ಸರ್ವಜ್ಞ ಪೀಠವೇರಿದ ಅದಮಾರು ಈಶಪ್ರಿಯ ತೀರ್ಥರು

Team Udayavani, Jan 18, 2020, 8:43 AM IST

ಉಡುಪಿ: ಅದಮಾರು ಮಠದ ಈಶಪ್ರಿಯ ತೀರ್ಥರು ಉಡುಪಿ ಶ್ರೀ ಕೃಷ್ಣಮಠದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಅದಮಾರು ಪರ್ಯಾಯ ಆರಂಭವಾಯಿತು. ಶನಿವಾರ ಮುಂಜಾನೆ 5.57ರ ಸಮಯದಲ್ಲಿ ಈಶಪ್ರಿಯ ತೀರ್ಥರ ಪ್ರಥಮ ಪರ್ಯಾಯ ಆರಂಭವಾಯಿತು.

ಸಂಪ್ರದಾಯದಂತೆ ಮೆರವಣಿಗೆಯ ಮೂಲಕ ಕೃಷ್ಣಮಠ ಪ್ರವೇಶಿಸಿದ ಅದಮಾರು ಶ್ರೀಗಳು ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ ಪಡೆದರು. ನಂತರ ಚಂದ್ರ ಮೌಳೇಶ್ವರ ಮತ್ತು ಅನಂತೇಶ್ವರ ದೇವರ ದರ್ಶನ ಮಾಡಿದರು.

ಬೆಳಿಗ್ಗೆ ಸುಮಾರು 5.30ರ ಸಮಯಕ್ಕೆ ಅದಮಾರು ಈಶಪ್ರಿಯ ತೀರ್ಥರು ಕೃಷ್ಣಮಠ ಪ್ರವೇಶಿಸಿದರು. ನಂತರ 5.57ರ ಶುಭ ಮುಹೂರ್ತದಲ್ಲಿ ಸಂಪ್ರದಾಯದಂತೆ ಅಕ್ಷಯ ಪಾತ್ರೆ, ಸಟ್ಟುಗ ಮತ್ತು ಗರ್ಭಗುಡಿಯ ಕೀಲಿಕೈ ಪಡೆದು ಸರ್ವಜ್ಞ ಪೀಠಾರೋಹಣ ಮಾಡಿದರು. ಇದರೊಂದಿಗೆ ಅದಮಾರು ಶ್ರೀಗಳ ಪ್ರಥಮ ಪರ್ಯಾಯ ಆರಂಭವಾಯಿತು.

ವೈಭವದ ಮೆರವಣಿಗೆ

ರಾತ್ರಿ ಸುಮಾರು 1.15ಕ್ಕೆ ಪರ್ಯಾಯ ಪರಂಪರೆಯಂತೆ ಉಡುಪಿ ಸಮೀಪದ ಕಾಪು ದಂಡತೀರ್ಥದಲ್ಲಿ ಸ್ನಾನ ಮಾಡಿ ದೇವರ ಪೂಜೆ ನಡೆಸಿ ನಂತರ ಉಡುಪಿ ಜೋಡುಕಟ್ಟೆಯ ಮಂಟಪಕ್ಕೆ ಆಗಮಿಸಿದರು. ಎರಡು ಗಂಟೆಯ ವೇಳೆಗೆ ವೈಭವದ ಪರ್ಯಾಯ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮೆರವಣಿಗೆಯಲ್ಲಿ ಪೌರಾಣಿಕ, ಐತಿಹಾಸಿಕ ಸಂದೇಶಗಳನ್ನು ಸಾರುವ ಟ್ಯಾಬ್ಲೋಗಳನ್ನು ಗಮನ ಸೆಳೆದವು. ಭಜನಾ ಮಂಡಳಿಗಳು, ವೇದಘೋಷ, ಲಕ್ಷ್ಮೀ ಶೋಭಾನೆ, ಪೂರ್ಣಕುಂಭ, ಬಿರುದಾವಳಿ, ಗೊಂಬೆ ತಂಡಗಳು, ಚೆಂಡೆ ಬಳಗ, ಪಂಚವಾದ್ಯ, ಕೊಂಬು ವಾದನ ತಂಡ, ಸ್ಯಾಕ್ಸೋಫೋನ್, ಕೋಲಾಟ, ತಮಟೆ, ನಗಾರಿ ತಂಡಗಳು ಮೆರವಣಿಗೆಯಲ್ಲಿ ಗಮನಸೆಳೆದವು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉಡುಪಿ: ಶ್ರೀಕೃಷ್ಣ ನಗರಿಯಲ್ಲಿ ಸಹಸ್ರ ಭಕ್ತರ ಸಮ್ಮುಖ ಧಾರ್ಮಿಕ, ಸಾಂಸ್ಕೃತಿಕ, ವೈಭವಗಳ ಮೂಲಕ ಗೌಜಿ ಗದ್ದಲಗಳಿಂದ ನಡೆದ ಅದಮಾರು ಪರ್ಯಾಯೋತ್ಸವ ಮುಕ್ತಾಯದ ಬಳಿಕ...

  • ಅದಮಾರು ಹಿರಿಯ ಶ್ರೀಗಳಿಂದ ಗುರು ಪರಂಪರೆ ಅನುಸರಣೆ ಮೊದಲು ತಾನು ಕುಳಿತು ಶಿಷ್ಯನಿಗೆ ಪಟ್ಟ ಹಸ್ತಾಂತರ ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೊಮ್ಮೆ...

  • ಉಡುಪಿ: ಉತ್ತಮ ಕೆಲಸ ವಾಗಬೇಕಾದರೆ, ಸಮಾಜ ಸುಭಿಕ್ಷೆ ಯಾಗಬೇಕಾದರೆ ಪ್ರತಿಯೊಬ್ಬರಲ್ಲೂ ಸತ್‌ ಚಿಂತನೆ ಸದಾ ಜಾಗೃತಗೊಂಡಿರಬೇಕು ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ...

  • ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಉತ್ಸವದಲ್ಲಿ ಅದಮಾರು ಮಠದ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ಶನಿವಾರ ಮುಂಜಾವ...

  • ಉಡುಪಿ: ಅದಮಾರು ಪರ್ಯಾಯೋತ್ಸವದ ಮೊದಲ ಅನ್ನಪ್ರಸಾದ ವಿತರಣೆ ಶನಿವಾರ ಮಧ್ಯಾಹ್ನ ಶ್ರೀಕೃಷ್ಣ ಮಠದಲ್ಲಿ ನಡೆಯಿತು. ಮಧ್ವಾಂಗಣ, ಶ್ರೀಕೃಷ್ಣ ಮಠ, ಪಾರ್ಕಿಂಗ್‌ ಏರಿಯಾದ...

ಹೊಸ ಸೇರ್ಪಡೆ