ನಟಿ ಮೇಘನಾ ರಾಜ್ ಕುಟುಂಬ ಸದಸ್ಯರಿಗೂ ಕೋವಿಡ್ ಪಾಸಿಟಿವ್
Team Udayavani, Dec 8, 2020, 7:32 PM IST
ಬೆಂಗಳೂರು: ನಟಿ ಮೇಘನಾ ರಾಜ್ ಕುಟುಂಬಕ್ಕೆ ಕೊರೊನಾ ತಗುಲಿದೆ. ಮೇಘನಾರಾಜ್, ಅವರ ಮಗು ಹಾಗೂ ತಂದೆ ಸುಂದರ್ ರಾಜ್, ತಾಯಿ ಪ್ರಮೀಳಾ ಜೋಷಾಯ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಮೇಘನಾ ರಾಜ್, ನಾನು, ನನ್ನ ತಂದೆ, ತಾಯಿ, ನನ್ನ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ.
ನಮ್ಮ ಸಂಪರ್ಕಕ್ಕೆ ಬಂದವರಿಗೆಲ್ಲಾ ಈ ಬಗ್ಗೆ ಮಾಹಿತಿ ನೀಡಿ ಕೊರೊನಾ ಟೆಸ್ಟ್ಗೆ ಒಳಗಾಗಲು ಹೇಳಿದ್ದೇವೆ. ನನ್ನ ಹಾಗೂ ಚಿರಂಜೀವಿ ಅಭಿಮಾನಿಗಳು ಹೆದರುವ ಅಗತ್ಯವಿಲ್ಲ, ನಾವು ಆರಾಮಾಗಿದ್ದೇವೆ. ಜ್ಯೂನಿಯರ್ ಚಿರು ಕೂಡ ಆರಾಮಾಗಿ¨ªಾನೆ. ನಾವು ಕೊರೊನಾ ವಿರುದ್ಧ ಗೆದ್ದು ಬರುತ್ತೇವೆ’ ಎಂದಿದ್ದಾರೆ.
— MEGHANA RAJ SARJA (@meghanasraj) December 8, 2020