ರಸ್ತೆಗೆ ಉರುಳಿದ ಮರ: ಬೈಕ್‌ ಸವಾರ ಪಾರು

Team Udayavani, Jun 13, 2019, 6:31 AM IST

ಶಿರ್ವ: ಮೂಡುಬೆಳ್ಳೆ -ಉಡುಪಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ತಿರ್ಲಪಲ್ಕೆ ಬಳಿ ಬುಧವಾರ ಸುರಿದ ಮಳೆಗೆ ಮರವೊಂದು ರಸ್ತೆಗೆ ಬಿದ್ದಿದ್ದು ಬೈಕ್‌ ಸವಾರರೋರ್ವರು ಪವಾಡ ಸದೃಶರಾಗಿ ಪಾರಾಗಿದ್ದಾರೆ.

ಪಳ್ಳಿ ನಿವಾಸಿ ಪತ್ರಿಕಾ ವಿತರಕ ಗೋವಿಂದ ಆಚಾರ್ಯ(50) ಅವರು ಉಡುಪಿಯಿಂದ ಪಳ್ಳಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು.ತಿರ್ಲಪಲ್ಕೆ ಬಳಿ ಬರುತ್ತಿದ್ದಾಗ ಮಳೆಗಾಳಿಗೆ ಮರವೊಂದು ಉರುಳಿ ಬಿದ್ದಿದ್ದು ಕೂದಳೆಲೆಯ ಅಂತರದಲ್ಲಿ ಪಾರಾಗಿದ್ದಾರೆ.

ಬೈಕ್‌ಗೆ ಹಾನಿಯಾಗಿದ್ದು ಗೋವಿಂದ ಆಚಾರ್ಯ ಅವರ ಬಲಗಾಲಿನ ಪಾದಕ್ಕೆ ಗಾಯವಾಗಿದ್ದು ಬೆಳ್ಳೆಗ್ರಾ.ಪಂ.ಸದಸ್ಯ ಗುರುರಾಜ್‌ ಭಟ್‌ ಉಡುಪಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಸುಮಾರು ಅರ್ಧ ಗಂಟೆಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಮರವನ್ನು ಸ್ಥಳೀಯರು, ಮೆಸ್ಕಾಂ ಸಿಬಂದಿ ತೆರವುಗೊಳಿಸಿದ್ದಾರೆ. ಗ್ರಾ.ಪಂ.ಸದಸ್ಯರಾದ ಬೆಳ್ಳೆ ಗುರುರಾಜ್‌ ಭಟ್‌, ರಾಜೇಂದ್ರ ಶೆಟ್ಟಿ, ಕೃಷ್ಣ ಆಚಾರ್ಯ, ಗಣೇಶ್‌ ಪಾಣಾರ, ಹನುಮಪ್ಪ ಮೊದಲಾದವರು ಮರ ತೆರವುಗೊಳಿಸಲು ಸಹಕರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ