ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ಗಳ ಗಡಿಪಾರು
Team Udayavani, Apr 3, 2019, 9:23 AM IST
ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾನೂನು ವಿರೋಧಿ ಚಟುವಟಿಕೆ ಮತ್ತು ರೌಡಿ ಶೀಟರ್ ತೆರೆಯಲ್ಪಟ್ಟಿರುವವರ ಪೈಕಿ ಒಟ್ಟು 5 ಮಂದಿಯನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ತಾತ್ಕಾಲಿಕವಾಗಿ ಗಡಿಪಾರು ಮಾಡಿ ಉಪವಿಭಾಗಾಧಿಕಾರಿ ಮತ್ತು ಉಪವಿಭಾಗೀಯ ದಂಡಾಧಿಕಾರಿ ಜವರೇಗೌಡ ಆದೇಶ ಹೊರಡಿಸಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಕ್ರೈಮ್ರೆಕಾರ್ಡ್ ಬ್ಯೂರೋ ನೀಡಿರುವ ವರದಿ ಆಧರಿಸಿ ಈ ಆದೇಶ ಹೊರಡಿಸಲಾಗಿದ್ದು, ಆದೇಶ ಜಾರಿಯಾದ ದಿನದಿಂದಲೇ ಕೊಡಗು ಜಿಲ್ಲೆಯನ್ನು ತೊರೆಯುವಂತೆ ಐವರಿಗೆ ಸೂಚಿಸಲಾಗಿದೆ.