“ಸ್ಟ್ರೀಟ್‌ ಸಿಂಗರ್‌’ ವೈಕುಂಠ ಸಾವು: ನಿರ್ಲಕ್ಷ್ಯ ಆರೋಪ

ಉಡುಪಿ ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಆರೋಪ; ದೂರು-ಪ್ರತಿದೂರು

Team Udayavani, Nov 20, 2019, 12:01 AM IST

ಉಡುಪಿ/ಕುಂದಾಪುರ: ತನ್ನದೇ ಶೈಲಿಯ ಹಾಡುಗಳಿಂದ ಜನರನ್ನು ಮನರಂಜಿಸುತಿದ್ದ ಕುಂದಾಪುರದ “ಸ್ಟ್ರೀಟ್‌ ಸಿಂಗರ್‌’ ವೈಕುಂಠ (32) ಸೋಮವಾರ ರಾತ್ರಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ ಬಹು ಅಂಗಗಳ ವೈಫ‌ಲ್ಯದಿಂದ ಮೃತಪಟ್ಟಿದ್ದಾರೆ, ಆತನಿಗೆ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಲಾಗಿದ್ದು, ಪ್ರಕರಣ ಪೊಲೀಸ್‌ ಠಾಣೆಯ ಮೆಟ್ಟಲೇರಿದೆ.

ತೀವ್ರ ಅನಾರೋಗ್ಯದಿಂದ ಕುಂದಾಪುರದ ರಸ್ತೆಯ ಬದಿಯಲ್ಲಿ ತೀವ್ರಅನಾರೋಗ್ಯದಿಂದ ನರಳುತಿದ್ದ ಹಾಡುಗಾರ ವೈಕುಂಠನನ್ನು ಆತನ ಅಭಿಮಾನಿ ಕುಂದಾಪುರದ ರಂಜಿತ್‌ ಹಂಗಳೂರು ಅವರು 108 ಅಂಬುಲೆನ್ಸ್‌ನಲ್ಲಿ ನ.13ರ ಅಪರಾಹ್ನ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು.

ಆದರೆ ಆಸ್ಪತ್ರೆಗೆ ದಾಖಲಿಸಲು ಬಂದಿದ್ದ ವೇಳೆ ಡಾ| ನಾಗೇಶ್‌ ಅವರು ಅವಮಾನಕರ ರೀತಿಯಲ್ಲಿ ಬೈದುರೋಗಿಯನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಇದನ್ನೆಲ್ಲ ಮೊಬೈಲ್‌ನಲ್ಲಿ ಚಿತ್ರೀಕರಿಸಲು ಮುಂದಾದಾಗ ಮೊಬೈಲ್‌ನ್ನು ಕಿತ್ತುಕೊಂಡು ಹಾಳುಗೆಡವಿದ್ದರು ಎಂದು ರಂಜಿತ್‌ ಹಂಗಳೂರು ಹಾಗೂ ಪ್ರಸಾದ್‌ ಬೈಂದೂರು ಆರೋಪಿಸಿದ್ದರು. ನ.13ರ ಘಟನೆಗೆ ಸಂಬಂಧಿಸಿದಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ಹಾಗೂ ಸಂಬಂಧಿತ ವೈದ್ಯರಿಂದ ಪ್ರತಿದೂರು ದಾಖಲಾಗಿದೆ.

ನಿರ್ಲಕ್ಷ್ಯ ನಡೆದಿಲ್ಲ : ಡಾ| ನಾಗೇಶ್‌
ನಿರ್ಲಕ್ಷ್ಯ ನಡೆದಿಲ್ಲ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ನ.13ರ ಘಟನೆ ಹಾಗೂ ವೈಕುಂಠ ಸಾವಿಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಡಾ| ನಾಗೇಶ್‌, ಸರಕಾರಿ ಆಸ್ಪತ್ರೆ ಇರುವುದೇ ಬಡವರಿ ಗಾಗಿ. ವೈಕುಂಠ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಸಿಟಿಸ್ಕ್ಯಾನ್‌ ಸಹಿತ ಸಾಧ್ಯವಿರುವ ಎಲ್ಲ ಚಿಕಿತ್ಸೆಗಳನ್ನೂ ನೀಡಿದ್ದೇವೆ. ಪ್ರಯತ್ನದ ಹೊರತಾಗಿಯೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಸಾವನ್ನಪ್ಪಿದ್ದಾರೆ. ಎಂದು ತಿಳಿಸಿದ್ದಾರೆ.

ಮುತ್ತಿಗೆ ಹಾಕಲು ಯತ್ನ
ಹಲವರು ಆತನಿಗೆ ಮದ್ಯದ ಆಮಿಷ ತೋರಿಸಿ ಆತನಿಂದ ಹಾಡನ್ನು ಹಾಡಿಸಿ ಅದನ್ನು ಯೂಟ್ಯೂಬ್‌ಗ ಹಾಕಿ ವೈರಲ್‌ ಮಾಡುತಿದ್ದರು. ಆತನ ಆರೋಗ್ಯಕೈಕೊಟ್ಟು, ಚಿಕಿತ್ಸೆಯಿಂದಲೂ ಆತ ಬದುಕುಳಿಯಲಿಲ್ಲ. ಆತನಿಗೆ ಚಿಕಿತ್ಸೆ ನೀಡಿದ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಧೋರಣೆಯಿಂದ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮೃತನ ಹಿತೈಷಿಗಳು, ಅಭಿಮಾನಿಗಳು ಮಂಗಳವಾರ ಆಸ್ಪತ್ರೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ