ಫ್ಲೈವುಡ್‌ ಫ್ಯಾಕ್ಟರಿಗೆ ಬೆಂಕಿ: ಅಪಾರ ನಷ್ಟ

ಬಂಟ್ವಾಳದ ಬ್ರಹ್ಮರಕೂಟ್ಲಿನಲ್ಲಿ ಘಟನೆ

Team Udayavani, Oct 24, 2019, 2:43 AM IST

ಬೆಂಕಿ ತಗಲಿ ಸುಟ್ಟು ಹೋಗಿರುವ ಫ್ಲೈವುಡ್‌ ಫ್ಯಾಕ್ಟರಿಯ ಸೊತ್ತುಗಳು.

ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲಿನಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ನಿಂದಾಗಿ ಫ್ಲೈವುಡ್‌ ಫ್ಯಾಕ್ಟರಿಗೆ ಬೆಂಕಿ ತಗಲಿ ಅಪಾರ ಸೊತ್ತು ಭಸ್ಮವಾದ ಘಟನೆ ಬುಧವಾರ ಸಂಭವಿಸಿದೆ. ಬ್ರಹ್ಮರಕೂಟ್ಲು ಶಾಲೆಯ ಮುಂಭಾಗದ ಕೆ. ಹಮೀದ್‌ ಅವರಿಗೆ ಸೇರಿದ ಕೋಸ್ಟಲ್‌ ವುಡ್‌ ಫ್ಯಾಕ್ಟರಿಯಲ್ಲಿ ಬುಧವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಕಾವಲುಗಾರ ಫ್ಯಾಕ್ಟರಿ ಮಾಲಕರಿಗೆ ತಿಳಿಸಿದ್ದಾರೆ.

ಬಳಿಕ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿದರು. ಬೆಂಕಿಯ ತೀವ್ರತೆಯನ್ನು ಗಮ ನಿಸಿ ಬಂಟ್ವಾಳದ ಮತ್ತೂಂದು ವಾಹನ ಹಾಗೂ ಮಂಗಳೂರಿನ ಪಾಂಡೇಶ್ವರ ಹಾಗೂ ಕದ್ರಿಯಿಂದ ಲೂ ಅಗ್ನಿಶಾಮಕ ವಾಹನಗಳನ್ನು ತರಿಸಲಾಯಿತು. ಒಟ್ಟು 4 ವಾಹನಗಳಲ್ಲಿ ಅಗ್ನಿಶಾಮಕ ದಳದ ಸಿಬಂದಿ ಮೂರೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಫ್ಲೈವುಡ್‌ ತಯಾರಿ ಸಲು ಒಣಗಿ ಸಿದ ಕೋರ್‌, ಸ್ಪೇಸ್‌, ಶೀಟ್‌ಗಳು, ಯಂತ್ರೋಪಕರಣ, ವಿದ್ಯುತ್‌ ಪರಿಕರ ಹಾಗೂ ಮೇಲ್ಛಾವಣಿ ಸುಟ್ಟು ಹೋಗಿವೆ. 41 ಲ.ರೂ. ಗಳಿಗೂ ಅಧಿಕ ನಷ್ಟ ಅಂದಾಜಿಸಲಾಗಿದೆ ಎಂದು ಅಗ್ನಿ ಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯ ಅಗ್ನಿಶಾಮಕ ಅಧಿಕಾರಿ ಶಿವಶಂಕರ್‌, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ. ಶೇಖರ್‌, ಬಂಟ್ವಾಳ ಸಹಾಯಕ ಠಾಣಾಧಿಕಾರಿ ರಾಜೀವ್‌, ಪಾಂಡೇಶ್ವರ ಸಹಾಯಕ ಠಾಣಾಧಿಕಾರಿ ಆರ್‌. ಟಿ. ರಮೇಶ್‌ ಹಾಗೂ ಸಿಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ