ಕರಾವಳಿ ಅಪರಾಧ ಸುದ್ದಿಗಳು (ಜೂನ್‌ 12,ಬುಧವಾರ )

Team Udayavani, Jun 12, 2019, 10:53 AM IST

ಮುಂಡಾಜೆ: ಅಕ್ರಮ ಗೋ ಸಾಗಾಟ ಪ್ರಕರಣ ಇಬ್ಬರು ಆರೋಪಿಗಳು ವಶಕ್ಕೆ

ಬೆಳ್ತಂಗಡಿ : ಐಶಾರಾಮಿ ಕಾರೊಂದರಲ್ಲಿ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ ನಡೆಸುತ್ತಿ¨ªಾಗ ಉಜಿರೆಯ ಮುಂಡಾಜೆ ಸಮೀಪ ಕಾರು ಪಲ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದಿ¨ªಾರೆ.

ಮೂಡುಬಿದಿರೆ ತೋಡಾರು ಹಿದಾಯತ್‌ ನಗರ ನಿವಾಸಿ ಕಾರು ಮಾಲಕ ಅನ್ಸಾರ್‌ (27) ಹಾಗೂ ಮತ್ತೋರ್ವ ಜುಬೇರ್‌ (26) ಬಂಧಿತರು. ಇನ್ನಿಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ.

ಜೂ. 7ರಂದು ಮುಂಡಾಜೆ ಸಮೀಪ ಕಾರು ಕಮರಿಗೆ ಪಲ್ಟಿಯಾದ
ಪರಿಣಾಮ 5 ಜಾನುವಾರುಗಳು ಮೃತಪಟ್ಟು ಮತ್ತೂಂದು ದನ ಬದುಕುಳಿದಿತ್ತು. ಬೆಂಗಳೂರು ನೋಂದಣಿಯ ಕಾರನ್ನು ಅಕ್ರಮ ಗೋ ಸಾಗಾಟಕ್ಕೆ ಬಳಸಲಾಗಿತ್ತು. ತನಿಖೆ ವೇಳೆ ನಕಲಿ ನೋಂದಣಿ ಪ್ಲೇಟ್‌ ಎಂಬುದು ತಿಳಿದು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಈ ಸಂಬಂಧ ಕರ್ತವ್ಯ ಲೋಪದ ಮೇರೆಗೆ ಚಾರ್ಮಾಡಿ ಚೆಕ್‌ ಪೋಸ್ಟ… ನಲ್ಲಿ ಕರ್ತವ್ಯ ನಿರತ ಸಿಬಂದಿಯನ್ನು ಅಮಾನತು ಮಾಡಲಾಗಿತ್ತು.

ಆರೋಪಿಗಳ ಪತ್ತೆ ಹಚ್ಚಲು ತನಿಖಾಧಿಕಾರಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ ಪಿ.ಜಿ. ತಂಡ ಮೂರು ದಿನಗಳಿಂದ ಮೂಡುಬಿದರೆಯಲ್ಲಿ ಠಿಕಾಣಿ ಹೂಡಿತ್ತು. ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಸಫ‌ಲರಾಗಿ¨ªಾರೆ.

ಅಕ್ರಮ ಮರ ಸಾಗಾಟ ವಾಹನ ವಶ
ಮಂಗಳೂರು : ಬಡಗುಳಿಪಾಡಿ ಗ್ರಾಮದ ಕೈಕಂಬದಲ್ಲಿ ಅಕ್ರಮ ಮರ ಸಾಗಾಟ ಮಾಡುತ್ತಿದ್ದ ವಾಹನ ಹಾಗೂ ಸೊತ್ತುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ರಸ್ತೆ ಬದಿಯಲ್ಲಿ ಅಕ್ರಮವಾಗಿ ಟೆಂಪೋ ವಾಹನದ‌ಲ್ಲಿ ಪರವಾನಿಗೆ ಇಲ್ಲದೇ ದಿಮ್ಮಿಗಳನ್ನು ಸಾಗಾಟದ ಮಾಡಿರುವ ಪ್ರಕರಣವನ್ನು ಪತ್ತೆ ಹಚ್ಚಿ ವಾಹನ ಹಾಗೂ ಸಾಗಾಟ ಮಾಡಿದ ದಿಮ್ಮಿಗಳನ್ನು ವಶ ಪಡಿಸಿಕೊಳ್ಳಲಾಗಿದೆ. ವಾಹನ ಚಾಲಕ ಗಣೇಶ್‌ ಅವರನ್ನು ಬಂಧಿಸಿ ಮುಚ್ಚಳಿಕೆ ಪತ್ರದ ಮೂಲಕ ಬಿಡುಗಡೆಗೊಳಿಸಲಾಗಿದೆ. ಕಾರ್ಯಾಚರಣೆಯನ್ನು ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ್‌ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕೆ. ಸುಧೀರ್‌, ಅರಣ್ಯ ರಕ್ಷಕ ಅಭಿಜಿತ್‌ ಬಿ. ಜಿ. ನಡೆಸಿದ್ದರು. ತನಿಖೆಯನ್ನು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಕರಿಕಲನ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇ ಗೌಡ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ತಾಂತ್ರಿಕ ಸಹಾಯಕರ ನಿರ್ದೇಶದಂತೆ ಮಂಗಳೂರು ವಲಯ ಅರಣ್ಯಾಧಿಕಾರಿ ಶ್ರೀಧರ್‌ ನಡೆಸುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

ಮದ್ಯಪಾನ: ಇಬ್ಬರ ವಿರುದ್ಧ ಪ್ರಕರಣ
ಗಂಗೊಳ್ಳಿ: ಆಲೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದವರ ಮೇಲೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್‌ಐ ದಾಳಿ ನಡೆಸಿದ್ದು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಅಣ್ಣಪ್ಪ (38), ಕುಷ್ಟ (53) ಅವರನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

ಬೊಲೆರೋ ಢಿಕ್ಕಿ ಹೊಡೆದು ಪರಾರಿ: ಬೈಕ್‌ ಸವಾರನಿಗೆ ಗಂಭೀರ ಗಾಯ

ಗಂಗೊಳ್ಳಿ: ತ್ರಾಸಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ತ್ರಾಸಿ
ಬೀಚ್‌ ಬಳಿ, ಮಯೂರ ಡಾಬಾದ ಹತ್ತಿರ ಬೈಕ್‌ಗೆ ಬೊಲೆರೋ ವಾಹನ ಢಿಕ್ಕಿಯಾಗಿ ಪರಾರಿಯಾಗಿದೆ. ತ್ರಾಸಿ ಕಡೆಯಿಂದ ಬೈಂದೂರು ಕಡೆಗೆ ಭಾಸ್ಕರ ಶೆಟ್ಟಿ ಅವರು ಚಲಾಯಿಸುತ್ತಿದ್ದ ಬೈಕ್‌ಗೆ ಹಿಂದಿನಿಂದ ಬಿಳಿ ಬಣ್ಣದ ಬೊಲೆರೋ ವಾಹನ ಢಿಕ್ಕಿಯಾಗಿದೆ. ಬೈಕ್‌ ಸವಾರ ಭಾಸ್ಕರ ಶೆಟ್ಟಿ ಅವರು ತೀವ್ರ ಗಾಯ ಗೊಂಡಿದ್ದು, ಅವರನ್ನು ಅದೇ ಬೊಲೆರೋ ವಾಹನದಲ್ಲಿ ತ್ರಾಸಿಯವರೆಗೆ ತಂದು ಅನಂತರ ಕುಂದಾಪುರಕ್ಕೆ ಆ್ಯಂಬುಲೆನ್ಸ್‌ ಮೂಲಕ ಕರೆತಂದು ಆಸ್ಪತ್ರೆಗೆ ದಾಖಲಿಸಲಾಯಿತು. ಅಪಘಾತ ಪಡಿಸಿದ ಬೊಲೆರೋ ವಾಹನ ಪರಾರಿಯಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಢಿಕ್ಕಿ: ಪಾದಚಾರಿಗೆ ಗಾಯ

ಕುಂದಾಪುರ: ತಲ್ಲೂರು ಗ್ರಾಮದ ಪಾರ್ಥಿಕಟ್ಟೆಯ ಜೆ.ಸಿ.ಬಿ. ಗ್ಯಾರೇಜಿನ ಬಳಿ ಮಾರುತಿ ಆಮ್ನಿ ಕಾರು ಪಾದಚಾರಿಗೆ ಢಿಕ್ಕಿ ಹೊಡೆದಿದೆ.

ನೇರಳಕಟ್ಟೆ ಕಡೆಯಿಂದ ತಲ್ಲೂರು ಕಡೆಗೆ ಬರುತ್ತಿದ್ದ ಕಾರು ಬಸವ ಅವರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅನಂತರ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಯನ್ನು ಪಡೆದರು.

ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನಾÉಕ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತಪಡಿಸಿದ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದು ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯಲ್ಲಿ ಅಕ್ರಮ ಮದ್ಯ ಮಾರಾಟ
ಸೋಮವಾರಪೇಟೆ: ಮನೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆಹಚ್ಚಿರುವ ಸೋಮವಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿರುವ ಘಟನೆ ಸಮೀಪದ ಕಾರೆಕೊಪ್ಪದಲ್ಲಿ ನಡೆದಿದೆ.

ಅಲ್ಲಿನ ನಿವಾಸಿ ಕೆ.ಎ. ರವಿ ಮನೆಯಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದ್ದು, ಮನೆಯಲ್ಲಿ ದಾಸ್ತಾನಿರಿಸಿದ್ದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಹೆಣ್ಣು ಮಗು ಪತ್ತೆ ಪ್ರಕರಣ: ಪೋಷಕರಿಗೆ ಸೂಚನೆ
ಉಡುಪಿ: ಮಣಿಪಾಲದ ಮಣ್ಣಪಳ್ಳ ಕೆರೆ ಸಮೀಪ 2018ರ ಆ. 13ರಂದು ಪತ್ತೆಯಾಗಿದ್ದ ಹೆಣ್ಣು ಮಗುವಿನ ಪೋಷಕರು ಇದ್ದರೆ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಅಂದು ಹಸುಳೆಯಾಗಿ ಸಿಕ್ಕಿದ್ದ ಮಗುವಿಗೆ ಈಗ 9 ತಿಂಗಳಾಗಿದ್ದು ಇಶಿಯಾ ಎಂದು ನಾಮಕರಣ ಮಾಡಲಾಗಿದೆ. ಈ ಮಗುವನ್ನು ಮಕ್ಕಳ ರಕ್ಷಣಾ ಘಟಕದ ಉಸ್ತುವಾರಿಯಲ್ಲಿ ಬಾಲನಿಕೇತನದಲ್ಲಿ ಆರೈಕೆ ಮಾಡಲಾಗುತ್ತಿದೆ.

ಕಾರನ್ನು ತಡೆದು ನಿಲ್ಲಿಸಿ ಯುವಕರಿಗೆ ಹಲ್ಲೆ
ಕಾಸರಗೋಡು: ತೀರ್ಥಾಟನ ಕೇಂದ್ರವಾದ ಕಲ್ಲಿಕೋಟೆಯ ಮಡವೂರುಕೋಟ್ಟಕ್ಕೆ ತೆರಳಿ ವಾಪಸಾಗುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಯುವಕರನ್ನು ಹಲ್ಲೆಗೊಳಿಸಿ ಮೊಬೈಲ್‌ ಫೋನ್‌ನೊಂದಿಗೆ ಪರಾರಿಯಾದ ಘಟನೆ ನಡೆದಿದೆ. ತೀರ್ಥಾಟನೆ ನಡೆಸಿ ವಾಪಸಾಗುತ್ತಿದ್ದ ವರ್ಕಾಡಿ ನಿವಾಸಿಗಳಾದ ಫೈಝಲ್‌, ನಿಸಾರ್‌, ಲತೀಫ್‌, ಅಜ್ಮಲ್‌, ಜಾಬೀರ್‌ ಅವರು ಸಂಚರಿಸುತ್ತಿದ್ದ ಕಾರನ್ನು ಚೌಕಿಯಲ್ಲಿ ತಡೆದು ನಿಲ್ಲಿಸಿದ ತಂಡ ಹಲ್ಲೆಗೊಳಿಸಿ ಮೊಬೈಲ್‌ ಫೋನ್‌ನೊಂದಿಗೆ ಪರಾರಿಯಾಗಿದೆ.ಚೆಮ್ನಾಡ್‌ ಸೇತುವೆಯಿಂದಲೇ ಇನ್ನೊಂದು ಕಾರಿನಲ್ಲಿ ಬೆನ್ನಟ್ಟಿ ಬಂದ ಇಬ್ಬರು ಮಾರಕಾಯುಧಗಳಿಂದ ಹಲ್ಲೆ ಮಾಡಿದ್ದಾಗಿ ಗಾಯಾಳುಗಳು ಆರೋಪಿಸಿದ್ದಾರೆ. ಪೊಲೀಸರು ಬಂದಾಗ ತಂಡ ಪರಾರಿಯಾಯಿತು.

ಕುಂದಾಪುರ: ಅಂಗಡಿಗೆ ನುಗ್ಗಿ ಕಳವು
ಕುಂದಾಪುರ: ಕೆ.ಪಿ ಚಂದ್ರಶೇಖರ ಅವರಿಗೆ ಸೇರಿದ ಕಸಬಾ ಗ್ರಾಮದ ಚಿಕನ್‌ ಸಾಲ್‌ ರಸ್ತೆಯಲ್ಲಿರುವ ಕ್ರಾಸ್ಟೊ ಗ್ಯಾರೇಜ್‌ ಶ್ರೀ ನ್ಯೂ ಮೂಕಾಂಬಿಕಾ ಜನರಲ್‌ ಸ್ಟೋರ್ಸ್‌ಗೆ ಮಂಗಳವಾರ ಮುಂಜಾನೆ ಕಳ್ಳರು ನುಗ್ಗಿ¨ªಾರೆ. ಅಂಗಡಿಯ ಶೆಟರ್‌ ಹಾಗೂ ಗ್ರಿಲ್‌ಗೆ ಅಳವಡಿಸಿದ ಬೀಗಗಳನ್ನು ಒಡೆದು ಅಂಗಡಿಯ ಒಳಪ್ರವೇಶಿಸಿ ನಗದು 12,000 ರೂ. ಕಳವು ಮಾಡಿ¨ªಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ವೆ: ಕತ್ತಿಯಿಂದ ಕಡಿದು ಕೊಲೆ ಯತ್ನ ಪ್ರಕರಣ
ಆರೋಪ ಸಾಬೀತು: ಅಪರಾಧಿಗೆ ಜೀವಾವಧಿ ಸಜೆ

ಕುಂದಾಪುರ: ಶಂಕರನಾರಾಯಣ ಪೊಲೀಸ್‌ ಠಾಣೆ ವ್ಯಾಪ್ತಿಯ ಬೆಳ್ವೆ ಗ್ರಾಮದ ಸೂರ್ಗೋಳಿ ಜಲ್ಲಿ ಕ್ರಷರ್‌ ಲೇಬರ್‌ ರೂಂನಲ್ಲಿ 2016 ಜು. 10ರಂದು ಸಾಲದ ಹಣದ ವಿಚಾರದಲ್ಲಿ ವ್ಯಕ್ತಿಯೊಬ್ಬ ಕತ್ತಿಯಿಂದ ಇನ್ನೊಬ್ಬನಿಗೆ ಮಾರಣಾಂತಿಕವಾಗಿ ಕಡಿದ ಅಪರಾಧ ಸಾಬೀತಾಗಿದ್ದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ನ್ಯಾಯಾಧೀಶ ಪ್ರಕಾಶ್‌ ಖಂಡೇರಿ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಕಾರ್ಮಿಕ ರಾಜಕುಮಾರ್‌ ಹಾಗೂ ಗದಗದ ಯಲ್ಲಪ್ಪ ನಡುವಿನ ಹಣಕಾಸು ವಿಚಾರದ ಮಾತುಕತೆಯಲ್ಲಿ ಯಲ್ಲಪ್ಪ, ರಾಜಕುಮಾರ್‌ ಮೇಲೆ ಕತ್ತಿಯಿಂದ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ. ಈ ಆರೋಪ ಇದೀಗ ಸಾಬೀತಾಗಿದ್ದು ಕೊಲೆ ಯತ್ನ (ಐಪಿಸಿ ಸೆಕ್ಷನ್‌ 307)ಕ್ಕೆ ಜೀವಾವಧಿ ಶಿಕ್ಷೆ, ಐಪಿಸಿ ಸೆಕ್ಷನ್‌ 326 (ಗಂಭೀರವಾಗಿ ಗಾಯಗೊಳಿಸುವುದು) ಪ್ರಕರಣಕ್ಕೆ ಸಂಬಂಧಿಸಿ 2 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಲಾಗಿದೆ. ನೊಂದವರು ಕಾನೂನು ಸೇವಾ ಪ್ರಾಧಿಕಾರದಲ್ಲಿ ಪರಿಹಾರ ಪಡೆಯಬಹುದು ಎಂದು ಆದೇಶಿಸಲಾಗಿದೆ.

ಅಂದಿನ ಶಂಕರನಾರಾಯಣ ಪಿಎಸ್‌ಐ ಸುನಿಲ್‌ ಕುಮಾರ್‌ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು 10 ಮಂದಿಯ ವಿಚಾರಣೆ ನಡೆದಿತ್ತು. ಪ್ರಾಸಿಕ್ಯೂಶನ್‌ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು.
ಕೊಲೆಯತ್ನ ಪ್ರಕರಣಕ್ಕೆ ಜೀವಾವಧಿ ಶಿಕ್ಷೆ ವಿಧಿಸಿದ ಅಪರೂಪದ ಪ್ರಕರಣ ಇದಾಗಿದೆ.

ವಿಚಾರಣೆ ಮುಗಿದು ಜೂ.3ರಂದು ಅಪರಾಧ ಸಾಬೀತಾಗಿದ್ದು ಜೂ. 11ರಂದು ಶಿಕ್ಷೆ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು.

ಶಾಲಾ ವಾಹನಗಳಲ್ಲಿ ಓವರ್‌ ಲೋಡ್‌: 48 ವಾಹನಗಳ ವಿರುದ್ಧ ಕೇಸು ದಾಖಲು
ಮಂಗಳೂರು: ನಗರದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಶಾಲಾ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ 48 ಶಾಲಾ ವಾಹನಗಳ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ. ಶಾಲಾ ವಾಹನಗಳಲ್ಲಿ ಓವರ್‌ಲೋಡ್‌ ಮಾಡಿ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಾಲಾ ಆಡಳಿತ ಮಂಡಳಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸೂಕ್ತ ಸೂಚನೆ ಮತ್ತು ಎಚ್ಚರಿಕೆ ನೀಡಿದ್ದರೂ ಕೆಲವು ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕೊಂಡೊಯ್ಯಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

2 ವಾರಗಳ ಅವಧಿಯಲ್ಲಿ ಗೂಡ್ಸ್‌ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ 175 ವಾಹನಗಳು ಹಾಗೂ 48 ಸ್ಕೂಲ್‌ ವ್ಯಾನ್‌, ಆಟೋಗಳ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ