“ಅವಕಾಶ’ಗೆ ಅವಕಾಶ ಕೊಡಿಸಿದ ರೆಸ್ಯೂಮ್ : ಸ್ಟಾರ್ಟಪ್ ಪ್ರವೇಶಕ್ಕೆ ಯುವಕನ ವಿಶೇಷ ಪ್ರಯತ್ನ
Team Udayavani, Jun 8, 2021, 7:15 AM IST
ಮುಂಬಯಿ: ಉದ್ಯೋಗ ಪಡೆದುಕೊಳ್ಳಬೇಕಾದರೆ ಸ್ವವಿವರಣೆ (ರೆಸ್ಯೂಮ್) ಇದ್ದರೆ ಸಾಲದು. ಅದು ಮನ ಸೆಳೆಯುವಂತೆ ಮತ್ತು ಕ್ರಿಯಾತ್ಮಕವಾಗಿ ಇರಬೇಕು ಎನ್ನುವುದು ಸಾಮಾನ್ಯ ತಿಳಿವಳಿಕೆ. ಅದನ್ನು ಪುಷ್ಟೀಕರಿಸುವ ಸಂಗತಿ ಮುಂಬಯಿನಲ್ಲಿ ನಡೆದಿದೆ. ಮುಂಬಯಿನ ಅವಕಾಶ್ ಶಾ ಎಂಬ ಯುವಕ ಸಿದ್ಧಪಡಿಸಿದ 3ಡಿ ವೀಡಿಯೋ ಆತನಿಗೆ ನಿರೀಕ್ಷಿಸಿದಂತೆ ಇಂಟರ್ನ್ಶಿಪ್ ಅನ್ನು ಗಳಿಸಿ ಕೊಟ್ಟಿದೆ. ಒಟ್ಟು 32 ಸೆಕೆಂಡ್ಗಳ ಅವಧಿಯ ಜಾಹೀರಾತು ಭಾರೀ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ವಿತ್ತೀಯ ತಾಂತ್ರಿಕ ಸ್ಟಾರ್ಟಪ್ (ಫಿನ್ಟೆಕ್) ಆಗಿರುವ ಕ್ರೆಡ್ (CRED)ನಲ್ಲಿ ಇಂಟರ್ನ್ಶಿಪ್ ಮಾಡಲು ಉದ್ದೇಶಿಸಿದ್ದ ಅವಕಾಶ್ ಶಾ. ಕ್ರೆಡ್ ಸಂಸ್ಥೆಯ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಲು ಸಾಧ್ಯವಾಗುತ್ತದೆ. 3ಡಿ ಗ್ರಾಫಿಕ್ಸ್ ಮತ್ತು ಮೋಶನ್ ಡಿಸೈನರ್ ಆಗಿರುವ ಆತನಿಗೆ ಕ್ರೆಡ್ನಲ್ಲಿ ಇಂಟರ್ನ್ಶಿಪ್ ಮಾಡುವ ಉದ್ದೇಶ ಇದ್ದ ಕಾರಣ ಮನ ಸೆಳೆಯುವ ಉದ್ದೇಶದಿಂದ ವಿಶೇಷ ರೀತಿಯ 3ಡಿ ವೀಡಿಯೋ ಸಿದ್ಧಪಡಿಸಿ, ಲಿಂಕ್ಡ್ಇನ್ನಲ್ಲಿ ಅಪ್ಲೋಡ್ ಮಾಡಿದ್ದಾನೆ.
ಜತೆಗೆ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ, ವಿನ್ಯಾಸ ವಿಭಾಗದ ಮುಖ್ಯಸ್ಥ ಹರೀಶ್ ಶಿವರಾಮಕೃಷ್ಣನ್ಗೆ ಟ್ಯಾಗ್ ಮಾಡಿದ್ದಾನೆ. 3 ದಿನಗಳ ಹಿಂದೆ ಅಪ್ಲೋಡ್ ಮಾಡಿರುವ ಈ ವೀಡಿಯೋವನ್ನು 9.9 ಲಕ್ಷ ಮಂದಿ ವೀಕ್ಷಿಸಿದ್ದಾರೆ.
ಅದನ್ನು ವೀಕ್ಷಿಸಿದ ಹರೀಶ್ ಶಿವರಾಮಕೃಷ್ಣನ್ “ನಮ್ಮ ಸಂಸ್ಥೆಯಲ್ಲಿ ಇಂಟರ್ನ್ಶಿಪ್ ಮಾಡಲು ನಿಮಗೆ ಸ್ವಾಗತ’ ಎಂಬ ಆಫರ್ ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಇದ್ದ ಕ್ರೆಡ್ನ ಜಾಹೀರಾತು ಭಾರೀ ಮೆಚ್ಚುಗೆ ಪಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ
ಅಂಡಾಶಯದ ಕ್ಯಾನ್ಸರ್ ನಿಂದ 30 ರ ಹರೆಯದಲ್ಲಿ ಖ್ಯಾತ ಫ್ಯಾಷನ್ ಇನ್ ಫ್ಲುಯೆನ್ಸರ್ ನಿಧನ
Lok Sabha Election 2024: ಝಾರ್ಖಂಡ್, ಛತ್ತೀಸ್ಗಢದಲ್ಲಿ ಗೆಲುವು ಯಾರಿಗೆ?
ಗ್ಯಾಂಗ್ ಸ್ಟರ್ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್ ಮನೆಯಿಂದ ಕ್ಯಾಬ್ ಬುಕ್: ಯುವಕ ಅರೆಸ್ಟ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!