ಪಿಂಕ್ ಬಾಲ್ ಟೆಸ್ಟ್: ಅಭ್ಯಾಸ ಆರಂಭ
Team Udayavani, Mar 11, 2022, 7:25 AM IST
ಬೆಂಗಳೂರು: ಪ್ರವಾಸಿ ಶ್ರೀಲಂಕಾ ಎದುರಿನ ಮೊಹಾಲಿ ಟೆಸ್ಟ್ ಪಂದ್ಯವನ್ನು ಮೂರೇ ದಿನಗಳಲ್ಲಿ ಮುಗಿಸಿದ ಟೀಮ್ ಇಂಡಿಯಾ ಬೆಂಗಳೂರಿಗೆ ಆಗಮಿಸಿದೆ. ಇಲ್ಲಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಶನಿವಾರದಿಂದ ಡೇ-ನೈಟ್ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಇದಕ್ಕಾಗಿ ಕ್ರಿಕೆಟಿಗರೆಲ್ಲ ಪಿಂಕ್ ಬಾಲ್ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಟೆಸ್ಟ್ ತಂಡಕ್ಕೆ ಮರಳಿದ ಅಕ್ಷರ್ ಪಟೇಲ್, ಜಯಂತ್ ಯಾದವ್, ಸಿರಾಜ್ ಅವರೆಲ್ಲ ಬೌಲಿಂಗ್ ಅಭ್ಯಾಸ ನಡೆಸಿದರೆ, ವಿರಾಟ್ ಕೊಹ್ಲಿ ಮತ್ತು ಅಗರ್ವಾಲ್ ಮೊದಲಾದವರು ಕೋಚ್ ರಾಹುಲ್ ದ್ರಾವಿಡ್ ಅವರ ಸಮ್ಮುಖದಲ್ಲಿ ಬ್ಯಾಟಿಂಗ್ ಅಭ್ಯಾಸದಲ್ಲಿ ತೊಡಗಿದರು.
ಫುಟ್ ಬಾಲ್ ಇದು ಭಾರತ ಆಡಲಿರುವ 4ನೇ ಹಗಲು-ರಾತ್ರಿ ಟೆಸ್ಟ್ ಪಂದ್ಯ. ತವರಿನ ಎರಡೂ ಪಂದ್ಯಗಳನ್ನು ಗೆದ್ದರೆ, ಆಸ್ಟ್ರೇಲಿಯ ವಿರುದ್ಧ ಅಡಿಲೇಡ್ನಲ್ಲಿ ನಡೆದ ಪಂದ್ಯದಲ್ಲಿ ಸೋಲುಂಡಿತ್ತು.
ಭಾರತ ಕೊನೆಯ ಡೇ-ನೈಟ್ ಟೆಸ್ಟ್ ಆಡಿದ್ದು ಇಂಗ್ಲೆಂಡ್ ವಿರುದ್ಧ. ಅಹ್ಮದಾಬಾದ್ನಲ್ಲಿ ನಡೆದ ಪಂದ್ಯ ವನ್ನು ಭಾರತ ಎರಡೇ ದಿನಗಳಲ್ಲಿ ಜಯಿಸಿತ್ತು.