ಮಂಗಳೂರು: ನೂತನ ಉಪವಿಭಾಗಾಧಿಕಾರಿಯಾಗಿ ಮದನ್ ಮೋಹನ್ ಅಧಿಕಾರ ಸ್ವೀಕಾರ
Team Udayavani, Dec 12, 2019, 5:14 PM IST
ಮಂಗಳೂರು: ಮಂಗಳೂರು ನೂತನ ಉಪವಿಭಾಗಾಧಿಕಾರಿಯಾಗಿ ಮದನ್ ಮೋಹನ್ ಸಿ. ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಕೆಎಎಸ್ ಕಿರಿಯ ಶ್ರೇಣೆಯ ಪರೀಕ್ಷಾರ್ಥಿ ಅಧಿಕಾರಿಯಾದ ಇವರು ಈ ಹಿಂದೆ ರಾಮನಗರ ಜಿಲ್ಲಾ ಪಂಚಾಯತ್ ನಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಈ ಮೊದಲು ಬೆಳ್ತಂಗಡಿ ತಹಶೀಲ್ದಾರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.