ಕೊಡಿ ಹಬ್ಬದಲ್ಲಿ  ಪ್ರತಿಷ್ಠೆಯ ಓಕುಳಿಯಾಟ

Team Udayavani, Dec 6, 2017, 10:32 AM IST

7.jpg

ಕೋಟೇಶ್ವರ: ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬದ ಅಂಗವಾಗಿ ಡಿ. 4ರಂದು ಚೂರ್ಣೋತ್ಸವ, ಅವಭೃತ ಸ್ನಾನ ನೆರವೇರಿದ ಅನಂತರ ಡಿ. 5ರ ಬೆಳಗ್ಗಿನ ಜಾವ ನಡೆದ ಬಂಟರ ಯಾನೆ ನಾಡವರ ಸಮಾಜದ ಓಕುಳಿ ಸೇವೆ ಅಪಾರ ಸಂಖ್ಯೆಯ ಭಕ್ತರನ್ನು ಕುತೂಹಲದೊಡನೆ ರಂಜಿಸಿತು.

ನಾನಾ ರೀತಿಯ ಪ್ರಾಚೀನ ಕಾಲದ ಧರ್ಮಪರಂಪರೆಯೊಡನೆ ಧಾರ್ಮಿಕ ಶ್ರದ್ಧಾಭಕ್ತಿಯ ವಿಶೇಷತೆಯನ್ನು ಹೊಂದಿರುವ ಇಲ್ಲಿನ ಕೊಡಿ ಹಬ್ಬದ ಓಕುಳಿ ಸೇವೆಯ ಸಂದರ್ಭದಲ್ಲಿ 3 ಕಡೆಯಿಂದ ಆಗಮಿಸುವ ಬಂಟರ ಸಮುದಾಯದ ತಂಡದ ಮುಖ್ಯಸ್ಥರಿಗೆ ಹೂವಿನ ಹಾರದೊಡನೆ ಸ್ವಾಗತಿಸಿ, ವಾದ್ಯ ಸಮೇತ ಪೇಟೆಯ ಮುಖ್ಯ ಬೀದಿಯಲ್ಲಿ ಸಾಗುವ ಪರಂಪರೆಯು ಇಲ್ಲಿನ ವಿಶೇಷತೆಯಾಗಿದೆ.

ಬಾಳೆಗೊನೆ ಹಿಡಿಯೋ ಸಾಹಸ

ವರ್ಷಂಪ್ರತಿಯಂತೆ ಕೊಡಿ ಹಬ್ಬದ ಮರುದಿನ ರಾತ್ರಿ 12 ಗಂಟೆಯ ಅನಂತರ ನಡೆಯುವ ಓಕುಳಿ ಸೇವೆಯು ಮಾರ್ಕೋಡು, ಮಲ್ಯಾಡಿ ಹಾಗೂ ತೆಕ್ಕಟ್ಟೆಯ ನಾಡವರ ಸಮಾಜಕ್ಕೆ ಮಾತ್ರ ಸೀಮಿತವಾಗಿದ್ದು ಈ ಮೂರು ಕಡೆಯಿಂದ ರಾತ್ರಿ ಆಗಮಿಸುವ ಯುವಕರು ಸಮೇತ ಮಧ್ಯ ವಯಸ್ಸಿನವರು ಸಂಪ್ರದಾಯದಂತೆ ಓಕುಳಿ ಹೊಂಡಕ್ಕೆ ಹಾರಲು ಸಕಲ ತಯಾರಿ ನಡೆಸಿ ಸೇರುವರು. ಕೋಟಿಲಿಂಗೇಶ್ವರನ ಸಾನ್ನಿಧ್ಯದಲ್ಲಿ ಓಕುಳಿ ಸೇವೆಗಾಗಿ ನೂರಾರು ವರುಷಗಳ ಹಿಂದೆ ರಥಬೀದಿಯ ಸನಿಹ ನಿರ್ಮಿಸಲಾದ ನೀರು ತುಂಬಿದ ಓಕುಳಿ ಹೊಂಡಕ್ಕೆ ವಿರುದ್ಧ ದಿಕ್ಕಿನಲ್ಲಿ ಅದರ 2 ಕಡೆಯಲ್ಲಿ ಉದ್ದಕ್ಕೆ ಕಂಬ ನಿರ್ಮಿಸಿ ಸಮಾನಾಂತರವಾಗಿ  ಅದರ ಮಧ್ಯ ಭಾಗದಲ್ಲಿ ಬಾಳೆಹಣ್ಣಿನ ಗೊನೆಯನ್ನು ಕಟ್ಟಿ ಹಗ್ಗದಿಂದ ಬಿಗಿದು ಮೇಲೆತ್ತರಕ್ಕೆ ಹಾಗೂ ಕೆಳಕ್ಕೆ ಅನಾಯಾಸವಾಗಿ ಚಲಿಸುವ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿ ಓಕುಳಿ ಹೊಂಡದ ಒಂದು ಪಾರ್ಶ್ವದಿಂದ ಯುವಕರು ಬಾಳೆಹಣ್ಣಿನ ಗೊನೆಯನ್ನು ಹಿಡಿಯಲು ಪ್ರಯತ್ನ ನಡೆಸುತ್ತಾರೆ. ಈ ಸಂದರ್ಭದಲ್ಲಿ ಅವರ ದಿಕ್ಕು ತಪ್ಪಿಸಿ ಬಾಳೆಹಣ್ಣಿನ ಗೊನೆಯನ್ನು ಸರಿಸುವಾಗ ಚಾಕಚಕ್ಯತೆಯಿಂದ ಬಾಳೆಹಣ್ಣಿನ ಗೊಂಚಲನ್ನು ಹಿಡಿಯುವ ತಂಡವು ಬಹುಮಾನ ಪಡೆಯುವ ಪದ್ಧತಿ ಈ ಭಾಗದ ಬಂಟರ ಸಮುದಾಯಕ್ಕೆ ಒಂದು ಪ್ರತಿಷ್ಠೆಯ ಸೇವೆಯ ಕಣವಾಗಿದೆ. ಹಾಗಾಗಿ ನೂರಾರು ಸಂಖ್ಯೆಯಲ್ಲಿ ಆಗಮಿಸುವ ಬಂಟರ ಸಮುದಾಯದ ಯುವಕರು ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸುವುದರೊಡನೆ ಕೋಟಿ ಲಿಂಗೇಶ್ವರನ ಓಕುಳಿಸೇವೆಯಲ್ಲಿ ಭಾಗಿಯಾಗಿ ಧನ್ಯರಾಗುತ್ತಾರೆ.

ಡಾ| ಸುಧಾಕರ ನಂಬಿಯಾರ್‌

ಟಾಪ್ ನ್ಯೂಸ್

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.