ದಾಖಲೆ ಇಲ್ಲದ 6.31 ಲಕ್ಷ ರೂ. ವಶ

Rs 6.31 lakh seized, record

Team Udayavani, Apr 3, 2019, 9:15 AM IST

ಮಡಿಕೇರಿ,: ಸೂಕ್ತ ದಾಖಲೆ ಇಲ್ಲದೆ ಜೀಪಿನಲ್ಲಿ ಸಾಗಾಟ ಮಾಡುತ್ತಿದ್ದ 6.31 ಲಕ್ಷ ರೂ. ನಗದನ್ನು ಮಂಗಳವಾರ ಕುಶಾಲನಗರದ ಕೊಪ್ಪ ಬಳಿ ಚುನಾವಣ ತಪಾಸಣ ಕೇಂದ್ರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಜೀಪಿನಲ್ಲಿದ್ದ ಜೀವನ್‌ ಮತ್ತು ಸಂತೋಷ್‌ ಎಂಬವರನ್ನು ವಿಚಾರಿಸಿದಾಗ, ತಾವು ಕೋಳಿ ಫಾರಂನಲ್ಲಿ ಸಿಬಂದಿಗಳಾಗಿದ್ದು ಬ್ಯಾಂಕಿಗೆ ಜಮಾ ಮಾಡಲು ಹಣ ಕೊಂಡೊಯ್ಯುತ್ತಿರುವುದಾಗಿಯೂ, ಸಮರ್ಪಕ ದಾಖಲೆ ಒದಗಿಸುವುದಾಗಿಯೂ ತಿಳಿಸಿದ್ದಾರೆ. ಸ್ಥಳಕ್ಕೆ ಉಪವಿಭಾಗಾಧಿಕಾರಿ ಜವರೇಗೌಡ, ತಹಶೀಲ್ದಾರ್‌ ಗೋವಿಂದರಾಜು ಭೇಟಿ ನೀಡಿ ಪರಿಶೀಲಿಸಿದ್ದು, ಹಣವನ್ನು ಖಜಾನೆಗೆ ಹಸ್ತಾಂತರಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ