ಇನ್ನೂ 13 ಶಾಸಕರ ರಾಜೀನಾಮೆ ಪೆಂಡಿಂಗ್‌: ಮುಂದುವರಿದ ಅತಂತ್ರ ಸ್ಥಿತಿ

ಪ್ರಸಕ್ತ ವಿಧಾನಸಭೆಗೆ ರಮೇಶ್‌ ಜಾರಕಿಹೊಳಿ, ಕುಮಟಳ್ಳಿ, ಶಂಕರ್‌ ಸ್ಪರ್ಧಿಸುವಂತಿಲ್ಲ

Team Udayavani, Jul 26, 2019, 6:10 AM IST

BIG

ಬೆಂಗಳೂರು: ರಾಜ್ಯ ರಾಜಕೀಯ ಸ್ಥಿತಿ ಡೋಲಾಯಮಾನವಾಗಿರುವ ನಡುವೆಯೇ, ಅತೃಪ್ತ ಶಾಸಕರಾದ ರಮೇಶ್‌ ಜಾರಕಿಹೊಳಿ, ಮಹೇಶ್‌ ಕುಮಟಳ್ಳಿ ಹಾಗೂ ಪಕ್ಷೇತರ ಶಾಸಕ ಆರ್‌.ಶಂಕರ್‌ ಅವರನ್ನು ಹದಿನೈದನೇ ವಿಧಾನಸಭೆಯಿಂದ ಅನರ್ಹಗೊಳಿಸಿ ಸ್ಪೀಕರ್‌ ರಮೇಶ್‌ಕುಮಾರ್‌ ತೀರ್ಪು ನೀಡಿದ್ದಾರೆ.

ಇದರೊಂದಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಲೆಕ್ಕಾಚಾರಗಳು ಆರಂಭವಾಗಿವೆ. ಅನರ್ಹಗೊಂಡ ಈ ಶಾಸಕರು ಪ್ರಸಕ್ತ ವಿಧಾನಸಭೆ ಅವಧಿ ಮುಗಿಯುವವರೆಗೆ (ಇನ್ನೂ 3 ವರ್ಷ 10 ತಿಂಗಳು) ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಅಥವಾ ಅಧಿಕಾರ ಅನುಭವಿಸುವ ಹಾಗಿಲ್ಲ. ಒಂದು ವೇಳೆ, ಈ ವಿಧಾನಸಭೆಯ ಅವಧಿ ಮೊಟಕುಗೊಂಡಲ್ಲಿ 16ನೇ ವಿಧಾನಸಭೆಗೆ ನಡೆಯಬಹುದಾದ ಚುನಾವಣೆಗೆ ಸ್ಪರ್ಧಿಸಲು ಅಡ್ಡಿ ಇಲ್ಲ. ಆದರೆ, ಅನರ್ಹತೆಗೊಂಡಿರುವ ಮೂವರು ಸುಪ್ರೀಂ ಮೊರೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಏತನ್ಮಧ್ಯೆ, ರಾಜೀನಾಮೆ ನೀಡಿರುವ ಕಾಂಗ್ರೆಸ್‌ನ 10 ಮಂದಿ ಹಾಗೂ ಜೆಡಿಎಸ್‌ನ ಮೂವರು ಶಾಸಕರ ಪ್ರಕರಣದ ಬಗ್ಗೆ ಇನ್ನೂ ಪರಿಶೀಲನೆ ನಡೆದಿದೆ.

ಈ ಬಗ್ಗೆ ಕೆಲವೇ ದಿನಗಳಲ್ಲಿ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್‌ ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ, ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಬಿಜೆಪಿ ಮತ್ತಷ್ಟು ಕಾಯುವ ಸಂದರ್ಭ ಬರಬಹುದು. ಎಲ್ಲ ಶಾಸಕರ ರಾಜೀನಾಮೆ ಕುರಿತ ತೀರ್ಪು ಹೊರಬೀಳುವವರೆಗೆ ಗೊಂದಲಗಳು ಮುಂದುವರೆಯಲಿದೆ. ಒಂದೆಡೆ, ಮುಂಬೈನಲ್ಲಿರುವ ಕೆಲ ಶಾಸಕರು ಮತ್ತೆ ಮರಳುತ್ತಾರೆ ಎಂದು ಕಾಂಗ್ರೆಸ್‌, ಜೆಡಿಎಸ್‌ ಕಾಯುತ್ತ ಕೂತಿದ್ದರೆ, ಇನ್ನೊಂದೆಡೆ ವಿಧಾನಸಭೆ ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆಯೇ ಎಂಬ ಪ್ರಶ್ನೆಗಳು ಮೂಡಿವೆ.

ಹೊಸ ಲೆಕ್ಕಾಚಾರ
ಪ್ರಸ್ತುತ ಸ್ಪೀಕರ್‌ ಕ್ರಮದಿಂದ ರಾಜ್ಯ ವಿಧಾನಸಭೆಯ ಬಲ 221ಕ್ಕೆ ಇಳಿದಿದ್ದು ಬಹುಮತಕ್ಕೆ 112 ಬೇಕಾಗಿದೆ. ಪಕ್ಷೇತರ ಶಾಸಕನ ಆನರ್ಹತೆಯಿಂದ ಬಿಜೆಪಿಯ ಬಲ 105 ಹಾಗೂ ಒಬ್ಬ ಪಕ್ಷೇತರ ಸೇರಿ 106 ಆಗಲಿದೆ. ಸ್ಪೀಕರ್‌ ಸೇರಿ ಕಾಂಗ್ರೆಸ್‌-ಜೆಡಿಎಸ್‌ ಬಲ 100 ಆಗುತ್ತದೆ. ಬಿಎಸ್‌ಪಿ ಶಾಸಕ ಬೆಂಬಲ ನೀಡಿದರೆ 101, ನಾಮನಿರ್ದೇಶನ ಸದಸ್ಯನಿಗೆ ಮತದಾನ ಹಕ್ಕು ಇರುವುದರಿಂದ 102 ಆಗಲಿದ್ದು, ಹದಿಮೂರು ಅತೃಪ್ತರು ವಾಪಸ್‌ ಬಂದು ರಾಜೀನಾಮೆ ಹಿಂಪಡೆದರೆ ಮತ್ತೆ ಕಾಂಗ್ರೆಸ್‌-ಜೆಡಿಎಸ್‌ ಬಲ 115 ಕ್ಕೆ ಏರಲಿದೆ. ಗೈರು ಹಾಜರಾಗಿದ್ದ ಶ್ರೀಮಂತಪಾಟೀಲ್, ಬಿ.ನಾಗೇಂದ್ರ ಇದೀಗ ಅನಿವಾರ್ಯವಾಗಿ ಬರಬೇಕಾಗುತ್ತದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದು. ಇತ್ತ ಕಡೆ, ಬಿಜೆಪಿಯ ಈಗಿನ ಸದಸ್ಯ ಬಲ 106 ಆಗಿದ್ದು, ಬಹುಮತ ಸಾಬೀತುಪಡಿಸಲು ಇನ್ನೂ ಆರು ಮಂದಿ ಬೇಕಾಗುತ್ತದೆ. ಒಂದು ವೇಳೆ ಮೊನ್ನೆಯ ಹಾಗೆ ಅತೃಪ್ತ ಶಾಸಕರು ಸದನಕ್ಕೆ ಹಾಜರಾಗದಂತೆ ನೋಡಿಕೊಂಡಲ್ಲಿ ಬಹುಮತ ಸಾಬೀತುಪಡಿಸುವ ಸಾಧ್ಯತೆ ಇದೆ. ಆದರೆ, ಅತೃಪ್ತ ಶಾಸಕರು ಸದನಕ್ಕೆ ಬಂದಲ್ಲಿ ಪರಿಸ್ಥಿತಿ ಬದಲಾಗಬಹುದು.

ಕಾದು ನೋಡುವುದು ಸೂಕ್ತ: ಬಿಜೆಪಿ ವರಿಷ್ಠರು

ಪಕ್ಷೇತರ ಸೇರಿದಂತೆ ಕಾಂಗ್ರೆಸ್‌ನ ಇಬ್ಬರು ಶಾಸಕರನ್ನು ಸ್ಪೀಕರ್‌ ಗುರುವಾರ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್‌ ಉಳಿದ 13 ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥದ ನಂತರವೇ ಮುಂದುವರಿಯುವುದು ಸೂಕ್ತ ಎಂಬ ಚಿಂತನೆ ನಡೆಸಿದಂತಿದೆ. ರಾಜೀನಾಮೆ ಸಲ್ಲಿಸಿದ 15 ಶಾಸಕರ ಪೈಕಿ ಮೂವರು ಶಾಸಕರ ರಾಜೀನಾಮೆ ಪ್ರಕರಣವನ್ನು ಸ್ಪೀಕರ್‌ ಈಗಾಗಲೇ ಇತ್ಯರ್ಥಪಡಿಸಿದ್ದಾರೆ. ಈ ಹಂತದಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವೆನಿಸದು. ಉಳಿದ ಶಾಸಕರ ರಾಜೀನಾಮೆ ಪ್ರಕರಣವನ್ನು ಸ್ಪೀಕರ್‌ ಸದ್ಯದಲ್ಲೇ ಇತ್ಯರ್ಥಪಡಿಸುವ ಸಾಧ್ಯತೆ ಇದೆ. ಹಾಗಾಗಿ ಈ ಹಂತದಲ್ಲಿ ಕಾದು ನೋಡಿ ಮುಂದುವರಿಯುವುದು ಸೂಕ್ತವೆನಿಸುತ್ತದೆ. ಈ ಬಗ್ಗೆ ಶುಕ್ರವಾರ ಚರ್ಚಿಸೋಣ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಗೃಹ ಸಚಿವ ಅಮಿತ್‌ ಶಾ ಸೂಚಿಸಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಗುರುವಾರ ಬೆಳಗ್ಗೆ ರಾಜ್ಯ ಬಿಜೆಪಿ ನಿಯೋಗ ಅಮಿತ್‌ ಶಾ ಜತೆಗೆ ಒಂದು ಸುತ್ತಿನ ಮಾತುಕತೆ ನಡೆದಿತ್ತು.

ಅನರ್ಹ ಆದರೆ…

-ಹಾಲಿ ವಿಧಾನಸಭೆ ಅವಧಿಯಲ್ಲಿಯೇ ಉಪ ಚುನಾವಣೆ ಇದ್ದರೆ ಸ್ಪರ್ಧಿಸುವಂತಿಲ್ಲ. -ಅನರ್ಹತೆಯು ಹದಿನೈದನೇ ವಿಧಾನಸಭೆ ಅವಧಿಯಾದ 2023 ಮೇವರೆಗೆ ಅನ್ವಯ. -ಈ ಅವಧಿಯಲ್ಲಿ ವಿಧಾನಸಭೆ ವಿಸರ್ಜನೆಯಾಗಿ ಹೊಸತಾಗಿ ಚುನಾವಣೆ ನಡೆದರೆ ಸ್ಪರ್ಧಿಸಬಹುದು
-ಈ ವಿಧಾನಸಭೆ ಅವಧಿಯಲ್ಲಿ ಸಚಿವರಾಗುವಂತಿಲ್ಲ ಹಾಗೂ ಸರ್ಕಾರದಲ್ಲಿ ವೇತನ ಸಹಿತ ಹುದ್ದೆ ಹೊಂದುವಂತೆ ಇಲ್ಲ.

ಮುಂದೇನು?

-ತೀರ್ಪು ಪ್ರಶ್ನಿಸಿ ಕೋರ್ಟ್‌ಗೆ ಮೊರೆ ಸಾಧ್ಯತೆ
-ಅನರ್ಹತೆ ಆತಂಕದಿಂದ ಅತೃಪ್ತರು ಮರಳಿ ಕಾಂಗ್ರೆಸ್‌-ಜೆಡಿಎಸ್‌ಗೆ ಬರುವ ನಿರೀಕ್ಷೆ -ಅತೃಪ್ತರು ವಾಪಸ್‌ ಬರದಂತೆ ನೋಡಿಕೊಂಡು ಇರುವ ಸಂಖ್ಯಾಬಲದಡಿ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಬಿಜೆಪಿ ಹಕ್ಕು ಮಂಡಿಸಬಹುದು
-ವಿಧಾನಸಭೆ ಕೆಲ ಕಾಲ ಅಮಾನತ್ತಿಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆ ಹೇರಬಹುದು

ಅನರ್ಹತೆಗೆ ಕಾರಣ

ರಮೇಶ್‌ ಜಾರಕಿಹೊಳಿ (ಗೋಕಾಕ್‌), ಮಹೇಶ್‌ ಕುಮಟಳ್ಳಿ (ಅಥಣಿ) ಇವರನ್ನು ಅನರ್ಹಗೊಳಿಸಿದ್ದು ಸದ್ಯದ ಬೆಳವಣಿಗೆಗಲ್ಲ. ಫೆಬ್ರವರಿಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದೆ ಇವರಿಬ್ಬರು ವಿಪ್‌ ಉಲ್ಲಂಘಿಸಿದ್ದರು. ಹೀಗಾಗಿ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಆರೋಪಿಸಿ ಶಾಸಕಾಂಗ ನಾಯಕ ಸಿದ್ದರಾಮಯ್ಯ ದೂರು ನೀಡಿದ್ದರು. ಇದರ ಆಧಾರದಲ್ಲಿ ಅನರ್ಹ ಮಾಡಲಾಗಿದೆ.

ಪಕ್ಷೇತರ ಶಾಸಕ ಆರ್‌.ಶಂಕರ್‌ (ರಾಣೆಬೆನ್ನೂರು) ಅವರು ಜೂನ್‌ ತಿಂಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ತಾವು ಪ್ರತಿನಿಧಿಸಿದ್ದ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿ ಕಾಂಗ್ರೆಸ್‌ ಪಕ್ಷದ ಸದಸ್ಯನಾಗಿದ್ದೇನೆ ಎಂದು ಪತ್ರ ನೀಡಿದ್ದು, ಆದಾದ ನಂತರ ಜುಲೈ ನಲ್ಲಿ ಮತ್ತೆ ರಾಜ್ಯಪಾಲರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆ ಎಂದು ಪತ್ರದ ಮೂಲಕ ತಿಳಿಸಿದ್ದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಆನ್ವಯದಡಿ ಆನರ್ಹಗೊಳಿಸಲಾಗಿದೆ.

ಟಾಪ್ ನ್ಯೂಸ್

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

1-fffdsf

ನಾವು ಇಂದು ವಿಷವರ್ತುಲದಲ್ಲಿ ಸಿಲುಕಿದ್ದೇವೆ : ಸ್ಪೀಕರ್ ಕಾಗೇರಿ

Ranu Mondal sings trending song Kacha Badam

ವೈರಲ್ ಸಾಂಗ್ ‘ಕಚಾ ಬದಾಮ್’ ಹಾಡಿ ಟ್ರೋಲಾದ ರಾನು ಮಂಡಲ್: ವಿಡಿಯೋ ನೋಡಿ

13gold

ಹಾಡ ಹಗಲೇ ಜ್ಯುವೆಲರಿ ಅಂಗಡಿ ದರೋಡೆ ಯತ್ನ: ಮಹಿಳೆ ಪೊಲೀಸ್ ವಶಕ್ಕೆ

Gandhi

ಇಸ್ರೇಲ್ ಜತೆ ಒಪ್ಪಂದ- ಪೆಗಾಸಸ್ ಬಳಸಿ ಗೂಢಚಾರಿಕೆ; ಮೋದಿ ಸರ್ಕಾರದಿಂದ ದೇಶದ್ರೋಹ; ರಾಹುಲ್

12CTravi

ಶಾಸಕ ಸಿ.ಟಿ.ರವಿ ತಂದೆ ತಿಮ್ಮೇಗೌಡ ನಿಧನ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ಪಾಣೆಮಂಗಳೂರಿನ ಕಿರುಸೇತುವೆಯಿಂದ ತೋಡಿಗೆ ಹಾರಿ ವ್ಯಕ್ತಿ ಆತ್ಮಹತ್ಯೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-fffdsf

ನಾವು ಇಂದು ವಿಷವರ್ತುಲದಲ್ಲಿ ಸಿಲುಕಿದ್ದೇವೆ : ಸ್ಪೀಕರ್ ಕಾಗೇರಿ

12CTravi

ಶಾಸಕ ಸಿ.ಟಿ.ರವಿ ತಂದೆ ತಿಮ್ಮೇಗೌಡ ನಿಧನ

cm-b-bommai

ಶಾಲಾರಂಭಕ್ಕೆ ಗ್ರೀನ್ ಸಿಗ್ನಲ್, ನೈಟ್ ಕರ್ಫ್ಯೂ ರದ್ದು: ಹೊಸ ನಿಯಮ ಪ್ರಕಟಿಸಿದ ರಾಜ್ಯ ಸರ್ಕಾರ

pratap

ಮೈಸೂರು ಗ್ಯಾಸ್ ಟ್ರಬಲ್: ಸ್ವಪಕ್ಷೀಯರ ವಿರುದ್ಧ ಮತ್ತೆ ಸಿಂಹ ಘರ್ಜನೆ

1-sadsad

ಹೂ ಅಂಟಾವ ಮಾವ, ಉಹೂ ಅಂಟಾವ..! : ಶಾಸಕ ರಾಜೂಗೌಡ ಟಾಂಗ್

MUST WATCH

udayavani youtube

ಉಳ್ಳಾಲ : ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮೆಯನ್ನು ರಕ್ಷಿಸಲು ಹೋದ ಪ್ರಿಯಕರ ಸಮುದ್ರಪಾಲು

udayavani youtube

ಚಿಕ್ಕಮಗಳೂರು : ಅರಣ್ಯ ಪ್ರದೇಶದಲ್ಲಿ ನವವಿವಾಹಿತೆ ಅನುಮಾನಾಸ್ಪದ ಸಾವು

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

ಹೊಸ ಸೇರ್ಪಡೆ

16sports

ಆರೋಗ್ಯಕರ ಜೀವನಕ್ಕೆ ಕ್ರೀಡೆ ಅಗತ್ಯ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

ಜಮ್ಮು-ಕಾಶ್ಮೀರ: ಉಗ್ರರ ದಾಳಿ ಸಂಚು ವಿಫಲ, ಶಸ್ತ್ರಾಸ್ತ್ರ ಸಹಿತ ಮೂವರ ಬಂಧನ

1-fffdsf

ನಾವು ಇಂದು ವಿಷವರ್ತುಲದಲ್ಲಿ ಸಿಲುಕಿದ್ದೇವೆ : ಸ್ಪೀಕರ್ ಕಾಗೇರಿ

15covid

ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ

Ranu Mondal sings trending song Kacha Badam

ವೈರಲ್ ಸಾಂಗ್ ‘ಕಚಾ ಬದಾಮ್’ ಹಾಡಿ ಟ್ರೋಲಾದ ರಾನು ಮಂಡಲ್: ವಿಡಿಯೋ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.