ಹಲವರಿಗೆ ವಂಚಿಸಿದ್ದ ವಾರಂಟ್‌ ಆರೋಪಿ ಬಂಧನ

Team Udayavani, Apr 5, 2019, 10:29 AM IST

ಮಲ್ಪೆ: ವಾರಂಟ್‌ ಎದುರಿಸುತ್ತಿದ್ದ ಆರೋಪಿ ಕಲ್ಯಾಣಪುರ ಮೂಡುತೋನ್ಸೆ ಗ್ರಾಮದ ಪ್ರಭಾಕರ ಪೂಜಾರಿ(40)ಯನ್ನು ಮಲ್ಪೆ ಪೊಲೀಸರು ಬುಧವಾರ ರಾತ್ರಿ ಸಂತೆಕಟ್ಟೆಯಲ್ಲಿ ಬಂಧಿಸಿದ್ದಾರೆ. ಆತ ನಿಗೆ ನ್ಯಾಯಾಂಗ ಬಂಧನ ವಿಧಿ ಸ ಲಾ ಗಿ ದೆ.
ಈತ ಕಲ್ಯಾಣಪುರ ಹಾಗೂ ಸುತ್ತಮುತ್ತಲಿನ ಜನರನ್ನು ನಂಬಿಸಿ ಅವರ ಚಿನ್ನಾಭರಣಗಳನ್ನು ಸ್ಥಳೀಯ ಫೈನಾನ್ಸ್‌ಗಳಲ್ಲಿ ಅಡವಿಟ್ಟು ಮೋಸ ಮಾಡಿದ್ದಾನೆ.

ಉಡುಪಿಯ ಹಲವರಿಂದ ಹಣ ಪಡೆದು ಅವರಿಗೆ ಚೆಕ್‌ ನೀಡಿ ವಂಚಿ ಸಿದ್ದಾನೆ. ಈತನ ಮೇಲೆ ಮಲ್ಪೆ ಹಾಗೂ ಹಿರಿಯಡಕ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಈತ ನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು ಎಂದು ಮಲ್ಪೆ ಪೊಲೀಸರು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ