಹಿರಿಯ ಪ್ರಾಥಮಿಕ ಶಾಲೆ

Team Udayavani, Dec 5, 2019, 5:28 AM IST

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

1902 ಶಾಲೆ ಸ್ಥಾಪನೆ
ಹುಲ್ಲಿನ ಮಾಡಿನಡಿ ಸ್ಥಾಪನೆಯಾಗಿದ್ದ ಶಾಲೆ

ಕಟಪಾಡಿ: ಶಂಕರಪುರ ಸೈಂಟ್‌ ಜೋನ್ಸ್‌ ಹಿರಿಯ ಪ್ರಾಥಮಿಕ ಶಾಲೆ ಮೂಡಬೆಟ್ಟು ಸುತ್ತ ಮುತ್ತ ಹಲವು ಶಾಲೆಗಳಿದ್ದರೂ, ಆಂಗ್ಲ ಮಾಧ್ಯಮದ ಪ್ರಭಾವ ಇದ್ದರೂ ಸಡ್ಡು ಹೊಡೆದು ನಿಂತಿದ್ದು ಇಂದಿಗೂ 207 ರಷ್ಟು ವಿದ್ಯಾರ್ಥಿಗಳ ಬಲವನ್ನು ಹೊಂದಿದ್ದರೆ ಅದು ಶಾಲಾ ಅಡಳಿತ ಮಂಡಳಿ, ಶಿಕ್ಷಣದ ಗುಣಮಟ್ಟದ ತಾಕತ್ತು ಎಂದರೆ ಅತಿಶಯೋಕ್ತಿಯಾಗಲಾರದು.

1902ರಲ್ಲಿ ಸ್ಥಾಪನೆಯಾಗಿದ್ದ ಶಾಲೆಯು ಇದೀಗ 119 ವರ್ಷದ ಪ್ರಬುದ್ಧತೆಯನ್ನು ಹೊಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಲಾದ್ರ ನೊರೋನ್ಹಾ ಅವರ ಸಂಚಾಲಕತ್ವದಲ್ಲಿ ರಂಗ ಮಾಸ್ಟರ್‌ ಅವರಿಂದ ಕುರ್ಕಾಲು ಗ್ರಾಮದಲ್ಲಿ ಹುಲ್ಲಿನ ಮಾಡಿನ ಕಟ್ಟಡದಲ್ಲಿ ಸ್ಥಾಪನೆಯಾಗಿದ್ದ ಜ್ಞಾನ ದೇಗುಲವು ಮಟ್ಟು ಗ್ರಾಮದ ವಿಷ್ಣುಮೂರ್ತಿ ಭಟ್‌ ಸಂಚಾಲಕತ್ವದಲ್ಲಿ ಮುಂದುವರೆದಿತ್ತು. 1912ರಲ್ಲಿ ವಂ| ಗ್ರೆಗೊರಿ ಡಿ’ಸೋಜಾ ಸಂಚಾಲಕತ್ವದಲ್ಲಿ ಶಾಲೆಯನ್ನು ಇಗರ್ಜಿ ಪರಿಸರಕ್ಕೆ ವರ್ಗಾಯಿಸಿ ಅಂದಿನಿಂದ ಇಂದಿನವರೆಗೆ ಮಂಗಳೂರು ಕಥೋಲಿಕ್‌ ಶಿಕ್ಷಣ ಸಂಸ್ಥೆಯು ಆಡಳಿತವನ್ನು ನಡೆಸಿದೆ.

ಸೌಕರ್ಯ-ಸವಲತ್ತು
ಶಾಲೆಗೆ ಹಲವರು ಸಂಚಾಲಕರಾಗಿದ್ದು, ಶತಮಾನ ಸಂಭ್ರಮವನ್ನು ಕಂಡಿದೆ. ಪ್ರಸ್ತುತ ವಂ|ಫರ್ಡಿನಾಂಡ್‌ ಗೊನ್ಸಾಲ್ವಿಸ್‌ ಚುಕ್ಕಾಣಿಯಲ್ಲಿ ಶಾಲೆ ಯು ಮುನ್ನಡೆಯುತ್ತಿದೆ. ಒಂದರಿಂದ ಏಳನೆ ತರಗತಿ ವರೆಗೆ 5 ಮಂದಿ ಖಾಯಂ ಶಿಕ್ಷಕಿಯರು, ಮೂರು ಮಂದಿ ಗೌರವ ಶಿಕ್ಷಕಿ ಯರು 207 ವಿದ್ಯಾರ್ಥಿಗಳಿಗೆ ಜ್ಞಾನ ಬೋಧನೆ ಮಾಡುತ್ತಿದ್ದಾರೆ. 1988-1995ರಲ್ಲಿ ಸಂಚಾಕರಾಗಿದ್ದ ವಂ| ತಾವ್ರೋ ಅವರ ದೂರಾಲೋಚನೆ, ದಾನಿಗಳ ಸಹಕಾರದಿಂದ 1994ರಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ಪ್ರಸ್ತುತ ಉತ್ತಮ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಆಕ್ಷರ ದಾಸೋಹ ಕೊಠಡಿ, ಆಟದ ಮೈದಾನ, ಸಿ.ಸಿ. ಕೆಮರಾ ಅಳವಡಿಕೆ, ದೂರದರ್ಶನ, ಶಾಲಾ ವಾಹನದ ಸವಲತ್ತು, ದಾನಿಗಳ ಸಹಕಾರದಿಂದ ಕೈತೊಳೆಯುವ ಹಾಗೂ ಕಂಪ್ಯೂಟರ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಮಲ್ಲಿಗೆ ನಾಡಿನ ಶಿಕ್ಷಣದ ಕಂಪು ಪ್ರಪಂಚಕ್ಕೆ
ಮಲ್ಲಿಗೆ ನಾಡಿನ ಕಂಪಿನಲ್ಲಿ ಶಿಕ್ಷಣ ಪಡೆದಿದ್ದ ಪ್ರಸ್ತುತ ಬೆಂಗಳೂರಿನ ಆರ್ಚ್‌ ಬಿಷಪ್‌ ಡೊ|ಅಲೊ#àನ್ಸಸ್‌ ಮಥಾಯಸ್‌, ಕೆನಡಾದಲ್ಲಿ ಪ್ರೋಫೆಸರ್‌ ಮತ್ತು ಕೆನಾನ್‌ ಲಾ ಎಕ್ಸ್‌ಪರ್ಟ್‌ ಫಾ|ಆಗಸ್ಟಿನ್‌ ಮೆಂಡೋನ್ಸ, ಯು.ಎಸ್‌.ಎ.ಯಲ್ಲಿ ನಿವೃತ್ತ ಎಂಜಿನಿಯರ್‌ ಡಾ|ನರಸಿಂಹ ಭಟ್‌, ಐ-ಸ್ಪೆಷಲಿಸ್ಟ್‌ ಡಾ| ಜನಾರ್ದನ ಭಟ್‌, ಮಾನಸಿಕ ತಜ್ಞ ಡಾ|ವೇದವ್ಯಾಸ ಭಟ್‌, ಕರ್ನಾಟಕ ಯುನಿವರ್ಸಿಟಿಯ ಪ್ರೋಫೆಸರ್‌ ರಾಮದಾಸ ಭಟ್‌, ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದ ಆಲ್ಬರ್ಟ್‌ ವಿಲ್ಫೆಡ್‌ ಡಿಸೋಜ, ಬ್ಯಾಂಕಿಂಗ್‌ ಕ್ಷೇತ್ರದ ದಿ| ಎಲ್‌.ಜೆ. ಮಾರ್ಟಿಸ್‌, ಚಿಕಾಗೋ ರಿಸರ್ಚ್‌ ಬಾಕ್ಸರ್‌ ಲ್ಯಾಬ್‌ ನಿರ್ದೇಶಕ ಲಿಯೊ ಮಾರ್ಟಿಸ್‌ ಲಿಯೋ ಮಾರ್ಟಿಸ್‌ ಹಾಗೂ ಮಣಿಪಾಲ ಕೆಎಂಸಿ ಬ್ಲಿಡ್‌ ಬ್ಯಾಂಕ್‌ ಫಾರ¾ರ್‌ ಡೈರೆಕ್ಟರ್‌ ಡಾ|ಕೆ. ಸತೀಶ್‌ ಶೆಟ್ಟಿ ಸಹಿತ ಇಲ್ಲಿನ ಹಳೆ ವಿದ್ಯಾರ್ಥಿಗಳ ಗಡಣವೇ ಜಗತ್ತಿನಾದ್ಯಂತ ಉನ್ನತ ಹುದ್ದೆ, ಉದ್ಯಮಗಳಲ್ಲಿ ಭಾರತೀಯ ಶಿಕ್ಷಣದ ಪರಿಮಳವನ್ನು ಪಸರಿಸಿದ ಸಾಧಕರಾಗಿದ್ದಾರೆ.

ರ್‍ಯಾಂಕ್‌ ಸಾಧಕ ಹಳೆ ವಿದ್ಯಾರ್ಥಿ
ಶಂಕರಪುರದ ಪ್ರಥಮ ಎಂಜಿನಿಯರ್‌ ಆಗಿ ಮೂಡಿ ಬಂದಿದ್ದ ಜೋನ್‌ ಪಿ. ಮೆಂಡೋನ್ಸ ಎಸ್‌.ಎಸ್‌.ಎಲ್‌.ಸಿ.(ಇನ್ನಂಜೆ)ಯಲ್ಲಿ 7ನೇ ರ್‍ಯಾಂಕ್‌ ಪಡೆದಿದ್ದ ಈ ಶಾಲೆಯ ಸಾಧಕ ಹಳೆ ವಿದ್ಯಾರ್ಥಿಯಾಗಿದ್ದರು.

ಅಂಗ ಸಂಸ್ಥೆಗಳ ಸಹಕಾರದಿಂದ ಶಾಲೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಬರುವ ಪ್ರತಿಯೊಂದು ಮಗುವಿಗೂ ವಿದ್ಯೆಯ ಮಹತ್ವ ಮತ್ತು ಮೌಲ್ಯಗಳನ್ನು ಕಲಿಸುವುದೇ ಉನ್ನತ ಗುರಿಯಾಗಿದೆ.
-ಐರಿನ್‌ ಕ್ಲಾರಾ ಡಿ’ಸೋಜಾ, ಪ್ರಭಾರ ಮುಖ್ಯ ಶಿಕ್ಷಕಿ

ಈ ಶಾಲೆಗೆ 1947ರಲ್ಲಿ ಎಡ್ಮಿಷನ್‌ ಆಗಿದ್ದೆ. ಕಲಿಕೆಗೆ ಪೂರಕ ವಾತಾವರಣ. ಶಿಸ್ತು ಬದ್ಧ. ಉತ್ತಮ ಶಿಕ್ಷಣ ಪಡೆದು ಪ್ರಸ್ತುತ ಕೆ.ಎಂ.ಸಿ. ಮಣಿಪಾಲದಲ್ಲಿ ಬ್ಲಿಡ್‌ ಬ್ಯಾಂಕ್‌ ಫಾರ¾ರ್‌ ಡೈರೆಕ್ಟರ್‌ ಆಗಿ ಗೌರವಯುತ ಬದುಕು ಕಟ್ಟುವಂತಾಗಿದೆ.
-ಡಾ|ಕೆ. ಸತೀಶ್‌ ಶೆಟ್ಟಿ, ಹಳೆ ವಿದ್ಯಾರ್ಥಿ

-  ವಿಜಯ ಆಚಾರ್ಯ, ಉಚ್ಚಿಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ